Vairal Video; ಕ್ರಿಕೆಟ್ ನಲ್ಲಿ ಈ ವಿಕೆಟ್ ಆಗಿದೆ ಒಗಟು! ನೀವಾದರೂ ಈ ಒಗಟು ಬಿಡಿಸಿ ಡೌಟ್ ಕ್ಲಿಯರ್ ಮಾಡ್ತೀರಾ?

ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಇರುವ ಮಹತ್ವ ಬೇರೆ ಯಾವ ಆಟಕ್ಕೂ ಇಲ್ಲ. ಉಳಿದೆಲ್ಲ ಆಟಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನೋ ತರ ಇವೆ. ಇಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಕ್ರಿಕೆಟ್ ಆಟವನ್ನು ಪ್ರೀತಿಸುತ್ತಾರೆ ಮತ್ತು ಗುರುತಿಸುತ್ತಾರೆ. ಈ ಆಟಿನ ಜ್ಞಾನಿಗಳಂತೂ ಹೆಜ್ಜೆ ಹೆಜ್ಜೆಗೆ ಸಿಗುತ್ತಾರೆ. ಇವರ ಕಡೆಯಿಂದ ಪ್ರಸ್ತುತ ಒಗಟಿಗೆ ಉತ್ತರ ಬೇಕಾಗಿದೆ.

ಕ್ರಿಕೆಟ್ ನಲ್ಲಿ ಕೆಲವೊಮ್ಮೆ ತೀರ ವಿಚಿತ್ರ ಘಟನೆಗಳು ಜರಗುತ್ತವೆ. ಅಂತ ಘಟನೆಗಳಿಗೆ ಯಾವ ರೀತಿ ನಿರ್ಣಯವನ್ನು ಕೊಡಬೇಕೆಂದು ತಿಳಿಯದೆ ಅಂಪಾಯರ್ಸ್ ಗಳು ಸಹ ತುಂಬಾ ಗಲಿಬಿಲಿಗೊಳ್ಳುತ್ತಾರೆ. ಅಂಥ ಸಮಯದಲ್ಲಿ ನಿರ್ಣಯ ತೆಗೆದುಕೊಳ್ಳಲು ತುಂಬಾ ಸಮಯವೂ ಸಹ ಖರ್ಚಾಗುತ್ತದೆ. ಈಗ ನಿಮಗಾಗಿ ತಂದಿರುವ ಈ ವಿಡಿಯೋದಲ್ಲಿ ಇದೇ ರೀತಿಯ ಒಂದು ಒಗಟಿದೆ. ಇದಕ್ಕೆ ನೀವು ಉತ್ತರ ಹೇಳಬೇಕಾಗಿದೆ.

ಮೊದಲು ಈ ವಿಡಿಯೋ ನೋಡಿ…

 

View this post on Instagram

 

A post shared by cricket status (@asli_cricket)

ಒಗಟಿನಿಂದ ಕೂಡಿದ ಕ್ರಿಕೆಟ್ ನ ಪ್ರಸ್ತುತ ಈ ವಿಡಿಯೋದಲ್ಲಿ ಲೆಫ್ಟ್ ಹ್ಯಾಂಡ್ ಬ್ಯಾಟ್ಸ್ಮನ್ ಪುಲ್ ಷಾಟ್ ಹೊಡೆಯುವ ಪ್ರಯತ್ನ ಮಾಡಿದ್ದಾನೆ. ಈ ಪ್ರಯತ್ನದಲ್ಲಿ ಬ್ಯಾಟ್ಸ್ಮನ್ ಯಶಸ್ವಿಯಾಗಿದ್ದಾನೆ. ಬಾಲ್ ಬ್ಯಾಟಿಗೆ ಸಂಪರ್ಕವಾಗಿ ಲೆಗ್ ಸೈಡ್ ದತ್ತ ಹೋಗುತ್ತಿದೆ. ಆದರೆ ತಲೆ ಗಿರ್ರ ಎನ್ನುವ ವಿಷಯ ಏನೆಂದರೆ, ಸ್ಟಂಪ್ ಮೇಲಿನ ಬೇಲ್ಸ್ ಗಳು ತನ್ನಂತಾನೆ ಕೆಳಗೆ ಬಿದ್ದಿವೆ. ಹಾಗೂ ಸ್ಟಂಪಿನಲ್ಲಿರುವ ರೆಡ್ ಲೈಟ್ ಆನ್ ಆಗಿವೆ. ಏನಿದು ಚಮತ್ಕಾರ ಎಂಬುದು ಮಾತ್ರ ತಿಳಿದು ಬರುತ್ತಿಲ್ಲ. ಮಿತ್ರರೇ ಇದಕ್ಕೆ ನಿಮ್ಮ ಹತ್ತಿರ ಉತ್ತರ ಏನಾದರೂ ಇದೆಯೇ? ಈ ಒಗಟನ್ನು ಬಿಡಿಸಲು ನಿಮ್ಮಿಂದ ಸಾಧ್ಯವೇ? ಎಂದು ಅಪೇಕ್ಷಿಸುತ್ತಿದ್ದೇವೆ. ದಯವಿಟ್ಟು ಹೇಳಿ.