Articles

Video! ಅಮ್ಮಾ, ನನಗೂ ಸ್ವಲ್ಪ ಕೊಡಮ್ಮಾ?ನನ್ನ ಬಿಟ್ಟು ಒಬ್ಬಳೇ ತಿನ್ನಬೇಡ. ನನಗ್ಗೊತ್ತು ನೀನು ಏನೋ ತಿನ್ನುತ್ತಿರುವೆ.

ಈಗಿನ ಮಕ್ಕಳು ತುಂಬಾ ಜಾಣವಾಗಿವೆ. ಇದರ ಉದಾಹರಣೆ ನಾವು ಮೇಲಿಂದಮೇಲೆ ನೈಜವಾಗಿ ಮತ್ತು ವೈರಲ್ ಆಗುವ ಮಕ್ಕಳ ವಿಡಿಯೋಗಳಲ್ಲಿ ಎಷ್ಟೋ ಸಲ ನೋಡಿದ್ದೇವೆ. ಇದೇ ರೀತಿಯ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ತಾಯಿಯು ಪುಟ್ಟ ಮಗುವಿಗೆ ತನ್ನ ಕಂಕುಳಲ್ಲಿ ಎತ್ತಿಕೊಂಡು ಕುಳಿತು ಇನ್ನೊಂದು ಕೈಯಿಂದ ಕಲ್ಲಂಗಡಿಯನ್ನಿಡಿದು ಮಗು ಅತ್ತಿತ್ತ ನೋಡಿದಾಗ ತಟ್ಟನೆ ತಿನ್ನುತ್ತಿದ್ದಾಳೆ. ಇದು ಮಗುವಿಗೆ ಗೊತ್ತಾಗಿದೆ. ತನ್ನ ತಾಯಿ ತನ್ನನ್ನು ಬಿಟ್ಟು ಏನೋ ಒಂದನ್ನು ತಿನ್ನುತ್ತಿದ್ದಾಳೆ ಮತ್ತು ನನಗೆ ಕೊಡುತ್ತಿಲ್ಲ ಎಂಬ ಭಾವನೆ ಮಗುವಿನ ಮನಸ್ಸಿನಲ್ಲಿ ಮೂಡಿದೆ. ಹೀಗಾಗಿ ತಾಯಿಯ ಮೇಲೆ ಮಗು ತನ್ನ ತೀಕ್ಷ್ಣವಾದ ದೃಷ್ಟಿಯನ್ನು ನೆಟ್ಟಿದೆ. ತನ್ನ ತಾಯಿ ತನ್ನನ್ನು ಬಿಟ್ಟು ಏನಾದರೂ ತಿನ್ನುತ್ತಿದ್ದಾಳೆ ಎಂದು ಮಗುವಿಗೆ ಸಂಪೂರ್ಣವಾಗಿ ಖಾತ್ರಿಯಾಗಿದೆ. ಈ ಆಟ ತಾಯಿಗೆ ತುಂಟಾಟವಾದರೆ ಮಗುವಿಗೆ ತುಂಬಾ ಸೀರಿಯಸ್ ಆಗಿದೆ. ಮುಗ್ಧ ಮಗುವಿನ ಮುಖದಲ್ಲಿ ಅರಳುತ್ತಿರುವ ನಿರಾಶೆಯ ಭಾವನೆ ಇಲ್ಲಿ ಸ್ಪಷ್ಟವಾಗಿ ಮುಖದಿಂದ ಹೊರಹೊಮ್ಮುತ್ತಿದೆ. ನಿಜಕ್ಕೂ ಮಕ್ಕಳು ಎಷ್ಟೊಂದು ಚಾಣಾಕ್ಷವಾಗಿರುತ್ತವೆ ಎಂಬುದು ತಿಳಿದು ಬರುತ್ತದೆ. ಮಗುವಿನ ಈ ವಿಡಿಯೋ ನೋಡಲು ತುಂಬಾ ಮಜವಾಗಿದೆ ಎನ್ನಬಹುದು.

 

View this post on Instagram

 

A post shared by Hatepritidubey (@hatepriti2020)

ಪ್ರಸ್ತುತ ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಗುವಿನ ಮುಗ್ಧ ಮನಸ್ಸು ಎಷ್ಟೊಂದು ಮೃದುವಾಗಿರುತ್ತದೆ ಎಂಬುದರ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Leave a Comment

Your email address will not be published. Required fields are marked *