Articles

Video; ಉದ್ಧವರಿಂದ ಶಿವಸೇನೆಯನ್ನೇ ಕಸಿದುಕೊಂಡು ಮುಖ್ಯಮಂತ್ರಿಯಾದ ನಂತರ ಏಕನಾಥ್ ರ ಪತ್ನಿ ಮಾಡಿದರು ಯೂನಿಕ್ ಸೆಲೆಬ್ರೇಶನ್!

ದೇಶದ ರಾಜಕಾರಣದಲ್ಲಿ ಸುಮಾರು 12 ದಿನಗಳವರೆಗೆ ಮಹಾರಾಷ್ಟ್ರದ ರಾಜಕಾರಣ ಭಾರಿ ಸದ್ದು ಮಾಡಿತ್ತು. ದೇಶದಲ್ಲಿಯೇ ಯಾವುದೇ ಪಕ್ಷದಲ್ಲಿ ನಡೆದ ದೊಡ್ಡ ಬಂಡಾಯ ಇದಾಗಿತ್ತು. ಸರ್ಕಾರದಲ್ಲಿರುವ ಪಕ್ಷದಿಂದಲೇ ಈ ರೀತಿಯ ಬಂಡಾಯ ಇದಕ್ಕೂ ಮೊದಲು ಕಂಡುಬಂದಿರಲಿಲ್ಲ.

ಶಿವಸೇನೆಯಲ್ಲಿ ಬಾಹುಬಲಿ ನಾಯಕ ಎಕನಾಥ್ ಶಿಂದೆ ಅವರು ತಮ್ಮ ನಾಯಕ ಹಾಗೂ ಮುಖ್ಯಮಂತ್ರಿಯಾದ ಉದ್ಧವ್ ಠಾಕ್ರೆ ವಿರುದ್ಧವೇ ಷಡ್ಡು ಹೊಡೆದ ನಿಂತರು. ಪಕ್ಷದ ವಿಚಾರಕ್ಕೆ ವಿರುದ್ಧವಾಗಿ ನಡೆಯಲು ಸಾಧ್ಯವಿಲ್ಲ ಎಂಬ ಒಂದೇ ವಿಚಾರವನ್ನು ಮುಂದಿಟ್ಟು ದಿವಂಗತ ಬಾಳಾಸಾಹೇಬ್ ಠಾಕ್ರೆ ಅವರ ಹಿಂದುತ್ವವನ್ನು ನಾವೆಂದು ಕೈ ಬಿಡಲು ಸಾಧ್ಯವಿಲ್ಲವೆಂಬ ವಿಚಾರಕ್ಕೆ ಕಟ್ಟು ಬಿದ್ದು ದೊಡ್ಡ ಬಂಡಾಯಕ್ಕೆ ಕೈಹಾಕಿದರು. ಹತ್ತು ಹನ್ನೆರಡು ದಿನಗಳ ಹೋರಾಟದ ನಂತರ ಕೊನೆಗೂ ಏಕನಾಥ್ ಶಿಂಧೆ ಅವರಿಗೆ ಇದರಲ್ಲಿ ಜಯ ಸಿಕ್ಕಿತು. ಹಾಗೂ ಬಿಜೆಪಿಯವರ ಜೊತೆಗೂಡಿ ಸ್ವತಃ ಮುಖ್ಯಮಂತ್ರಿಗಳು ಆದರು. ಭಾರತೀಯ ಜನತಾ ಪಾರ್ಟಿ ಕೊನೆ ಕ್ಷಣದಲ್ಲಿ ಹಠಾತ್ ಏಕನಾಥ್ ಶಿಂದೆ ಅವರಿಗೆ ಮುಖ್ಯಮಂತ್ರಿ ಎಂದು ಘೋಷಿಸಿ ಮಹಾರಾಷ್ಟ್ರದ ಜನತೆಗೆ ಶಾಕ್ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಏಕನಾಥ್ ಶಿಂದೆ ಅವರ ಪತ್ನಿ ಲತಾ ಶಿಂಧೆ ಅವರು ತಮ್ಮ ಪತಿರಾಯರು ಮಹಾರಾಷ್ಟ್ರದ ಮುಖ್ಯಮಂತ್ರಿ ಆದ ನಂತರ ತುಂಬಾ ಯೂನಿಕ್ ಸ್ಟೈಲ್ ನಲ್ಲಿ ಸೆಲೆಬ್ರೇಶನ್ ಮಾಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರು ಸೆಲೆಬ್ರೆಶನ್ ಮಾಡಿದ ವಿಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಿದೆ.

ನೋಡಿ ಈ ವಿಡಿಯೋ…

Leave a Comment

Your email address will not be published. Required fields are marked *