Articles

Video :ಗೋಳಾಡಿ ಅಳುತ್ತಿದ್ದ ಮಗುವನ್ನು ಸಮಾಧಾನ ಪಡಿಸಲು ಈ ತಂದೆ ಉಪಯೋಗಿಸಿದ ಹೊಸ ಟೆಕ್ನಿಕ್, ವೀಡಿಯೋ ನೋಡಿ!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವೀಡಿಯೋದಲ್ಲಿ ತಂದೆ ತನ್ನ ಮಗುವನ್ನು ಯಾವ ರೀತಿಯಾಗಿ ಪಾಲನೆ ಮಾಡುತ್ತಾನೆ ಎಂಬುದು ತೋರಿಸಲಾಗಿದೆ. ತಂದೆ ಮತ್ತು ಮಗುವಿನ ನಡುವಿನ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ವೀಡಿಯೋದಲ್ಲಿ, ಒಬ್ಬ ತಂದೆ ತನ್ನ ಮಗುವನ್ನು ಆಡಿಸುತ್ತಿರುತ್ತಾನೆ ಅಷ್ಟರಲ್ಲಿ ಆ ಮಗುವಿಗೆ ಏನಾಯ್ತು ಗೊತ್ತಿಲ್ಲ ಇದ್ದಕ್ಕಿದ್ದಂತೆ ಅದು ಜೋರಾಗಿ ಅಳಲು ಶುರು ಮಾಡುತ್ತದೆ. ಇದನ್ನು ಕಂಡು ತಂದೆ ಎಷ್ಟೇ ಸಮಾಧಾನ ಪಡಿಸಲು ಪ್ರಯತ್ನಿಸಿದರು ಸಹ ಮಗು ಅಳುವದನ್ನೇ ನಿಲ್ಲಿಸುವದಿಲ್ಲ. ಆಗ ತಂದೆಯು ಹೊಸದಾದ ಒಂದು ನಿಂಜಾ ಟೆಕ್ನಿಕ್ ಉಪಯೋಗ ಮಾಡುತ್ತಾನೆ. ಅದನ್ನು ನೋಡಿ ಮಗು ಗಾಬರಿಯಿಂದ ಗಪ್ಪಾಗಿ ಕೂಡುತ್ತದೆ. ಆತ ಉಪಯೋಗಿಸಿರುವ ಹೊಸ ಟೆಕ್ನಿಕ್ ಏನೆಂದರೆ ಮಗು ಎಷ್ಟು ಜೋರಾಗಿ ಅಳುತ್ತಿತ್ತೋ ಅದಕ್ಕಿಂತ ಹೆಚ್ಚು ಜೋರಾಗಿ ಈತ ಅಳುವ ನಾಟಕ ಮಾಡುತ್ತಾನೆ. ಪಾಪ ಮಗು ತಂದೆ ಇಷ್ಟು ಜೋರಾಗಿ ಏಕೆ ಅಳುತ್ತಿದ್ದಾನೆ ಎಂದು ಗಾಬರಿಗೊಂಡು ಸೆಕೆಂಡ್ ನಲ್ಲಿಯೇ ಅಳುವದನ್ನೇ ಬಿಟ್ಟು ಗಾಬರಿಯಿಂದ ತಂದೆಗೆ ನೋಡಲು ಶುರು ಮಾಡುತ್ತಾನೆ. ಈ ವೀಡಿಯೋ ನೋಡಿದ ಮೇಲೆ ನೀವು ಸಹ ಈ ರೀತಿ ಟೆಕ್ನಿಕ್ ಉಪಯೋಗ ಮಾಡಬಹುದು.

ವೀಡಿಯೋ ನೋಡಿ

 

View this post on Instagram

 

A post shared by Himanshu Dudi (@himanshu_dudi_999)

ಪ್ರಸ್ತುತ ವೀಡಿಯೋ ಇನ್ಸ್ಟಾಗ್ರಾಮ್ ನಲ್ಲಿ himanshu_dudi_999ಎಂಬ ಹೆಸರಿನ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋವನ್ನು ಸುಮಾರು ಒಂದು ಮಿಲಿಯನ್ ಗೂ ಹೆಚ್ಚು ನೆಟ್ಟಿಗರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.

Leave a Comment

Your email address will not be published. Required fields are marked *