Articles

Video; ಚಲಿಸುತ್ತಿರುವ ಮೆಟ್ರೋ ಟ್ರೈನಿನ ಡೋರ್ ಓಪನ್ ಮಾಡಿ ನಿಲ್ಲುವ ಮೊದಲೇ ಗಡಿಬಿಡಿಯಲ್ಲಿ ಜಿಗಿದನು ವ್ಯಕ್ತಿ..!

ಸದ್ಯ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಎಲ್ಲಾ ಕಡೆಗೂ ಮೆಟ್ರೋ ಟ್ರೈನ್ ಗಳು ಓಡಾಡುತ್ತಿವೆ. ಹೆಚ್ಚು ಕಡಿಮೆ ಎಲ್ಲರಿಗೂ ಈ ಟ್ರೈನ್ ಗಳ ವೇಗದ ಬಗ್ಗೆ ಮಾಹಿತಿಯೂ ಇದೆ. ಈ ಟ್ರೈನಿನ ಡೊರ್ ಗಳು ಆಟೋಮೆಟಿಕ್ ಆಗಿಯೇ ಓಪನ್ ಮತ್ತು ಕ್ಲೋಸ್ ಆಗುತ್ತವೆ. ಅದನ್ನು ಯಾರು ಮುಚ್ಚಲು ಅಥವಾ ತೆಗೆಯಲು ಸಾಧ್ಯವಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಮೆಟ್ರೋ ಟ್ರೈನಿನ ಡೋರ್ ಓಪನ್ ಮಾಡಿ ಪ್ಲಾಟ್ ಫಾರ್ಮ್ ಮೇಲೆ ಮೆಟ್ರೋ ಟ್ರೈನ್ ನಿಲ್ಲುವ ಮೊದಲೇ ಜಿಗಿಯುತ್ತಾನೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ನೋಡಲು ಸಿಗುತ್ತಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪ್ರಸ್ತುತ ವ್ಯಕ್ತಿಯು ಅದ್ಹೇಗೆ ಮೆಟ್ರೋ ಟ್ರೈನಿನ ಬಾಗಿಲು ತೆಗೆಯುತ್ತಾನೆ ಗೊತ್ತಿಲ್ಲ. ಈ ವ್ಯಕ್ತಿಯು ಒಟ್ಟಿನಲ್ಲಿ ಸರಳವಾಗಿ ಟ್ರೈನಿನ ಬಾಗಿಲು ಓಪನ್ ಮಾಡುತ್ತಾನೆ. ನಂತರ ಹಿಂದೆ ಮುಂದೆ ವಿಚಾರ ಮಾಡದೆ ಪ್ಲಾಟ್ಫಾರ್ಮ್ ಮೇಲೆ ಜಿಗಿದು ಬಿಡುತ್ತಾನೆ. ಆಗ ಸಹಜವಾಗಿಯೇ ವ್ಯಕ್ತಿಯು ಪ್ಲಾಟ್ಫಾರ್ಮ್ ಮೇಲೆ ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುತ್ತಾನೆ. ಹಾಗೂ ವ್ಯಕ್ತಿ ಪ್ಲಾಟ್ ಫಾರ್ಮ್ ಮೇಲೆ ಬಿದ್ದ ದೃಶ್ಯ ನೋಡಿದರೆ ವ್ಯಕ್ತಿಯ ತಲೆಗೆ ಜೋರಾಗಿ ಪೆಟ್ಟು ಬಿದ್ದಿರಬೇಕೆಂದು ತಿಳಿದು ಬರುತ್ತದೆ.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ನೋಡಿದ ನಂತರ ನೇಟಿಜನ್ಸ್ ಗಳು ವ್ಯಕ್ತಿಯ ಪ್ರತಿ ತಮ್ಮ ಅಸಮಾಧಾನವನ್ನು ವ್ಯಕ್ತ ಮಾಡುತ್ತಿದ್ದಾರೆ. ಹಾಗೆಯೇ ಕೆಲವರು ತಮಾಷೆಯ ರೂಪದಲ್ಲಿಯೂ ಈ ವೀಡಿಯೋವನ್ನು ನೋಡುತ್ತಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ ನಲ್ಲಿ @AwardsDarwin_ ಹೆಸರಿನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

Leave a Comment

Your email address will not be published. Required fields are marked *