Video; ಚಿಕ್ಕಂದಿನಲ್ಲಿ ನನ್ನ ಬ್ಯಾಟಿಂಗ್ ನೋಡಿಲ್ವಾ? ದ್ರಾವಿಡ್ ಪ್ರಶ್ನೆಗೆ ಸೂರ್ಯ ನೀಡಿದ ಉತ್ತರ ಗೆಲ್ಲುತ್ತಿದೆ ಕ್ರಿಕೆಟ್ ರಸಿಕರ ❤️.
ಶ್ರೀಲಂಕಾದ ವಿರುದ್ಧ 3 ನೇ T-20 ಪಂದ್ಯ ಗೆದ್ದು ಭಾರತ ಸರಣಿ ತನ್ನದಾಗಿಸಿಕೊಂಡಿತು. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Sky) ಭರ್ಜರಿ ಶತಕ ಸಿಡಿಸಿ ಭಾರತ ಸಹಜವಾಗಿ ಗೆಲ್ಲುವ ದಾರಿಯನ್ನು ಸುಗಮ ಮಾಡಿದರು. ಶ್ರೀಲಂಕಾದ ಜೊತೆಗಿನ ಸರಣಿಯ ಕೊನೆಯ ಹಾಗೂ ಮೂರನೇ ಪಂದ್ಯದಲ್ಲಿ ಭಾರತ 91 ರನ್ ಗಳ ಅಂತರದಿಂದ ಗೆದ್ದು ಬೀಗಿತು. ಈ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ಕೇವಲ 51 ಬಾಲ್ ಗಳಲ್ಲಿ 112 ರನ್ ಗಳ ಶತಕದ ಆಟವನ್ನು ಆಡಿದರು. ಇದು ಟಿ ಟ್ವೆಂಟಿ ಇಂಟರ್ನ್ಯಾಷನಲ್ ಪಂದ್ಯದಲ್ಲಿ ಸೂರ್ಯಕುಮಾರ ಅವರ 3 ನೇ ಶತಕವಾಗಿದೆ. ಈ ಕೀರ್ತಿಯನ್ನು ಮಾಡಿದ ದಾಖಲೆಯಲ್ಲಿ ಸೂರ್ಯಕುಮಾರ ಯಾದವರು ಐದನೇ ಬ್ಯಾಟ್ಸ್ಮನ್ ಆಗಿದ್ದಾರೆ.
ಪಂದ್ಯದ ಬಳಿಕ ರಾಹುಲ್ ದ್ರಾವಿಡ್ ಅವರು ಸೂರ್ಯ ಕುಮಾರ್ ಯಾದವ್ ಜೊತೆಗೆ ಸಂದರ್ಶನ ನಡೆಸಿದರು. ಇವರಿಬ್ಬರ ಈ ಸಂದರ್ಶನದ ವಿಡಿಯೋವನ್ನು ಬಿಸಿಸಿಐ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಪ್ರಸ್ತುತ ಈ ಇಂಟರ್ವ್ಯೂ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಈ ಸಂದರ್ಶನದಲ್ಲಿ ರಾಹುಲ್ ದ್ರಾವಿಡ್ ಅವರು ತಮಾಷೆಯ ಪ್ರಶ್ನೆಯೊಂದನ್ನು ಕೇಳಿದರು. ಸೂರ್ಯ ಅವರ ಅಬ್ಬರದ ಬ್ಯಾಟಿಂಗ್ ನೋಡಿ ರಾಹುಲ್ ದ್ರಾವಿಡ್ ಅವರು “ನೀನು ಚಿಕ್ಕಂದಿನಲ್ಲಿ ನನ್ನ ಬ್ಯಾಟಿಂಗ್ ನೋಡಿಲ್ವಾ” ಎಂದು ಕೇಳುತ್ತಾರೆ, ಅದಕ್ಕೆ ಸೂರ್ಯ ಅವರು ಥಟ್ಟನೆ “ನಾನು ನಿಮ್ಮ ಬ್ಯಾಟಿಂಗ್ ಸಾಕಷ್ಟು ನೋಡಿದ್ದೇನೆ” ಅಂದಿದ್ದಾರೆ.
ವಿಡಿಯೋ ನೋಡಿ
???????????????????????????????? ????????????’???? ???????????????????????????????????????????? ???????????????? ???????????????????????????? ???????? ???????????????????????? ????
Head Coach Rahul Dravid interviews @surya_14kumar post #TeamIndia’s victory in the #INDvSL T20I series decider ???????????????? – By @ameyatilak
Full Interview ????????https://t.co/nCtp5wi46L pic.twitter.com/F0EfkFPVfb
— BCCI (@BCCI) January 8, 2023
ಒಟ್ಟಿನಲ್ಲಿ ಭಾರತ ಶ್ರೀಲಂಕಾ ವಿರುದ್ಧದ ಮೂರು ಟಿ 20 ಪಂದ್ಯಗಳಲ್ಲಿ 2-1 ಅಂತರದಿಂದ ಗೆದ್ದು ಸರಣಿ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈಗ ನಾಳೆಯಿಂದ ಎರಡು ತಂಡಗಳ ಮಧ್ಯೆ ಏಕದಿನ ಪಂದ್ಯಗಳು ಶುರುವಾಗಲಿವೆ.