Video; ತನ್ನ ಮರಿಗಳ ಜೊತೆಗೆ ಸಂಗಾತಿಗೂ ಸಹ ದೂರ್ತ ನರಿಯಿಂದ ರಕ್ಷಿಸಿಕೊಂಡ ಸೂಪರ್ ಸ್ಟಾರ್ ಬಾತುಕೋಳಿ…
ಪ್ರತಿಯೊಂದು ಪ್ರಾಣಿ-ಪಕ್ಷಿಗಳಿಗೆ ಅನೇಕ ಪ್ರಾಣಿಯಿಂದ ಅಪಾಯ ಇದ್ದೇ ಇರುತ್ತದೆ. ಹೀಗಾಗಿ ಕಾಡಿನಲ್ಲಿ ವಾಸಿಸುವ ಪ್ರಾಣಿಗಳು ಬದುಕುಳಿಯುವ ಸಲುವಾಗಿ ತುಂಬಾ ಸಂಘರ್ಷ ಮಾಡಬೇಕಾಗುತ್ತದೆ. ಇದೇ ರೀತಿಯ ಬಾತುಕೋಳಿಯ ಹೋರಾಟದ ಒಂದು ವಿಡಿಯೋ ನಿಮಗಾಗಿ ಈ ಆರ್ಟಿಕಲ್ ನಲ್ಲಿ ತಂದಿದ್ದೇವೆ.
ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಒಂದು ಚಿಕ್ಕ ನೀರಿನ ಹೊಂಡದಲ್ಲಿ ಬಾತುಕೋಳಿಯು ತನ್ನ ಸಂಗಾತಿ ಮತ್ತು ಮರಿಗಳೊಂದಿಗೆ ಕಂಡುಬರುತ್ತಿದೆ. ಅದೇ ಸಮಯಕ್ಕೆ ದೂರ್ತ ನರಿಯೊಂದು ಬಾತುಕೋಳಿಯ ಮರಿಗಳ ಮೇಲೆ ದೃಷ್ಟಿ ಹಾಕಿ ಅಲ್ಲಿಗೆ ಬಂದಿದೆ. ನರಿಯು ಮರಿಗಳನ್ನು ಹೇಗಾದರೂ ಮಾಡಿ ಹಿಡಿದು ತನ್ನ ಹೊಟ್ಟೆಯ ಹಸಿವನ್ನು ಹಿಂಗಿಸಿಕೊಳ್ಳುವ ಪ್ಲಾನ್ ಮಾಡಿದೆ. ಆದರೆ ಅಲ್ಲಿ ಅಡ್ಡ ನಿಂತಿದ್ದಾಳೆ ಬಾತುಕೋಳಿಯ ತಾಯಿ. ನರಿ ಎಷ್ಟೇ ಪ್ರಯತ್ನ ಮಾಡಿ ಮರಿಗಳನ್ನು ಲಪಟಾಯಿಸಬೇಕೆಂದು ಲಗಾಟೆ ಹಾಕಿದರೂ ಬಾತುಕೋಳಿ ಮಾತ್ರ ಅದರ ಪ್ಲಾನ್ ಮಣ್ಣುಪಾಲು ಮಾಡಿದೆ. ಆದರೂ ನರಿ ಹಾಗೆಯೇ ಪ್ರಯತ್ನ ಮಾಡುತ್ತದೆಯಾದರೂ ಬಾತುಕೋಳಿ ಮಾತ್ರ ನರಿಗೆ ಯಾವುದೇ ರೀತಿಯ ಅವಕಾಶ ನೀಡದೆ ಗಂಡೆದೆಯಿಂದ ಫೇಸ್ ಮಾಡುತ್ತದೆ. ಕೊನೆಗೆ ನರಿ ಬಾತುಕೋಳಿಯ ಮುಂದೆ ತನ್ನ ಯಾವ ಆಟವೂ ನಡೆಯುವುದಿಲ್ಲವೆಂದು ಗೊತ್ತಾದಮೇಲೆ ಅಲ್ಲಿಂದ ಕಾಲ್ಕಿತ್ತಿದೆ. ಇಲ್ಲಿ ಬಾತುಕೋಳಿ ತನ್ನ ಮರಿಗಳ ಮೇಲೆ ಇಟ್ಟಿರುವ ಪ್ರೀತಿ ಮತ್ತು ನರಿಯ ಜೊತೆಗೆ ಹೋರಾಟಕ್ಕಿಳಿದ ಧೈರ್ಯ ಎರಡು ಪ್ರಶಂಸೆಗೆ ಪಾತ್ರವಾಗಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ hersey.dahil16 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದ್ದು 25 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋಗೆ ಲೈಕ್ ಮಾಡಿದ್ದಾರೆ.