Articles

Video; “ರಾ ರಾ ರಕ್ಕಮ್ಮ” ಹಾಡಿಗೆ ಸ್ಟೇಜ್ ನ್ನೇ ಸ್ಟೇಜನ್ನೆ ನಡುಗಿಸಿದ ವಧು; ಸಡನ್ ಆಗಿ ಗೆಳತಿಯರ ಜೊತೆ ಹೊಡೆದಳು ಸಖತ್ ಡಾನ್ಸ್!

ಮದುವೆಯಲ್ಲಿ ಮಿತ್ರರು, ನೆಂಟರು ಕುಣಿಯುವುದು ಸಾಮಾನ್ಯ. ಆದರೆ ಇತ್ತಿತ್ತಲಾಗಿ ತಮ್ಮ ಮದುವೆಯಲ್ಲಿ ಮದುಮಕ್ಕಳೆ ತುಂಬಾ ಖತರ್ನಾಕ್ ಡಾನ್ಸ್ ಹೊಡೆಯುತ್ತಿದ್ದಾರೆ. ಅದರಲ್ಲೂ ವಧು ಡಾನ್ಸ್ ಮಾಡಿದರೆ ಮುಗಿದೇ ಹೋಯಿತು ವಿಡಿಯೋ ವೈರಲ್ ಆಗುವದು ಗ್ಯಾರಂಟಿ.

ಸದ್ಯ ಕಿಚ್ಚ ಸುದೀಪ್ ಮತ್ತು ಜಾಕಲಿನ್ ಅವರ ಸೂಪರ್ ಹಿಟ್ ಚಿತ್ರದ ರಾ ರಾ ರಕ್ಕಮ್ಮ ಹಾಡಿಗೆ ಮದುಮಗಳು ಮಾಡಿದ ಡಾನ್ಸ್ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಹಾಡಿನಲ್ಲಿ ಮದುಮಗಳು ತನ್ನ ಭಾವಿ ಪತಿಯ ಮುಂದೆ ಸಖತ್ತಾಗಿ ಸೊಂಟ ಬಳುಕಿಸಿದ್ದಾಳೆ, ಅದು ತನ್ನ ಹೆಂಗೆಳೆಯರ ಜೊತೆಗೆ.

ವಿಡಿಯೋದ ಪ್ರಾರಂಭದಲ್ಲಿ ಸ್ಟೇಜ್ ಮೇಲೆ ಕುಳಿತ ವರನ ಗಲ್ಲಿಗೆ ವಧು ಪ್ರೀತಿಯಿಂದ ಕೈ ಸವರುತ್ತಾಳೆ. ನಂತರ ಒಮ್ಮೆಲೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ವಧು ಮತ್ತು ಆಕೆಯ ಗೆಳತಿಯರು ಡಾನ್ಸ್ ಹೊಡೆಯಲು ಶುರು ಮಾಡುತ್ತಾರೆ.

ನೋಡಿ ಈ ವಿಡಿಯೋ…

ಪ್ರಸ್ತುತ ಡಾನ್ಸ್ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ಕಾರಣ ಈ ವಿಡಿಯೋಗೆ 2.7 ಮಿಲಿಯನ್ ಜನರು ಲೈಕ್ ಮಾಡಿದ್ದಾರೆ ಹಾಗೂ ಈ ವಿಡಿಯೋ 29.6 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಈ ದಾಖಲೆಯ ವಿಡಿಯೋವನ್ನು ಇನ್ಸ್ತಾಗ್ರಾಮ್ ನಲ್ಲಿ vrindharjun ಹೆಸರಿನ ಐದಿಯಿಂದ ಶೇರ್ ಮಾಡಲಾಗಿದೆ.

Leave a Comment

Your email address will not be published. Required fields are marked *