Video; ವ್ಯಕ್ತಿಯ ಸುಂದರ ಹಸ್ತಾಕ್ಷರ ನೆಟ್ಟಿಗರಿಗೆ ಮಾಡಿತು ಮೋಡಿ; ಇದನ್ನು ನೋಡಿ ಕಂಪ್ಯೂಟರ್ ಸಹ ನಾಚಬಲ್ಲದು.

ಸುಂದರ ಹಸ್ತಾಕ್ಷರ ಸವಿಯಾದ ಊಟವಿದ್ದಂತೆ ಎನ್ನುತ್ತಾರೆ. ಪ್ರತಿಯೊಂದು ವಿದ್ಯಾರ್ಥಿಗೆ ತನ್ನ ಹಸ್ತಾಕ್ಷರ ತುಂಬಾ ಮಹತ್ವದ್ದಾಗಿರುತ್ತದೆ. ನೀವು ಬರೆಯುವ ಹಸ್ತಾಕ್ಷರ ಒಂದು ವೇಳೆ ಸುಂದರವಾಗಿದ್ದರೆ ನಿಮ್ಮ ಟೀಚರ್ ಮೇಲೆ ಅದರ ಒಳ್ಳೆಯ ಪರಿಣಾಮ ಬೀರುವದು. ಹೀಗಾಗಿಯೇ ಟೀಚರ್ಸ್ ಗಳೊಂದಿಗೆ ಪೋಷಕರೂ ಸಹ ಮಕ್ಕಳ ಕೈಬರಹ ಸುಧಾರಿಸಲು ತುಂಬಾ ಯತ್ನಿಸುತ್ತಾರೆ. ಸದ್ಯ ಸುಂದರ ಕೈಬರಹದ ವಿಡಿಯೋ ಕಂಟೆಂಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ಕೈಯಿಂದ ಬರೆಯುವ ಅಕ್ಷರಗಳನ್ನು ನೋಡಿದಾಗ ವೀಕ್ಷಿಸುವ ಮನುಷ್ಯ ದಂಗಾಗಿ ಬಿಡುತ್ತಾನೆ. ಅಷ್ಟೊಂದು ಸುಂದರ ಮತ್ತು ಆಕರ್ಷಣೆಗೆ ಒಳಪಟ್ಟಿದೆ ಈ ಹಸ್ತಾಕ್ಷರ. ಈ ಅಕ್ಷರಗಳನ್ನು ನೋಡಿದಾಗ ಕಂಪ್ಯೂಟರ್ ಸಹ ನಾಚಿಕೊಳ್ಳುವದು ಎನಿಸುತ್ತದೆ. ಸದ್ಯದ ಸಮಯದಲ್ಲಂತೂ ದೊಡ್ಡವರು ಹೆಚ್ಚು ಕಡಿಮೆ ಬರೆಯುವದನ್ನೇ ಮರೆತಿದ್ದಾರೆ. ಇಂಥದ್ದರಲ್ಲಿ ಸುಂದರ ಹಸ್ತಾಕ್ಷರಗಳನ್ನು ನೋಡಿದಾಗ ಮನಸ್ಸು ಪುಲಕಿತಗೊಳ್ಳುವದು.

ನೋಡಿ ಈ ಸುಂದರ ವಿಡಿಯೋ…

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಒಂದು ನೋಟ್ ಬುಕ್ ಮೇಲೆ ವ್ಯಕ್ತಿಯೊಬ್ಬ ಸುಂದರ ಹಸ್ತಾಕ್ಷರಗಳನ್ನು ತೆಗೆದು ಬರೆಯುತ್ತಿದ್ದಾನೆ. ಆತ ಬರೆಯುವ ಪೆನ್ನಿನಿಂದ ಅಕ್ಷರಗಳಲ್ಲ ಮುತ್ತುಗಳು ಮೂಡುತ್ತಿವೆ ಎಂಬಂತೆ ಭಾಸವಾಗುತ್ತಿದೆ. ಅಕ್ಷರಗಳನ್ನು ಬರೆದ ನಂತರ ನೋಡಿದ ಮೇಲೆ ಮೂಡಿದ ಅಕ್ಷರಗಳು ಕೈಯಿಂದ ಬರೆಯಲಾಗಿದೆಯೇ ಅಥವಾ ಕಂಪ್ಯೂಟರ್ ಮೂಲಕ ಪ್ರಿಂಟ್ ಮಾಡಲಾಗಿದೆ ಎಂಬುದನ್ನು ತಿಳಿದುಕೊಳ್ಳಲು ಕಷ್ಟವಾಗುತ್ತದೆ. ಆ ಅಕ್ಷರಗಳನ್ನು ನೋಡಿ ನಿಜಕ್ಕೂ ಆಶ್ಚರ್ಯ ಉಂಟಾಗದೇ ಇರದು.

ವೀಡಿಯೋ ನೋಡಿ

ಮುದ್ದಾದ ಕೈ ಬರಹದ ಈ ವಿಡಿಯೋವನ್ನು ಟ್ವಿಟರ್ ನಲ್ಲಿ @TansuYegen ಹೆಸರಿನಿಂದ ಶೇರ್ ಮಾಡಲಾಗಿದೆ. ಈ ಸುಂದರ ವಿಡಿಯೋವನ್ನು ಇಲ್ಲಿಯವರೆಗೆ 12 ಲಕ್ಷಕ್ಕೂ ಹೆಚ್ಚು ಜನರು ನೋಡಿ ಆನಂದಿಸಿದ್ದಾರೆ. ಅನೇಕ ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡುತ್ತಿದ್ದಾರೆ. ಒಬ್ಬನಂತೂ ನನ್ನ ಜೀವನದಲ್ಲಿಯೇ ಈ ರೀತಿಯ ಕೈಬರಹವನ್ನು ನೋಡಿಯೇ ಇಲ್ಲ ಎಂದಿದ್ದಾನೆ. ಇನ್ನೊಬ್ಬ ಈ ವಿದ್ಯಾರ್ಥಿಯ ಕೈಯಲ್ಲಿ ಏನಾದರೂ ಒಂದು ಜಾದೂ ಇದೆ ಎಂದಿದ್ದಾನೆ.