Video: ಸಹೋದರಿಯ ವಿದಾಯದ ಸಮಯದಲ್ಲಿಯ ದುಃಖದಲ್ಲಿ ಬಂದು ಪಾಲ್ಗೊಂಡ ನಾಯಿ, ಪ್ರಾಣಿಗಳಿಗೂ ಭಾವನೆಗಳಿರುತ್ತವೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ!!

ಸೋಶಿಯಲ್ ಮೀಡಿಯಾದಲ್ಲಿ ನಿಮಗೆ ಎಲ್ಲಾ ಸಂಬಂಧಗಳಿಗೆ ಸಂಬಂಧಿಸಿದ ವಿಡಿಯೋಗಳು ನೋಡಲು ಸಿಗುತ್ತವೆ. ಒಮ್ಮೆ ತಾಯಿ-ಮಗಳ, ತಂದೆ-ಮಗನ, ಸಹೋದರ-ಸಹೋದರಿಯರ, ಪತಿ-ಪತ್ನಿಯ, ತಂದೆ-ಮಗಳ ಅಷ್ಟೇ ಏಕೆ ಗುರು–ಶಿಷ್ಯರ ವಿಡಿಯೋಗಳು ಸಹ ನೋಡಲು ಸಿಗುತ್ತವೆ.

ಈ ರೀತಿ ಸಂಬಂಧಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೋಡಲು ನೇಟಿಜನ್ಸ್ ಗಳು ತುಂಬಾ ಇಷ್ಟ ಪಡುತ್ತಾರೆ. ಅದಕ್ಕಾಗಿಯೇ ಈ ರೀತಿಯ ಕಂಟೆಂಟ್ ಗಳು ತುಂಬಾ ವೈರಲ್ ಆಗುತ್ತವೆ. ಈಗ ಇದೇ ರೀತಿಯ ಒಂದು ವಿಡಿಯೋ ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ಸಾಕು ಪ್ರಾಣಿ ನಾಯಿ ಮತ್ತು ಯುವತಿಯ ನಡುವಿನ ವೀಡಿಯೋ ಇದೆ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ನೀವು ನೋಡಬಹುದು, ನಾಯಿ ಸಾಕಿದ ಸಹೋದರಿಯ ಮದುವೆಯ ಸಮಾರಂಭದಲ್ಲಿ ನಾಯಿ ಸಹ ಪಾಲ್ಗೊಂಡಿದೆ. ಯುವತಿಯ ಮದುವೆಯಾದ ನಂತರ ಅವಳನ್ನು ಗಂಡನ ಮನೆಗೆ ಕಳುಹಿಸಲು ಮನೆಯ ಎಲ್ಲ ಸದಸ್ಯರು ಅಳುತ್ತಾ ಅವಳನ್ನು ವಿದಾಯ ಹೇಳುತ್ತಿದ್ದರು. ಅದನ್ನು ದೂರಿಂದಲೇ ನೋಡಿದ ನಾಯಿ ತನ್ನನ್ನು ಸಾಕಿದ ಸಹೋದರಿ ಬಿಟ್ಟು ಹೋಗುತ್ತಿದ್ದಾಳೆ ಅಂತ ಗೊತ್ತಾದ ಕೂಡಲೇ ಅದು ಅಲ್ಲಿಂದ ಓಡೋಡಿ ಬಂದು ಆ ಯುವತಿಯ ಮುಂದೆ ಬಂದು ನಿಂತು ಕಣ್ಣೀರು ಹಾಕಲು ಶುರು ಮಾಡುತ್ತೆ. ಅದನ್ನು ಕಂಡು ಯುವತಿಯು ಸಹ ತನ್ನನ್ನು ನಾಯಿ ಎಷ್ಟೊಂದು ಹಚ್ಚಿಕೊಂಡಿದೆ ಇದನ್ನು ಹೇಗೆ ಬಿಟ್ಟು ಹೋಗಲಿ ಎಂದು ದುಃಖದಿಂದ ಆಕೆಯು ಸಹ ಅಳಲು ಶುರು ಮಾಡುತ್ತಾಳೆ. ತದನಂತರ ನಾಯಿಯನ್ನು ಹೋಗು ಅಂತ ಹೇಳಿದರು ಸಹ ಆ ನಾಯಿ ಹೋಗದೆ ಅಲ್ಲಿಯೇ ನಿಂತು ಅವಳನ್ನು ನೋಡುತ್ತಾ ಇರುತ್ತದೆ. ಇದನ್ನು ನೋಡಿದರೆ ನಾಯಿಗಳಿಗೂ ಸಹ ಮನುಷ್ಯರಂತೆ ತಮ್ಮವರು ಬಿಟ್ಟು ಹೋದಾಗ ದುಃಖ ವಾಗುತ್ತೆ ಅಂತ ಈವಿಡಿಯೋದಿಂದ ತಿಳಿದು ಬರುತ್ತೆ.

ವೀಡಿಯೋ ನೋಡಿ

 

View this post on Instagram

 

A post shared by @apple_m_s

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ apple_m_s ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ ಇದುವರೆಗೆ ಈ ವೀಡಿಯೋವನ್ನು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಮಾಡಿದ್ದಾರೆ.