Articles

Video; ಹೊಟ್ಟೆ ತುಂಬಿಕೊಳ್ಳುವುದರ ಜೊತೆಗೆ ಕರುಳಕುಡಿಗಾಗಿ ತಾಯಿ ಮಾಡಿದ ತೊಟ್ಟಿಲಿನ ಜುಗಾಡ್ ನೋಡಿ…

ಸೋಶಿಯಲ್ ಮೀಡಿಯಾದ ಮಾಧ್ಯಮದಿಂದಾಗಿ ದಿನಂಪ್ರತಿ ಅನೇಕ ರೀತಿಯ ವಿಡಿಯೋಗಳು ನಮ್ಮ ಕಣ್ಣ ಮುಂದೆ ಹಾಯ್ದು ಹೋಗುತ್ತವೆ. ಈ ವಿಡಿಯೋಗಳು ನಮ್ಮನ್ನು ಕೆಲವೊಮ್ಮೆ ಹೊಟ್ಟೆ ಹುಣ್ಣಾಗುವಂತೆ ಸಾಕಷ್ಟು ನಗಿಸಿದರೆ ಇನ್ನು ಕೆಲವು ವಿಡಿಯೋಗಳು ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿ ಹೋಗುತ್ತವೆ. ಇದೇ ರೀತಿಯ ಒಂದು ವಿಡಿಯೋ ಸದ್ಯ ನಿಮಗಾಗಿ ಇಲ್ಲಿ ತಂದಿದ್ದೇವೆ.

ಈ ವಿಡಿಯೋ ನೋಡಿದಾಗ ಕೆಲವರ ಜೀವನ ಯಾವ ರೀತಿ ಇರುತ್ತದೆ? ಎಂಥ ಕಷ್ಟದಿಂದ ತುಂಬಿರುತ್ತದೆ ಎಂಬುದರ ಪರಿಚಯ ಆಗುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಮಹಿಳೆಯೊಬ್ಬಳು ತಳ್ಳೋ ಗಾಡಿಯ ಮೇಲೆ ಕೆಲವು ವಸ್ತುಗಳನ್ನಿಟ್ಟು ಮಾರಾಟ ಮಾಡುತ್ತಿದ್ದಾಳೆ. ಈ ಸಂದರ್ಭದಲ್ಲಿ ಕಂಡುಬರುವ ಒಂದು ದೃಶ್ಯ ನೋಡುಗರ ಮನ ಕಲಕುತ್ತದೆ. ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ತಳ್ಳುವ ಗಾಡಿಯ ಕೆಳಗೆ ಮಗುವಿಗಾಗಿ ಒಂದು ಬಟ್ಟೆಯನ್ನು ಕಟ್ಟಿದ್ದಾಳೆ. ಆ ಬಟ್ಟೆಯಲ್ಲಿ ಮಗುವಿಗೆ ತೊಟ್ಟಲಿನ ಹಾಗೆ ಅಥವಾ ಜೋಕಾಲಿಯ ಹಾಗೆ ತೂಗಲು ಅನುಕೂಲ ಮಾಡಿಕೊಂಡಿದ್ದಾಳೆ. ತನ್ನ ಕಾಲುಗಳಿಂದಲೇ ಮತ್ತು ಗಾಡಿಯನ್ನು ತಳ್ಳುತ್ತ ಮುನ್ನಡೆಯುವಾಗ ಅದು ತಾನಾಗಿಯೇ ತೂಗಾಡಿಕೊಳ್ಳುತ್ತದೆ. ಹೀಗಾಗಿ ಮಗು ಅಲ್ಲಿಯೇ ಯಾವುದೇ ಸದ್ದಿಲ್ಲದೆ ಮಲಗುತ್ತದೆ. ಮಹಿಳೆಯು ತನ್ನ ಕೆಲಸದ ಜೊತೆಗೆ ಮಗುವನ್ನು ಸಹ ಜೋಪಾನ ಮಾಡುತ್ತಿದ್ದಾಳೆ. ಕೆಲವರ ಜೀವನದ ಈ ರೀತಿಯ ಚಿತ್ರಗಳನ್ನು ಕಂಡಾಗ ಸಾಕಷ್ಟು ಜನರ ಮನ ಮಿಡಿಯುತ್ತದೆ.

ವೀಡಿಯೋ ನೋಡಿ

https://twitter.com/Gulzar_sahab/status/1573944171462737921?t=mrkMpFefiDXApHUNjKMQcg&s=19

ಪ್ರಸ್ತುತ ವಿಡಿಯೋ ‘ಜಿಂದಗಿ ಗುಲ್ಜಾರ್ ಹೈ’ ಹೆಸರಿನ ಐಡಿಯಿಂದ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 1.75 ಲಕ್ಷ ಜನರು ವೀಕ್ಷಿಸಿದ್ದಲ್ಲದೆ ಸಾವಿರಾರು ಜನರು ವಿಡಿಯೋಗೆ ಲೈಕ್ ಮಾಡಿದ್ದಾರೆ. ವಿಡಿಯೋ ನೋಡಿದ ನಂತರ ನೆಟ್ಟಿಗರು ಸಹ ತಮ್ಮ ಕಾಮೆಂಟನಲ್ಲಿ ತುಂಬಾ ಕಳವಳವನ್ನು ವ್ಯಕ್ತ ಮಾಡಿದ್ದಾರೆ.

Leave a Comment

Your email address will not be published. Required fields are marked *