ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತವೆ. ಹೀಗಾಗಿ ಅವು ಬೇಗನೆ ವೈರಲ್ ಕೂಡ ಆಗುತ್ತವೆ. ಈಗ ಹುಲಿ ಮತ್ತು ಮುದ್ದು ಕರುವಿನ ರೌದ್ರ ರೂಪದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ.
ವಿಡಿಯೋದಲ್ಲಿ ಹುಲಿ ಹಸುವಿನ ಕರುವಿಗೆ ಬೆದರಿಸಿ ಓಡಿಸುತ್ತಿದೆ. ಕರುವಿಗೆ ಹುಲಿ ಬೆನ್ನಟ್ಟಿದ್ದರಿಂದ ಅದು ಹೆದರಿ ಓಡುತ್ತಿರುವುದು ಕಂಡು ಬರುತ್ತಿದೆ.
ಕರು ಹೆದರಿ ಓಡುವ ಭರದಲ್ಲಿ ಮುಂದಿರುವ ತಂತಿಯ ಕಾಂಪೌಂಡ್ ಜಾಳಿಗೆಯನ್ನು ನೋಡದೆ ಅದಕ್ಕೆ ಡಿಕ್ಕಿ ಹೊಡೆದು ಕೆಳಗೆ ಬೀಳುತ್ತದೆ. ಅಲ್ಲಿಯೇ ಕರುವಿನ ವರಸೆ ಕ್ಷಣದಲ್ಲಿ ಬದಲಾಗುತ್ತದೆ. ಕರು ಬಿದ್ದು ಕ್ಷಣಾರ್ಧದಲ್ಲಿ ಎದ್ದ ನಂತರ ಅದರ ಸಹಜ ರೂಪ ಬದಲಾಗಿ ರೌದ್ರ ರೂಪ ತಾಳಿರುತ್ತದೆ. ಅದೇ ರೌದ್ರ ರೂಪದಲ್ಲಿ ಹುಲಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಸನ್ನದ್ಧವಾಗಿ ಅದಕ್ಕೆ ಬೆನ್ನಟ್ಟಲು ಶುರು ಮಾಡಿದಾಗ ಹುಲಿ ಮಾತ್ರ ಅಲ್ಲಿಂದ ಹೆದರಿ ಕಾಲ್ಕಿತ್ತಿದೆ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಮಾತ್ರ ತುಂಬಾ ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಕಾಡಿನಲ್ಲಿ ಸಹಜವಾಗಿ ಯಾವುದೇ ಪ್ರಾಣಿಗಳ ಬೇಟೆಯಾಡುವ ಹುಲಿಯ ಈ ಅವಸ್ಥೆ ನೋಡಿ ಬೆರಗಾಗುವದು ಸಹಜವೇ.
ವನ್ಯ ಜೀವಿಗಳ ಅಭಯಾರಣ್ಯದಲ್ಲಿ ಚಿಕ್ಕಂದಿನಿಂದಲೂ ಕೂಡಿ ಬೆಳೆದ ಪರಿಣಾಮವಾಗಿ ಹಿಗಾಗಿರಬೇಕು, ಮತ್ತು ಹುಲಿ ಹಾಗೂ ಕಾರು ಎರಡು ಮೊದಲಿನಿಂದಲೂ ಮಿತ್ರರಾಗಿರಬೇಕು ಎಂಬ ಅಂದಾಜು ವರ್ತಿಸಲಾಗುತ್ತಿದೆ. ಸದ್ಯ ಈ ವಿಡಿಯೋ ಮಾತ್ರ ಲಾಕ್ಷಾವಧಿ ಜನರು ನೋಡಿದ್ದಾರೆ.
ವಿಡಿಯೋ ನೋಡಿ
View this post on Instagram
