Articles

Viral Video: ಸಿಂಹಗಳ ಗುಂಪಿನ ಗರ್ವ ಮುರಿದ ಎಮ್ಮೆಗಳು; ಒಗ್ಗಟ್ಟಿನಲ್ಲಿ ಬಲವಿದೆ ಎಂದ ನೆಟ್ಟಿಗರು!

ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಮಾತನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ‌. ಒಗ್ಗಟ್ಟಿನ ಅನೇಕ ಕಥೆಗಳನ್ನು ಕೂಡಾ ನಾವು ಕೇಳಿದ್ದೇವೆ. ಆ ಕಥೆಗಳಲ್ಲಿ ಹೇಗೆ ಒಗ್ಗಟ್ಟಿನ ಮೂಲಕ ಅಪಾಯವನ್ನು ಎದುರಿಸಿ, ವಿಜಯವನ್ನು ತಮ್ಮದಾಗಿಸಿಕೊಂಡರು ಎಂಬುದನ್ನು ನಮಗೆ ಶಾಲೆಗಳಲ್ಲಿ ನೀತಿ ಕಥೆಗಳಲ್ಲಿ ಕೂಡಾ ವಿವರಿಸಿದ್ದಾರೆ. ಹೀಗೆ ಯಾವುದೇ ಸಮಸ್ಯೆ ಅಥವಾ ಎಂತಹುದೇ ಅ ಪಾಯವನ್ನೇ ಆಗಲಿ ಒಗ್ಗಟ್ಟಿನಿಂದ ಎದುರಿಸಿದರೆ ಪರಿಹಾರ ಎನ್ನುವುದು ಸಿಕ್ಕೇ ಸಿಗುತ್ತದೆ ಎಂದು ಹೇಳಲಾಗುತ್ತದೆ. ದೇಶದ ರಕ್ಷಣೆ ಎಂದು ಬಂದಾಗಲೂ ಕೂಡಾ ನಾವು ಒಗ್ಗಟ್ಟಾಗಿರಬೇಕು, ದೇಶ ನಮ್ಮದು ಎನ್ನುವ ಭಾವನೆ ನಮ್ಮಲ್ಲಿ ಸದಾ ಇರಬೇಕು ಎಂದು ಕೂಡಾ ಜಾಗೃತಿಯನ್ನು ಮೂಡಿಸಲಾಗುತ್ತದೆ. ಒಗ್ಗಟ್ಟು ಎನ್ನುವುದು ಒಂದು ಶಕ್ತಿ.

ಬೇಟೆಗಾರ ನಿಗೆ ತನ್ನ ಬೇಟೆಯ ದೌರ್ಬಲ್ಯವು ತಿಳಿದಿರುತ್ತದೆ. ಅದನ್ನು ಅನುಸರಿಸಿಯೇ ಅವು ಬೇಟೆಯನ್ನು ಆಡುತ್ತವೆ. ಆದರೆ ಕೆಲವೊಮ್ಮೆ ಸಾಧು ಪ್ರಾಣಿಗಳನ್ನು ಅಥವಾ ದುರ್ಬಲವಾದ ಪ್ರಾಣಿಗಳ ಬೇಟೆಯನ್ನು ಮಾಡಲು ಬರುವ ಶಕ್ತಿಶಾಲಿ ಪ್ರಾಣಿಗಳ ಬಹಳ ಸರಳವಾದ ಕೆಲಸವೂ ಕೂಡಾ ಕಠಿಣವಾಗಿ ಬಿಡುತ್ತದೆ. ಅದು ಯಾವಾಗ ಎನ್ನುವಿರಾ? ಉತ್ತರ ಕಷ್ಟವೇನಲ್ಲ. ಯಾವಾಗ ಆ ದುರ್ಬಲ ಪ್ರಾಣಿಗಳು ಕೂಡಾ ಒಟ್ಟಾಗಿ ಒಗ್ಗಟ್ಟಾಗಿ ಇರುತ್ತವೆಯೋ ಆಗ ಇಷ್ಟು ದಿನ ಸುಲಭವಾಗಿ ಆಡುತ್ತಿದ್ದ ಬೇಟೆ ಕೂಡಾ ಬಲಿಷ್ಠವಾದ ಪ್ರಾಣಿಗಳಿಗೆ ಕಷ್ಟವಾಗಿ ಪರಿಣಮಿಸುತ್ತದೆ. ಉದಾಹರಣೆಗೆ ನಾವು ಓದಿರುವ ಕಥೆಗಳಲ್ಲಿ ಕೂಡಾ ಇಂತಹ ನಿದರ್ಶನಗಳನ್ನು ನಾವು ಓದಿ ತಿಳಿದುಕೊಂಡಿದ್ದೇವೆ.

ಇಂತಹುದೇ ಒಂದು ತಾಜಾ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಾ ಸಾಗಿದೆ. ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳ ಕುರಿತಾದ ಅನೇಕ ವಿಶೇಷ ವೀಡಿಯೋಗಳನ್ನು ಆಗಾಗ ಹಂಚಿ ಕೊಳ್ಳುತ್ತಲೇ ಇರುತ್ತಾರೆ. ಅವರು ಈಗ ಹಂಚಿಕೊಂಡಿರುವ ಈ ಹೊಸ ವೀಡಿಯೋದಲ್ಲಿ ಒಗ್ಗಟ್ಟಿನ ಬಲ ಎಂತಹುದು ಎನ್ನುವ ವಿಷಯವನ್ನು ಬಹಳ ಸ್ಪಷ್ಟವಾಗಿ ತಿಳಿಸುವ ಹಾಗಿದೆ. ಈ ವೀಡಿಯೋ ನೋಡಿದಾಗ ಒಗ್ಗಟ್ಟಿದ್ದರೆ, ಒಗ್ಗಟ್ಟಿನಿಂದ ಎದುರಿಸಿದರೆ ಎಂತಹ ಸಮಸ್ಯೆಯನ್ನಾದರೂ ಕೂಡಾ ಎದುರಿಸಬಹುದು ಎನ್ನುವುದಕ್ಕೆ ಸಾಕ್ಷಿಯಾಗಿದೆ‌.

ವಿಡಿಯೋದಲ್ಲಿ ಸಿಂಹಗಳ ದಂಡು ಎಮ್ಮೆಯನ್ನು ಬೇಟೆಯಾಡಲು ಬಯಸಿವೆ‌. ಆದರೆ ಎಮ್ಮೆಗಳ ಗುಂಪು ಸಿಂಹಗಳ ಆಸೆಯ ಮೇಲೆ ತಣ್ಣೀರನ್ನು ಎರಚಿವೆ‌.‌ ಏಕೆಂದರೆ ಎಮ್ಮೆಗಳ ದಂಡಿನ ಒಗ್ಗಟ್ಟಿನ ಮುಂದೆ ಸಿಂಹಗಳು ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿರುವುದನ್ನು ನಾವು ನೋಡಬಹುದಾಗಿದೆ‌. ಸುಶಾಂತ್ ಅವರು ವೀಡಿಯೋ ಪೋಸ್ಟ್ ಮಾಡುತ್ತಾ ಶೀರ್ಷಿಕೆಯಲ್ಲಿ, ಸಿಂಹಗಳಿಗೆ ವಾಟರ್ ಲೂ ಯುದ್ಧ, ಆದರೆ ಎಮ್ಮೆಗಳ ಒಗ್ಗಟ್ಟು ಸಿಂಹಗಳ ಗರ್ವವನ್ನು ಮುರಿದಿದೆ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ವಿಡಿಯೋ ನೋಡಿ…

ವೀಡಿಯೋ ಈಗಾಗಲೇ ಆರು ಸಾವಿರಕ್ಕಿಂತ ಅಧಿಕ ವೀಕ್ಷಣೆಗಳು, ಐನೂರು ಲೈಕ್ಸ್ ಮತ್ತು ಎಂಬತ್ತಕ್ಕಿಂತ ಅಧಿಕ ರೀಟ್ವೀಟ್ ಗಳು ಬಂದಿವೆ. ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಏಕತೆಯ ಅಥವಾ ಒಗ್ಗಟ್ಟಿನ ಶಕ್ತಿ ಇದು ಎಂದು ತಮ್ಮ ಮೆಚ್ಚುಗೆಯನ್ನು ನೀಡಿದ್ದಾರೆ. ಕಾಮೆಂಟ್ ಗಳಲ್ಲಿ ಎಮ್ಮೆಗಳ ಗುಂಪಿನ ಶಕ್ತಿಯನ್ನು ಹೊಗಳಿದ್ದಾರೆ. ಅದೇ ರೀತಿ ಸಿಂಹಗಳ ಗುಂಪಿನ ಸೋಲನ್ನು ನೋಡಿ ಅದರ ಬಗ್ಗೆ ದಯೆಯನ್ನು ಕೂಡಾ ತೋರಿಸಿದ್ದಾರೆ. ಒಟ್ಟಾರೆ ಎಮ್ಮೆಗಳು ತಮ್ಮ ಒಗ್ಗಟ್ಟಿನ ಕಥೆ ಹೇಳಿದ ಈ ವೀಡಿಯೋ ಈಗ ಎಲ್ಲರ ಗಮನವನ್ನು ಸೆಳೆದಿದೆ.

Leave a Comment

Your email address will not be published. Required fields are marked *