Viral Video: ಜ ಗಳ ಮಾಡುತ್ತಿರುವ ಟರ್ಕಿಗಳ ಮೇಲೆ ಇದ್ದಕ್ಕಿದ್ದಂತೆ ಅ ಟ್ಯಾಕ್ ಮಾಡಿದ ಹದ್ದು; ಮುಂದೆ ನಡೆದಿದ್ದು ಊಹೆಗೆ ನಿಲುಕದ್ದು!

ಜೀವನದಲ್ಲಿ ಅವಕಾಶ ಅನ್ನೋದು ಒಮ್ಮೆ ಬರುತ್ತೆ ಆಗಲೇ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎನ್ನುತ್ತಾರೆ ಅನೇಕರು. ಕೆಲವು ಸಲ ಅದು ನಿಜ ಕೂಡಾ ಆಗಿರುತ್ತೆ‌. ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳದೆ ಅನಂತರ ಕೊರಗುವ ಅದೆಷ್ಟೋ ಜನ ನಮ್ಮ ಮಧ್ಯೇನೆ ಇದ್ದಾರೆ‌. ಇನ್ನು ಅವಕಾಶ ಅನ್ನೋದು ಮತ್ತೆ ಮತ್ತೆ ಸಿಕ್ಕರೆ ಅದು ನಿಜಕ್ಕೂ ಅದೃಷ್ಟವೇ ಸರಿ. ಒಮ್ಮೆ ಸಿಗದ ಅವಕಾಶ ಮತ್ತೊಮ್ಮೆ , ಮಗದೊಮ್ಮೆ ಆದರೂ ಸಿಕ್ತಲ್ಲಾ ಅನ್ನುವ ತೃಪ್ತಿ ಆದರೂ ಇರುತ್ತೆ. ಆದರೆ ಈ ಅದೃಷ್ಟ ಎಲ್ಲರಿಗೂ ಸಿಗುತ್ತೆ ಅನ್ನೋ ಭರವಸೆ ಮಾತ್ರ ಇಲ್ಲ. ಆದ್ದರಿಂದಲೇ ಅವಕಾಶ ಸಿಕ್ಕಾಗ ಅದನ್ನು ಸದುಪಯೋಗ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆಯಿಟ್ಟವನು ಜಾಣನಾದರೆ, ಇದ್ದ ಅವಕಾಶ ಬಿಟ್ಟು ಇನ್ನೊಂದಕ್ಕೆ ಕಾಯುವುದು ಸೋಮಾರಿತನ ಕ್ಕೆ ಉದಾಹರಣೆ ಆಗುತ್ತಾನೆ.

ಇದು ನಮ್ಮ ಜೀವನದಲ್ಲಿ ನಮ್ಮನ್ನು ನಾವು ಮುಂದಿನ ಹಂತಕ್ಕೆ ಕೊಂಡೊಯ್ಯಲು, ಜೀವನದಲ್ಲಿ ಮುಂದೆ ಬರಲು ಸಿಗುವ ಅವಕಾಶಗಳ ಬಗ್ಗೆಯಾದರೆ, ಅ ಪಾಯವೊಂದು ಎದುರಾದಾಗ, ಸಂ ಕ ಷ್ಟವು ಕಣ್ಣ ಮುಂದೆ ಇರುವಾಗ, ಪ್ರಾ ಣಾ ಪಾಯದ ಪರಿಸ್ಥಿತಿ ಸಮೀಪದಲ್ಲೇ ಇದೆ ಎಂದಾಗ ಆಕಸ್ಮಿಕವೋ, ಅನಿರೀಕ್ಷಿತವೋ ಅಥವಾ ದೇವರ ದಯೆಯೋ ಎನ್ನುವಂತೆ ಜೀವ ಉಳಿಸಿಕೊಳ್ಳಲು ಒಂದು ಅವಕಾಶ ಸಿಕ್ಕರೂ ಅದನ್ನು ಬಳಸಿಕೊಳ್ಳದೆ ಪ್ರಾ ಣಕ್ಕೆ ಸಂಚಕಾರವನ್ನು ಒಡ್ಡುವುದು ಕೂಡಾ ಮೂ ರ್ಖ ತನ ಅಥವಾ ದ ಡ್ಡತನ ಎನಿಸಿಕೊಳ್ಳುವುದು. ಜೀವಕ್ಕೆ ಮಿಗಿಲಾದುದು ಇನ್ನೇನಿದೆ ಹೇಳಿ.

ಸೋಶಿಯಲ್ ಮೀಡಿಯಾ ದಲ್ಲಿ ಒಂದು ವೀಡಿಯೋ ವೈರಲ್ ಆಗಿದೆ. ಇದು ಕೂಡಾ ನಾವು ಏನೆಲ್ಲಾ ವಿಚಾರವನ್ನು ಹೇಳಿದೆವೋ ಅದಕ್ಕೆ ಸಂಭಂದಿಸಿದ ಹಾಗೇ ಇದ್ದು, ಈ ವೀಡಿಯೋವನ್ನು ಈಗಾಗಲೇ 10 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, ಸುಮಾರು ಐದು ಸಾವಿರಕ್ಕಿಂತ ಅಧಿಕ ಲೈಕ್ ಗಳು ದೊರೆತಿದ್ದು, 850 ದಾಟಿದ ರೀಟ್ವೀಟ್ ಗಳು ಆಗಿವೆ‌. ಇಷ್ಟು ದೊಡ್ಡ ಸಂಖ್ಯೆಯ ಜನ ನೋಡವಂತದ್ದು ಏನಿದೆ ಎನ್ನುವುದಾದರೆ, ಇಲ್ಲಿ ಟರ್ಕಿ ಹಕ್ಕಿಯೊಂದು ತನಗೆ ಪ್ರಾ ಣವನ್ನು ಉಳಿಸಿಕೊಳ್ಳುವ ಅವಕಾಶ ದೊರೆತಾಗ ಅದು ಹಾಗೇ ಮಾಡದೇ ಅ ಪಾ ಯಕ್ಕೆ ಸಿಲುಕಿ ತನ್ನ ಜೀವಕ್ಕೆ ಕು ತ್ತು ತಂದು ಕೊಂಡಿದೆ.

ವೈರಲ್ ಆಗಿರುವ ವೀಡಿಯೋದಲ್ಲಿ ಎರಡು ಟರ್ಕಿ ಹಕ್ಕಿಗಳು ಪರಸ್ಪರ ಕಾ ಳ ಗವನ್ನು ಮಾಡಲು ಸಜ್ಜಾಗಿವೆ. ಎರಡೂ ಕೂಡಾ ಪ್ರತಿಸ್ಪರ್ಧಿಗಳಾಗಿ ಇನ್ನೇನು ತಮ್ಮ ಹೋ ರಾ ಟವನ್ನು ನಡೆಸಬೇಕು ಎನ್ನುವ ವೇಳೆಗೆ ಅವೆರಡೂ ಕೂಡಾ ಊಹಿಸಿರದ ಒಂದು ಅ ಪಾ ಯವು ಅವುಗಳ ಮೇಲೆ ಬಂದು ಎರಗಿದೆ. ಹೌದು ಒಂದು ಹದ್ದು ಎಲ್ಲಿಂದಲೋ ವೇಗವಾಗಿ ಹಾರಿಬಂದು ಎರಡು ಟರ್ಕಿಗಳಲ್ಲಿ ಒಂದರ ಮೇಲೆ ಧಾ ಳಿ ಮಾಡಿದೆ. ಹದ್ದಿನ ಪಂಜುಗಳ ಧಾ ಳಿಯನ್ನು ಎದುರಿಸಲಾಗದೆ ಆ ಟರ್ಕಿ ಕೆಲವೇ ಕ್ಷಣಗಳಲ್ಲಿ ಪ್ರಾಣ ಬಿಟ್ಟಂತೆ ಕಂಡಿದೆ. ಆಗ ಇನ್ನೊಂದು ಹಕ್ಕಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಅವಕಾಶವಿತ್ತು.

ವಿಡಿಯೋ ನೋಡಿ….

ಆದರೆ ಅದು ಹಾಗೆ ಮಾಡದೇ ತಮ್ಮ ಮೇಲೆ ಧಾ ಳಿ ಮಾಡಿದ ಹದ್ದಿನ ಮೇಲೆ ತಿರುಗಿ ಬಿದ್ದು, ಹೋ ರಾ ಟ ಮಾಡಿದೆ. ಆದರೆ ಬಲಿಷ್ಠವಾದ ಹ ದ್ದು ಎರಡನೇ ಹಕ್ಕಿಯನ್ನು ಕೂಡಾ ಕೆಲವೇ ನಿಮಿಷಗಳಲ್ಲಿ ಸಾ‌ ವಿ ನ ಕಡೆ ಮುಖ ಮಾಡುವಂತೆ ಮಾಡಿದೆ. ಈ ವೀಡಿಯೋ ಶೇರ್ ಮಾಡಿಕೊಂಡ ಟ್ವಿಟರ್ ಬಳಕೆದಾರರು ವೀಡಿಯೋ ಶೀರ್ಷಿಕೆಯಲ್ಲಿ ಕೂಡಾ ಅವಕಾಶವಿದ್ದಾಗ ಬಿಟ್ಟು ಹೋಗಬೇಕು ಎಂದು ಪರೋಕ್ಷವಾಗಿ ಆ ಟರ್ಕಿ ಹಕ್ಕಿ ತಪ್ಪಿಸಿಕೊಳ್ಳಬೇಕಿತ್ತು ಎಂದಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಸ ತ್ತ ಹಕ್ಕಿಗಳ ಬಗ್ಗೆ ದಯೆ ತೋರಿದ್ದಾರೆ. ಕೆಲವರು ಹದ್ದಿನ ಬಲ ಮೆಚ್ಚಿದ್ದಾರೆ. ಇನ್ನೂ ಕೆಲವರು ಎರಡು ಟರ್ಕಿ ಗಳ ಜಗಳದಲ್ಲಿ ಗೆದ್ದವರು ಯಾರೆಂದು ತಮಾಷೆ ಮಾಡಿದ್ದಾರೆ.