Articles

ಹೂಮಾಲೆ ಹಾಕುವಾಗ ಸ್ಟೇಜ್ ಮೇಲೆಯೇ ವರನಿಗೆ ಬೆರಳು ಮಾಡಿ ಬೆದರಿಸಲು ಶುರು ಮಾಡಿದಳು ವಧು..! ಮುಂದಿನ ದೃಶ್ಯ ನೋಡಿ.

ಮದುವೆಯಂತಹ ಮಹತ್ವದ ಕಾರ್ಯಕ್ರಮಗಳಲ್ಲಿ ಬೇಡವಾಗಿದ್ದರೂ ಕೆಲವು ಸಲ ಅಹಿತಕರ ಘಟನೆಗಳು ನಡೆದೇ ಬಿಡುತ್ತವೆ. ಇದರಿಂದ ಎರಡೂ ಕುಟುಂಬಗಳು ಎಲ್ಲರ ಮುಂದೆ ಮುಜುಗರಕ್ಕೆ ಒಳಗಾಗುತ್ತವೆ. ಎರಡೂ ಸಂಬಂಧಗಳಲ್ಲಿ ಒಮ್ಮೆಲೆ ಕಹಿತನ ಬಂದು ಬಿಡುತ್ತದೆ. ಈಗ ಇಂಥದ್ದೇ ಒಂದು ದೃಶ್ಯವನ್ನು ನೀವು ಇಲ್ಲಿ ನೋಡಲಿದ್ದೀರಿ.

ಮದುವೆಯ ಮಂಟಪದಲ್ಲಿ ಎರಡು ಜೀವಗಳು ಒಬ್ಬರಿಗೊಬ್ಬರು ಕೊರಳಿಗೆ ಹೂಮಾಲೆಯನ್ನು ಹಾಕಿ ಇನ್ನೇನು ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಮದುಮಗಳು ಒಮ್ಮೆಲೆ ಆಕ್ಷನ್ ಮೋಡ್ ನಲ್ಲಿ ಬರುತ್ತಾಳೆ. ಹಾಗೂ ಸ್ಟೇಜ್ ಮೇಲೆಯೇ ತನ್ನ ಭಾವಿ ಪತಿಗೆ ಎಲ್ಲರೆದುರೇ ಬೆರಳು ತೋರಿಸಿ ಅಶೋಭನಿಯವಾಗಿ ವಾರ್ನಿಂಗ್ ನೀಡಲು ಶುರು ಮಾಡುತ್ತಾಳೆ. ತನ್ನ ಭಾವಿ ಪತ್ನಿಯ ಈ ರೀತಿಯ ಅವತಾರ್ ನೋಡಿ ವರ ಬೇಸರಗೊಂಡು ಸ್ಟೇಜ್ ನಿಂದಲೇ ಕೆಳಗೆ ಇಳಿಯಲು ಶುರು ಮಾಡುತ್ತಾನೆ.

ವಿಡಿಯೋ ನೋಡಿ

ಎಲ್ಲರೆದುರೇ ತನಗೆ ಅವಮಾನವಾಯಿತೆಂದು ವರ ಬೇಸರಗೊಂಡು ಸ್ಟೇಜ್ ಮೇಲೆ ನಿಲ್ಲಲು ಸಹ ಪ್ರಯತ್ನಿಸುವುದಿಲ್ಲ. ಈ ದೃಶ್ಯ ನೋಡಿದ ನಂತರ ಎಲ್ಲಾ ಸಂಬಂಧಿಕರು ಇಬ್ಬರಿಗೂ ಸಮಾಧಾನ ಹೇಳಲು ಪ್ರಯತ್ನಿಸುತ್ತಾರೆ. ಪ್ರಸ್ತುತ ವಿಡಿಯೋವನ್ನು Marwadi Music Company ಹೆಸರಿನ ಯುಟ್ಯೂಬ್ ಚಾನೆಲ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ 5 ಲಕ್ಷಕ್ಕೂ ಹೆಚ್ಚಿನ ಜನರು ನೋಡಿದ್ದಾರೆ.

Leave a Comment

Your email address will not be published. Required fields are marked *