Articles

Video; ಮೆಟ್ರೋ ನಲ್ಲಿ ಸೀಟ್ ಗಾಗಿ ಜಗಳ ಕಾಯ್ದ ಇಬ್ಬರು ಸುಶಿಕ್ಷಿತ ಯುವತಿಯರು! ಅಷ್ಟಕ್ಕೂ ಕಾರಣವೇನು ನೋಡಿ?

ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಮೆಟ್ರೋದಲ್ಲಿಯ ಅನೇಕ ವಿಡಿಯೋಗಳು ವೈರಲ್ ಆಗುತ್ತಿರುವುದು ಕಂಡುಬರುತ್ತಿದೆ. ಆ ವಿಡಿಯೋಗಳಲ್ಲಿ ಹೆಚ್ಚಾಗಿ ಡಾನ್ಸ್ ಗಳ ದೃಶ್ಯ ಕಂಡುಬರುತ್ತಿವೆ. ಈಗ ಮೆಟ್ರೋ ಟ್ರೈನ್ ನಲ್ಲಿ ಸುಶಿಕ್ಷಿತ ಯುವತಿಯರು ಕುಳಿತುಕೊಳ್ಳುವ ಸೀಟ್ ಗಾಗಿ ಜಗಳ ಮಾಡಿದ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ.

ಕಾರಣವೇನು ತಿಳಿದುಕೊಳ್ಳೋಣ ಬನ್ನಿ…

ಮೆಟ್ರೋದಲ್ಲಿ ಯುವತಿಯರು ಜಗಳ ಕಾದಿದ್ದಾರೆ. ಇಷ್ಟಕ್ಕೂ ಜಗಳವಾಗಲು ಕಾರಣವಾದರೂ ಏನಂತೀರಾ? ಇದರ ಕಾರಣ ತಿಳಿದಾಗ ಮಾತ್ರ ತುಂಬಾ ವಿಚಿತ್ರವೆನಿಸುತ್ತದೆ. ಮೆಟ್ರೋದಲ್ಲಿ ಒಂದು ಸೀಟಿನ ಮೇಲೆ ಸೀರೆಯುಟ್ಟು ಒಬ್ಬಳು ಮಹಿಳೆ ಕುಳಿತಿದ್ದಾಳೆ. ಜೊತೆಗೆ ತನ್ನ ಬ್ಯಾಗ್ ಬದಿಯ ಸೀಟ್ ಮೇಲೆ ಇಟ್ಟಿದ್ದಾಳೆ. ಅದೇ ಸಮಯಕ್ಕೆ ಅಲ್ಲಿ ಇನ್ನೊಬ್ಬಳು ಯುವತಿ ಬಂದು ಸೀಟ್ ಮೇಲೆ ಇಟ್ಟ ಬ್ಯಾಗ್ ತೆಗೆದು ಕುಳಿತುಕೊಳ್ಳಲು ಸೀಟ್ ಕೊಡು ಅಂತ ಕೇಳುತ್ತಾಳೆ. ಆದರೆ ಸೀರೆಯುಟ್ಟ ಯುವತಿ ಸ್ಪಷ್ಟವಾಗಿ ಆಕೆಗೆ ಸೀಟ್ ನೀಡಲು ನಿರಾಕರಿಸುತ್ತಾಳೆ. ಆಗ ಕುಳಿತುಕೊಳ್ಳಲು ಸೀಟ್ ಕೇಳುತ್ತಿರುವ ಯುವತಿ ಆಕೆಯ ಬದಿಯಲ್ಲಿ ಸ್ವಲ್ಪವೇ ಸ್ಥಳದಲ್ಲಿ ಕುಳಿತುಕೊಳ್ಳುತ್ತಾಳೆ. ತದನಂತರ ಇಬ್ಬರ ಮಧ್ಯೆ ವಾದ-ವಿವಾದ ನಡೆಯುತ್ತದೆ. ಇವರಿಬ್ಬರ ಬದಿಯಲ್ಲಿ ಕುಳಿತ ಇನ್ನೊಬ್ಬಳು ಯುವತಿ ಮಾತ್ರ ತುಂಬಾ ಶಾಂತವಾಗಿ ಬರ್ಗರ್ ತಿನ್ನುವುದರಲ್ಲಿ ಲೀನವಾಗಿದ್ದಾಳೆ.

ನೋಡಿ ಈ ವಿಡಿಯೋ…

ಈ ವಿಡಿಯೋ ನೆಟ್ಟಿಗರಿಗೆ ಮನರಂಜನೆಯನ್ನು ನೀಡುತ್ತಿದೆ. ಜೊತೆಗೆ ಅವರು ಇಂಟರೆಸ್ಟಿಂಗ್ ಕಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ. ಪ್ರಸ್ತುತ ವಿಡಿಯೋವನ್ನು @Wellutwt ಹೆಸರಿನ ಯೂಸರ್ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾನೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ನೇಟಿಜನ್ಸ್ ಒಬ್ಬ ಖಾಲಿ ಸೀಟ್ ಮೇಲೆ ಇಟ್ಟಿರುವ ಬ್ಯಾಗ್ ತೆಗೆದರೆ ಜಗಳವೇ ಮುಗಿದು ಹೋಗುತ್ತದೆ ಎಂದಿದ್ದಾನೆ. ಇನ್ನೊಬ್ಬ ಎಲ್ಲರೂ ಜಗಳವನ್ನೇ ನೋಡುತ್ತಿರುವಾಗ ಬರ್ಗರ್ ತಿನ್ನುತ್ತಿರುವ ಹುಡುಗಿ ಕಸವನ್ನು ಕೆಳಗೆ ಚೆಲ್ಲುತ್ತಿದ್ದಾಳೆ ಎಂದಿದ್ದಾನೆ.

Leave a Comment

Your email address will not be published. Required fields are marked *