Articles

VIDEO : ಯಜುವೇಂದ್ರ ಚಾಹಲ್ ಜಿಮ್ ನಲ್ಲಿನ ವರ್ಕೌಟ್ ವಿಡಿಯೋಗೆ ಇಂಗ್ಲೆಂಡ್ ತಂಡದ ಸಾಜೀದ್ ಮೊಹಮ್ಮದ್ ಕಿಂಡಲ್ ಹಾಗೂ ಅದಕ್ಕೆ ಚಾಹಲ್ ಪ್ರತ್ಯುತ್ತರ!

ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಆನ್ ಫೀಲ್ಡ್ ನಲ್ಲಿ ಎಷ್ಟೊಂದು ಆಕ್ಟಿವ್ ಆಗಿರುತ್ತಾರೆ ಎಂಬುದು ಸಾಮಾನ್ಯವಾಗಿ ನಿಮಗೆಲ್ಲ ತಿಳಿದಿರುವ ವಿಚಾರ. ನೋಡಲು ಪುಟ್ಟ ಗಾತ್ರವಿದ್ದರೂ ನಾನು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಆಕ್ಟಿವ್ ಆಗಿರುತ್ತಾರೆ ಈ ಆಟಗಾರ. ಅದೇ ರೀತಿಯಲ್ಲಿ ಇವರು ಸೋಶಿಯಲ್ ಮೀಡಿಯಾದಲ್ಲಿಯೂ ಕೂಡ ಸಾಕಷ್ಟು ಆಕ್ಟಿವ್ ಆಗಿರುತ್ತಾರೆ.

ಸಮಯ ಸಿಕ್ಕಾಗಲೆಲ್ಲ ವಿಡಿಯೋ, ಫೋಟೋಸ್ ಶೇರ್ ಮಾಡುತ್ತಾ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಅದೇ ರೀತಿಯಲ್ಲಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಒಂದು ವಿಡಿಯೋ ಶೇರ್ ಮಾಡಿದ್ದರು, ಅದನ್ನು ನೋಡಿದ ಇಂಗ್ಲೆಂಡ್ ತಂಡದ ಮೊಹಮ್ಮದ್ ಸಾಜೀದ್ ಅವರು ಮಾಡಿರುವ ಕಿಂಡಲ್ ಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಅದರ ವಿವರ ಇಲ್ಲಿದೆ…

ಸದ್ಯ ಶ್ರೀಲಂಕಾ ಟೂರ್ ಗಾಗಿ ಸಿದ್ಧತೆಯಲ್ಲಿರುವ ಯಜುವೇಂದ್ರ ಚಾಹಲ್ ಅವರು ಇದಕ್ಕಾಗಿ ಬಹಳಷ್ಟು ತಯಾರಿ ನಡೆಸುತ್ತಿದ್ದಾರೆ. ಇದರೊಂದಿಗೆ ಜಿಮ್ ನಲ್ಲಿಯೂ ಕೂಡ ಬೆವರು ಹರಿಸುತ್ತಿದ್ದಾರೆ. ಅದರದೇ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮನಲ್ಲಿ ಶೇರ್ ಮಾಡಿದ್ದರು, ಆ ವಿಡಿಯೋಗೆ ‘ಇದು ಶಕ್ತಿಯ ಮಾತು, ಅದರಲ್ಲಿ ದೈಹಿಕ ಮತ್ತು ಮಾನಸಿಕ ಶಕ್ತಿಯು ಕೂಡ ಶಾಮೀಲಾಗಿದೆ’ ಎಂಬ ಕ್ಯಾಪ್ಶನ್ ನೀಡಿದ್ದಾರೆ.

ಈ ವಿಡಿಯೋಗೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಬಂದಿದ್ದವು, ಅದರಲ್ಲಿ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸಾಜೀದ್ ಮೊಹಮ್ಮದ್ ಅವರು ಕೂಡ “ಆದಷ್ಟು ಬೇಗನೆ ನೀನು ಸಲ್ಮಾನ್ ಖಾನ್ ಆಗುತ್ತೀಯ ಎಂದು ಛೇಡಿಸಿ ಕಾಮೆಂಟ್ ಮಾಡಿದ್ದರು”, ಇದನ್ನು ನೋಡಿ ಹಿಂದೆ ಸರಿಯದ ಚಾಹಲ್ ಅವರು ಅದಕ್ಕುತ್ತರವಾಗಿ ಅರ್ನಾಲ್ಡ್ ಅವರ ಬಗ್ಗೆ ಕಾಳಜಿ ಇಲ್ಲವೇ..? ಎಂದು ಉತ್ತರಿಸಿದ್ದಾರೆ. ಅರ್ನಾಲ್ಡ್ ಅವರು ಒಂದು ಕಾಲದ ಪ್ರಸಿದ್ದ ಬಾಡಿ ಬಿಲ್ಡರ್ ಆಗಿದ್ದರು. ಅಷ್ಟೇ ಅಲ್ಲದೇ ಹಾಲಿವುಡ್ ನಟ ಹಾಗೂ ರಾಜಕಾರಣಿ ಕೂಡ ಆಗಿದ್ದವರು.

ಜುಲೈ 25 ರಿಂದ ಭಾರತ ಶ್ರೀಲಂಕಾ ನಡುವೆ ಕ್ರಿಕೆಟ್ ಸಮರ ಆರಂಭ :
ಇದೆ ಜುಲೈ 13 ರಂದು ಭಾರತ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ, ಮೊದಲ ಪಂದ್ಯ ಜುಲೈ 25 ರಂದು ನಡೆಯಲಿದೆ. ವಿಶೇಷವೆಂದರೆ ಈ ತಂಡಕ್ಕೆ ಮೊಟ್ಟ ಮೊದಲ ಬಾರಿಗೆ ಶಿಖರ್ ಧವನ್ ನಾಯಕ ಹಾಗೂ ಭುವನೇಶ್ವರ ಕುಮಾರ್ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.

ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡ ಇಂತಿದೆ :
ಶಿಖರ್ ಧವನ್ (ನಾಯಕ), ಭುವನೇಶ್ವರ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ ಪಡಿಕಲ್, ಋತುರಾಜ್ ಗಾಯಕವಾಡ್, ಸೂರ್ಯ ಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ಧಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ರಾಹುಲ್ ಚಾಹರ್, ದೀಪಕ್ ಚಾಹರ್, ಕುಲದೀಪ್ ಯಾದವ್, ಕೃಷ್ಣಪ್ಪ ಗೌತಮ್, ಕೃನಾಲ್ ಪಾಂಡ್ಯ, ವರುಣ್ ಚಕ್ರವರ್ತಿ, ನವದೀಪ್ ಸೈನಿ ಮತ್ತು ಚೇತನ್ ಸಾಕಾರಿಯ.

Leave a Comment

Your email address will not be published. Required fields are marked *