ಮದುವೆಯಲ್ಲಿಯ ಈ ಯೂನಿಕ್ ಡ್ಯಾನ್ಸ್ ನೋಡಿ ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವದು! ಇದು ಎಕ್ಸರ್ಸೈಜಾ ಇಲ್ಲ ಡ್ಯಾನ್ಸ್ ನೀವೇ ಹೇಳಿ….

ಮದುವೆ ಅಂದರೆ ಮದುಮಗನ ಜೊತೆ ಆತನ ಮಿತ್ರರಿಗೂ ಸಂಭ್ರಮವೋ ಸಂಭ್ರಮ. ಇದೇ ಆನಂದದ ಸಂಭ್ರಮದಲ್ಲಿ ಮದುಮಗನ ಮಿತ್ರನು ಮಾಡಿದ ಡ್ಯಾನ್ಸ್ ನೋಡಿ ನೇಟಿಜನ್ಸ್ ಗಳು ಮನಸ್ಸುಪೂರ್ತಿ ನಗುತ್ತಿದ್ದಾರೆ.

ಸದ್ಯ ಎಲ್ಲ ಕಡೆಗೆ ಕೊರೋನಾದ ಸಡಿಲಿಕೆಯಿಂದ ಮದುವೆಯ ಸಮಾರಂಭಗಳು ಮತ್ತೆ ಮೊದಲಿನ ಹಾಗೆ ಜೋರಾಗಿ ನಡೆಯುತ್ತಿವೆ. ಇಂಥದ್ದೇ ಒಂದು ಮದುವೆಯ ಸಮಾರಂಭದಲ್ಲಿ ಯುವಕನೊಬ್ಬ ಮಾಡಿದ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಜನರ ನಗುವಿಗೆ, ತಮಾಷೆಗೆ ಕಾರಣವಾಗಿದೆ.

ಇದು ಡ್ಯಾನ್ಸ್ ಅಥವಾ ವ್ಯಾಯಾಮ? ನೀವೇ ಹೇಳಿ….

ವಿಡಿಯೋದಲ್ಲಿ ಕಾಣಿಸುತ್ತಿರುವ ಯುವಕನು ಡ್ಯಾನ್ಸ್ ಮಾಡುವ ರೀತಿ ಜಿಮ್ ನಲ್ಲಿ ಎಕ್ಸರ್ಸೈಜ್ ಮಾಡುತ್ತಿದ್ದಾನೆನೋ ಅನಿಸುತ್ತಿದೆ. ಆತ ಜಿಮ್ ನಲ್ಲಿ ವ್ಯಾಯಾಮ ಮಾಡುವ ಹಾಗೆ ಆಕ್ಷನ್ ಮಾಡುತ್ತಿದ್ದಾನೆ ಅನಿಸುತ್ತದೆ. ಈ ಯುವಕನಿಗೆ ಬಹುಶಃ ಡ್ಯಾನ್ಸ್ ಮಾಡಲು ಬರುವುದಿಲ್ಲ, ಆದ್ದರಿಂದ ಆತ ಈ ರೀತಿ ಡ್ಯಾನ್ಸ್ ಮಾಡುತ್ತಿದ್ದಾನೆಂದು ಕಂಡುಬರುತ್ತಿದೆ. ಮತ್ತು ತಾನು ದಿನಂಪ್ರತಿ ಜಿಮ್ ನಲ್ಲಿ ಹೋಗಿ ಬಾಡಿ ತಯಾರಿಸಿದ್ದೇನೆ ಎಂದು ಇನ್ನೊಬ್ಬರಿಗೆ ತೋರಿಸುವ ನಿಟ್ಟಿನಲ್ಲಿ ಡ್ಯಾನ್ಸ್ ಮಾಡಿಸಿದ್ದಾನೆ ಎಂಬಂತಿದೆ.

ನೋಡಿ ಈ ವಿಡಿಯೋ…

ಈ ವಿಡಿಯೋ ನೋಡಿ ಕೆಲವರು ನೇಟಿಜನ್ಸ್ ಗಳು ತಮಾಷೆ ಮಾಡಿದರೆ, ಇನ್ನು ಕೆಲವರು ಹೊಗಳಿದ್ದಾರೆ. ಕೆಲವರು ಈತನ ಸ್ಟೈಲ್ ಸಲ್ಮಾನ್ ಖಾನ್ ಗೆ ಹೋಲಿಸಿದ್ದಾರೆ. ಕೆಲವರು ಈತ ಮಂಜಾನೆ ಜಿಮ್ ಗೆ ಹೋಗುವುದು ಮರೆತಿರಬೇಕು ಆದ್ದರಿಂದ ಆತ ಇಲ್ಲಿ ವ್ಯಾಯಾಮ ಮಾಡುತ್ತಿದ್ದಾನೆ ಎಂದಿದ್ದಾರೆ.