ಬೈಕ್ ಸವಾರನ ಜೀವ ಉಳಿಸಿದ ಬುಲೆರೋ CCTV ಯಲ್ಲಿ ಸೆರೆ! ಆನಂದ ಮಹಿಂದ್ರ ಶೇರ್ ಮಾಡಿದ ವಿಡಿಯೋ ವೈರಲ್!
ನಿಯಂತ್ರಣ ತಪ್ಪಿದ JCB ಯು ಬೈಕ್ ಸವಾರನ ಕಡೆಗೆ ನುಗ್ಗಿ ಬರುವಾಗ, ಎದುರಿನಿಂದ ಬಂತು ಬೋಲೆರೋ ಆಗ…
ಆನಂದ್ ಮಹಿಂದ್ರಾ ಅವರು ಯಾವತ್ತೂ ತಮ್ಮ ಟ್ವಿಟರ್ ಅಕೌಂಟ್ ನಿಂದ ತುಂಬಾ ಒಳ್ಳೊಳ್ಳೆಯ ವಿಡಿಯೋಗಳನ್ನು ಶೇರ್ ಮಾಡುತ್ತಾ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುತ್ತಾ ಇರುತ್ತಾರೆ. ಮೊನ್ನೆ ಜುಲೈ 25 ರಂದು ನಡೆದ ಒಂದು ವಿಚಿತ್ರ ಅ ಪಘಾ ತದ ವಿಡಿಯೋ ಒಂದು ಆನಂದ್ ಮಹಿಂದ್ರಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಸದ್ಯಕ್ಕೆ ಈ ವಿಡಿಯೋ ತುಂಬಾ ವೇಗದಲ್ಲಿ ವೈರಲ್ ಆಗುತ್ತಿದೆ.
ರಸ್ತೆಯ ಬದಿಗೆ ಒಬ್ಬ ಬೈಕ್ ಸವಾರ ಬೈಕ್ ನಿಲ್ಲಿಸಿ ಅದರ ಮೇಲೆ ಕುಳಿತಿದ್ದಾನೆ. ಹಿಂದಿನಿಂದ ಒಂದು JCB ಯು ಆತನ ಹತ್ತಿರ ಬಂದ ನಂತರವೇ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ದಿಢೀರನೆ ಇನ್ನೇ ಆತನ ಮೈಮೇಲೆಯೇ ಬರುತ್ತೆ ಎನ್ನುವಷ್ಟರಲ್ಲಿ ಎದುರಿನಿಂದ ಆತನನ್ನು ರಕ್ಷಿಸಲೆಂದೇ ಬಂದ ರೀತಿಯಲ್ಲಿ ಬೋಲೆರೋ ಗಾಡಿಯೊಂದು ಬಂದು JCB ಡಿಕ್ಕಿ ಹೊಡೆಯುತ್ತದೆ. ಮತ್ತು ಆ ಬೈಕ್ ಸವಾರನಿಗೆ ಅಲ್ಲಿಂದ ಪಕ್ಕಕ್ಕೆ ಸರಿಸುತ್ತದೆ. ಒಂದು ವೇಳೆ ಬೋಲೆರೋ ಅಲ್ಲಿ ಆ ಸಮಯಕ್ಕೆ ಬರಲಿಲ್ಲ ಅಂತ ವಿಚಾರ ಮಾಡಿದರೆ ಬೈಕ್ ಸವಾರನ ಕಥೆ ಮುಗಿದಿರುತ್ತಿತ್ತು. ಈ ಅ ಘಟನೆಯಲ್ಲಿ ಬೈಕ್ ಸವಾರನ ಕಥೆ ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ಬೋಲೆರೋ ಮಾತ್ರ ಆಪತ್ಭಾಂದವನಂತೆ ಬಂದು ಕ್ಷಣಾರ್ಧದಲ್ಲಿ ಬೈಕ್ ಸವಾರನ ಜೀವ ಉಳಿಸಿತು. ವಿಡಿಯೋ ನೋಡಿದಾಗ, ಬೋಲೆರೋ ಬೈಕ್ ಸವಾರನಿಗಾಗಿಯೇ ಬಂದು ಆತನ ಜೀವ ಉಳಿಸಿತು ಎನ್ನಿಸುತ್ತದೆ. ಪ್ರಸ್ತುತ ಈ ಎಲ್ಲ ದೃಶ್ಯವು ಅಲ್ಲಿದ್ದ CCTV ಯಲ್ಲಿ ಸೆರೆಯಾಗಿದೆ.
ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಆದರೆ ಆನಂದ್ ಮಹಿಂದ್ರಾ ಅವರು ಶೇರ್ ಮಾಡಿದ ವಿಡಿಯೋ ಮಾತ್ರ ಇಲ್ಲಿಯವರೆಗೆ ಆರು ಲಕ್ಷಗಳವರೆಗೆ ವೀಕ್ಷಿಸಲಾಗಿದೆ.
ऐसा लग रहा था कि बोलेरो एक जीवित चीज बन गई और उसका एकमात्र मिशन मोटर साइकिल चालक को बचाना था https://t.co/Cki8glWB39
— anand mahindra (@anandmahindra) July 27, 2020
ವಿಡಿಯೋ ಶೇರ್ ಮಾಡುವದರ ಜೊತೆಗೆ ಒಂದು ಕ್ಯಾಪ್ಶನ್ ಕೂಡಾ ಬರೆದಿದ್ದಾರೆ. ‘ಈ ಬೋಲೆರೋ ಜೀವಂತ ವಸ್ತುವಾಗಿ ಬೈಕ್ ಸವಾರನ ಜೀವ ಉಳಿಸುವ ಕೆಲಸಕ್ಕೆಂದೇ ಅದರ ಮಿಷನ್ ಮೇಲೆ ಬಂದಿದೆ’ ಎಂದೆನಿಸುತ್ತದೆ.