Articles

ಮೆಟ್ರೋದಲ್ಲಿ ಪುಟ್ಟ ಹುಡುಗಿ ಮಾಡಿದ ಕ್ಯೂಟ್ ಡಾನ್ಸ್ ವೈರಲ್! ಹಿಂದೆ ನಿಂತ ಹುಡುಗನ ಸೂಪರ್ ಸಾಥ್… ನೋಡಿ ಈ ವಿಡಿಯೋದಲ್ಲಿ.

ಮೆಟ್ರೋದಲ್ಲಿ ತಿರುಗುವವರಿಗೆ ದಿನನಿತ್ಯ ಬೇರೆ ಬೇರೆ ಪ್ರಕಾರದ ಜನರು ಸಂಚರಿಸುವುದು ಕಂಡುಬರುತ್ತದೆ. ಇಲ್ಲಿ ಅನೇಕ ಸಲ ನಾವು ಕಲ್ಪಿಸದ ವಿಶೇಷ ದೃಶ್ಯಗಳು ನೋಡಲು ಸಿಗುತ್ತವೆ. ಇಲ್ಲಿ ನಡೆಯುವ ಅನೇಕ ದೃಶ್ಯಗಳು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದುಂಟು. ಈಗ ಪುಟ್ಟ ಹುಡುಗಿಯೊಬ್ಬಳು ಮೆಟ್ರೋದಲ್ಲಿ ಡಾನ್ಸ್ ಮಾಡಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಪುಟ್ಟ ಕ್ಯೂಟ್ ಹುಡುಗಿ ಮೆಟ್ರೋದಲ್ಲಿ ಡಾನ್ಸ್ ಮಾಡಲು ಶುರುಮಾಡಿದ್ದಾಳೆ. ಸದೃಡವಾದ ಈ ಮಗು ಟಾಪ್ ಮತ್ತು ಸ್ಕೈಬ್ಲೂ ಬಣ್ಣದ ಜೀನ್ಸ್ ಸ್ಕರ್ಟ್ ತೊಟ್ಟುಕೊಂಡು ತುಂಬಾ ಮುದ್ದು ಮುದ್ದಾಗಿ ಕಾಣಿಸುತ್ತಿದೆ. ಈ ಹುಡುಗಿಯು ಡ್ಯಾನ್ಸ್ ಮಾಡುವಾಗ ಆಕೆಯ ಹಿಂದೆ ಹುಡುಗನೊಬ್ಬ ಈ ಕ್ಯೂಟ್ ಹುಡುಗಿಗೆ ತುಂಬಾ ಚೆನ್ನಾಗಿ ಸಾಥ್ ನೀಡುತ್ತಿದ್ದಾನೆ. ಮ್ಯೂಸಿಕ್ ಪ್ರಾರಂಭವಾಗುತ್ತಿದ್ದಂತೆಯೇ ಹುಡುಗಿಯು ‘ಗೋಮಿ ಗೋಮಿ’ ಈ ಟ್ರೆಂಡಿಂಗ್ ಹಾಡಿಗೆ ಕುಣಿಯಲು ಶುರು ಮಾಡುತ್ತಾಳೆ. ಹುಡುಗನ ಜೊತೆಗೆ ಇಬ್ಬರು ಹುಡುಗಿಯರು ಕ್ಯಾಮೆರಾ ಆನ್ ಆಗಿದ್ದನ್ನು ನೋಡಿ ಥಟ್ಟನೆ ಬದಿಗೆ ಸರಿಯುತ್ತಾರೆ. ಆದರೆ ಹುಡುಗ ಮಾತ್ರ ಅಲ್ಲಿಯೇ ನಿಂತು ಈ ಪುಟ್ಟ ಹುಡುಗಿಗೆ ಡಾನ್ಸ್ ಮಾಡುವಾಗ ಸಾಥ್ ನೀಡಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by Voompla (@voompla)

ಈ ಹುಡುಗಿಯ ಹೆಸರು ಸಮಾಯರಾ ಎನ್ನಲಾಗಿದ್ದು ಈಕೆಯ ಡಾನ್ಸ್ ಎಲ್ಲ ನೇಟಿಜನ್ಸ್ ಗಳಿಗೆ ಇಷ್ಟವಾಗಿದ್ದು ಅನೇಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಡಾನ್ಸ್ ನೋಡಿದ ಯೂಸರ್ ನೊಬ್ಬ ಹುಡುಗಿಯ ಜೊತೆಗೆ ಹಿಂದೆ ನಿಂತ ಹುಡುಗನು ಚೆನ್ನಾಗಿ ಡಾನ್ಸ್ ಮಾಡುತ್ತಿದ್ದಾನೆ ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ.

Leave a Comment

Your email address will not be published. Required fields are marked *