Articles

Viral Video: ಶಾಲೆ ಬಿಟ್ಟ ನಂತರ ಹುಡುಗೀರ ಖುಷಿ ಸ್ವಲ್ಪ ಹೆಚ್ಚೇ ಆಯಿತು; ಆ ಖುಷಿಯಲ್ಲಿ ಮಾಡಿದ್ದಾದರೂ ಏನು? ನೋಡಿ.

ಸೋಶಿಯಲ್ ಮೀಡಿಯಾದಲ್ಲಿ ಯಾವಾಗ ಏನು ಸಂಚಲನ ಮೂಡಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ವೈರಲ್ ಆಗುವ ಫೋಟೋಗಳು ಕೆಲವೊಮ್ಮೆ ಸಖತ್ ನಗಿಸಿದರೆ ಇನ್ನೂ ಕೆಲವೊಮ್ಮೆ ವಿಡಿಯೋಗಳು ತುಂಬಾ ಖುಷಿ ನೀಡುತ್ತವೆ. ಈಗ ಇದೇ ರೀತಿಯ ನಗುವನ್ನು ನೀಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ವಿಡಿಯೋವನ್ನು ನಿಮಗಾಗಿ ತಂದಿದ್ದೇವೆ.

ಈ ವಿಡಿಯೋದಲ್ಲಿ ಕೆಲವು ಹುಡುಗಿಯರು ಶಾಲೆ ಬಿಟ್ಟ ನಂತರ ಮನೆಗೆ ಹೋಗುವ ಖುಷಿಯಲ್ಲಿದ್ದಾರೆ ಎಂಬುದು ಕಂಡು ಬರುತ್ತಿದೆ. ಇದೇ ಖುಷಿಯಲ್ಲಿ ಅವರ ಜೊತೆಗೆ ಒಂದು ಇನ್ಸಿಡೆಂಟ್ ನಡೆಯುತ್ತದೆ. ಇದು ನೋಡಲು ತುಂಬಾ ಮಜವಾಗಿದೆ.

ಈ ತುಂಟ ಹುಡುಗಿಯರು ಶಾಲೆ ಬಿಟ್ಟ ನಂತರ ಹುಡುಗರಿಗಿಂತ ಮಸ್ತಿ ಮಾಡುವದರಲ್ಲಿ ತಾವೇನು ಕಮ್ಮಿ ಇಲ್ಲ ಎಂಬಂತೆ ತಮ್ಮ ಸ್ಕೂಲ್ ಬ್ಯಾಗ್ ಗಳನ್ನು ಹವೆಯಲ್ಲಿ ಹಾರಾಡಿಸುತ್ತ, ತೂರಾಡಿಸುತ್ತ ಬ್ರಿಡ್ಜ್ ಮೇಲಿನ ರಸ್ತೆಯಲ್ಲಿಂದ ನಡೆಯುತ್ತಿದ್ದಾರೆ. ಅಷ್ಟರಲ್ಲಿ ಅಲ್ಲಿ ನಡೆದ ಪುಟ್ಟ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ, ಅದೇನೆಂದರೆ ಬ್ಯಾಗ್ ಮೇಲೆ ಹಾರಿಸಿದಾಗ ಅದು ಬ್ರಿಡ್ಜ್ ನ ಡಿವೈಡರ್ ಆಚೆ ಬೇರೆ ರಸ್ತೆಯ ಮೇಲೆ ಬೀಳುತ್ತದೆ. ಆಗ ಹುಡುಗಿಯು ತನ್ನ ತಲೆಯನ್ನು ಚಚ್ಚಿಕೊಂಡಿದ್ದಾಳೆ. ಅತಿಯಾದ ಸಂತೋಷವೂ ಕೆಲವೊಮ್ಮೆ ನೆಮ್ಮದಿ ಹಾಳು ಮಾಡಲು ಕಾರಣವಾಗುತ್ತದೆ ಎಂದು ತಿಳಿದು ಬರುತ್ತದೆ.

ವಿಡಿಯೋ ನೋಡಿ

 

View this post on Instagram

 

A post shared by Bhutni_ke (@bhutni_ke_memes)

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಪೋಸ್ಟ್ ಮಾಡುತ್ತಲೇ ವೈರಲ್ ಆಗಲು ಶುರುವಾಗಿದೆ. ಈ ವೀಡಿಯೋವನ್ನು bhutni_ke_memes ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದೆ.

Leave a Comment

Your email address will not be published. Required fields are marked *