ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲಲ್ಲ ಅಂತಾರೆ, ಆದರೆ ಏಲನ್ ಮಸ್ಕ್ ಎಂಬ ಈ ಶ್ರೀಮಂತ ಕುಳಿತು ಉಂಡರೆ ಆತನ ಸಂಪತ್ತು ಎಷ್ಟು ವರ್ಷ ಸಾಕಾಗಬಹುದು ಗೊತ್ತಾ?

ಏಲನ್ ಮಸ್ಕ್ ಜಗತ್ತಿನ ಅತ್ಯಂತ ವಿಶೇಷ ವ್ಯಕ್ತಿ, ಕೇವಲ ಒಂದೇ ವರ್ಷದಲ್ಲಿ ಬರೋಬ್ಬರಿ ಒಂದು ನೂರು ಬಿಲಿಯನ್ ಡಾಲರ್ ದುಡ್ಡು ಸಂಪಾದಿಸಿ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಕೆಲವು ತಿಂಗಳುಗಳವರೆಗೂ ಮೊದಲ ಸ್ಥಾನ ಮೆಂಟೈನ್ ಮಾಡಿದ್ದರು. ಇವರಷ್ಟು ವೇಗವಾಗಿ ನಂಬರ್ ಒನ್ ಶ್ರೀಮಂತ ಪಟ್ಟಕ್ಕೇರದವರು ಮತ್ಯಾರೂ ಇಲ್ಲ.

ಸದ್ಯ ಮೊದಲ ಸ್ಥಾನಕ್ಕಾಗಿ ಕೇವಲ ಕೆಲವೇ ಮಿಲಿಯನ್ ಡಾಲರ್ ಹಣದ ಅಂತರದಲ್ಲಿ ಪೈಪೋಟಿ ನಡೆಸುತ್ತಾ ಮೂರನೇ ಸ್ಥಾನದಲ್ಲಿ ಇದ್ದಾರೆ ಎಲನ್ ಮಸ್ಕ್. Tesla, The Boaring Company, Space X, Open Ai ಮತ್ತು Star link ಎಂಬ ಕಂಪನಿಗಳ ಮಾಲೀಕನಾಗಿರುವ ಎಲಾನ್ ಮಸ್ಕ್ ಸದ್ಯ 160.6 ಬಿಲಿಯನ್ ಡಾಲರ್ ಹಣದ ಒಡೆಯ.!

ಇವರ ಬಳಿ ಇರುವ ಹಣ ಬರೋಬ್ಬರಿ ಕುವೈಟ್, ಖತರ್ ನಂತಹ 140 ಪುಟ್ಟ ದೇಶಗಳ ಜಿಡಿಪಿಗಿಂತಲೂ ಹೆಚ್ಚು..! ಇನ್ನೂ ಇಷ್ಟೆಲ್ಲ ದುಡ್ಡು ಇರುವ ಶ್ರೀಮಂತರೆಂದರೆ ಕೇಳಬೇಕೆ ಖರ್ಚು ಮಾಡಲು ಯಾವ ಮಿತಿಯು ಇರುವುದಿಲ್ಲ. ಮೊದಲನೆಯದಾಗಿ ಇವರಿಗೆ ಕಾರುಗಳ ಶೋಕಿ ಬಹಳಷ್ಟು ಇದೆ.

ಕಾರ್ ಕ್ರೇಜ್ ಎಷ್ಟರ ಮಟ್ಟಿಗೆ ಎಂದರೆ, ಕೇವಲ ರೀಸೆಂಟ್ ಮಾಡೆಲ್ ಗಳ ಮೇಲೆ ಅಷ್ಟೇ ಅಲ್ಲದೇ 1920 ರ ಆಸುಪಾಸು ಬಿಡುಗಡೆ ಹೊಂದಿರುವ ಕಾರುಗಳಿಂದ ಹಿಡಿದ ಇತ್ತೀಚಿನ ಶಕ್ತಿಶಾಲಿ ಹಾಗೂ ಹೈ ಟೆಕ್ನಾಲಜಿ ಕಾರುಗಳವರೆಗೂ ಸಾಕಷ್ಟು ಕಾರ್ ಗಳು ಇವರ ಬಳಿ ಇವೆ. ಅದರಲ್ಲೂ ಹಳೆಯ ಮಾಡೆಲ್ ಅಂದರೆ ಮಸ್ಕ್ ಗೆ ಇಷ್ಟ.

1920 ರಲ್ಲಿ ಬಿಡುಗಡೆ ಹೊಂದಿದ ಫೋರ್ಡ್ ಮಾಡೆಲ್ T, ಇವರ ಬಾಲ್ಯದ ಕನಸಿನ 1967 ರಲ್ಲಿ ಬಿಡುಗಡೆ ಮಾಡಲಾಗಿದ್ದ ಕಾರಾದ ಜಾಗ್ವಾರ್ ರೋಡಸ್ಟರ್ E ಟೈಪ್ ಇದನ್ನು ಅವರು ತಮ್ಮ ಮೊದಲ ಲಾಭಾಂಶದಲ್ಲೇ ಕೊಂಡುಕೊಂಡಿದ್ದಾರೆ. 1976 ರ ಮಾಡೆಲ್ ಲೋಟಸ್ ಎಸ್ಪಿರಿಟ್ ಈ ಕಾರನ್ನು ಜೇಮ್ಸ್ ಬಾಂಡ್ ಅವರ ಒಂದು ಚಿತ್ರದಲ್ಲಿ ಬಳಸಲಾಗಿತ್ತು.

ಇದರ ವಿಶೇಷತೆ ಎಂದರೆ ಇದು ನೀರಿಗೆ ಬಿದ್ದರೆ ಹಡಗಾಗಿ ಬದಲಾಗುತ್ತದೆ, ಇದನ್ನು ಮಸ್ಕ್ ಬರೋಬ್ಬರಿ 7.5 ಕೋಟಿ ಕೊಟ್ಟು ಖರೀದಿಸಿದ್ದಾರೆ..! 1978 ರಲ್ಲಿ ಹೊರ ಬಂದ ಬಿ ಎಂ ಡಬ್ಲ್ಯೂ 320I ಈ ಗಾಡಿಯ ವಿಶೇಷತೆ ಎಂದರೆ ಇದು 0 ದಿಂದ 100 ಕಿಲೋಮೀಟರ್ ವೇಗವನ್ನು ಕೇವಲ 10 ಸೆಕೆಂಡ್ ಗಳಲ್ಲಿ ತಲುಪಬಲ್ಲದಂತೆ..!

1997 ಮಾಡೆಲ್ ಎಕ್ಲೀರೆನ್ 1 ಇದು ಕೂಡ ಇವರ ಬಳಿ ಇದೆ. ಬಿ ಎಂ ಡಬ್ಲ್ಯೂ ಹಾಮನ್ ಕೂಡ ಇದೆ ಇನ್ನೂ ಟೆಸ್ಲಾ ರೋಡ್ಸ್ಟರ್ ಎಂಬ ಗಾಡಿಯನ್ನು ಪ್ರತಿ ದಿನ ಎಷ್ಟೋ ವರ್ಷಗಳವರೆಗೂ ತಿರುಗಾಡಿದ ನಂತರ ಫೆಬ್ರವರಿ 6 2018 ರಂದು ಒಂದು ಡಮ್ಮಿ ಡ್ರೈವರನ್ನು ಕೂರಿಸಿ ಬಾಹ್ಯಕಾಶಕ್ಕೆ ಕಳುಹಿಸಿಕೊಡಲಾಗಿದೆ..!

ಮದುವೆ ಹಾಗೂ ಮಕ್ಕಳಾದ ನಂತರ ಎಲಾನ್ ಮಸ್ಕ್ ಅವರಿಗೆ ದೊಡ್ಡ ಕಾರು ಖರೀದಿಸುವ ಅವಶ್ಯಕತೆ ಬಿದ್ದು ಆಡಿ Q7 ಗಾಡಿಯನ್ನು ಖರೀದಿ ಮಾಡಿದರು. ಪೋರ್ಶ್ 911 ಟರ್ಬೊ ಟೆಸ್ಲಾ ಮಾಡೆಲ್ ಎಸ್, ಟೆಸ್ಲಾ ಸೈಬರ್ ಟ್ರಕ್ ಕೂಡ ಇವರ ಕಾರ್ ಕಲೆಕ್ಷನ್ ನಲ್ಲಿವೆ.

ಇನ್ನೂ ಕಾರುಗಳನ್ನು ಹೊರತುಪಡಿಸಿ ಇವರ ಬಳಿ ಬರೋಬ್ಬರಿ 100 ಮಿಲಿಯನ್ ಡಾಲರ್ ಅಂದರೆ 750 ಕೋಟಿ ರೂಪಾಯಿ ಮೌಲ್ಯದ ಮನೆಗಳಿವೆ..! ಲಾಸ್ ಎಂಜಲೀಸ್ ಸಮೀಪದ ಬೆಲ್ ಏರ್ ಎಂಬ ಪ್ರದೇಶದಲ್ಲಿರುವ ಮನೆಯ ಒಟ್ಟು ಮೌಲ್ಯವೆ ಬರೋಬ್ಬರಿ 228 ಕೋಟಿ ರೂಪಾಯಿ ಬೆಲೆ ಬಾಳುತ್ತದೆ.

ಇದು ಬರೋಬ್ಬರಿ 2000 ಸ್ಕ್ವೇರ್ ಫೀಟ್ ಜಾಗದಲ್ಲಿ ನಿರ್ಮಿಸಿದ ಮನೆಯಾಗಿದೆ. ಇದರಲ್ಲಿ 7 ಬೆಡ್ ರೂಮ್ ಗಳು, ಸ್ವಿಮ್ಮಿಂಗ್ ಫೂಲ್, ಡೈನಿಂಗ್ ಹಾಲ್, ಟೆನಿಸ್ ಕೋರ್ಟ್, ಬೆಲ್ ಏರ್ ನ ಪೂರ್ತಿ ವಾತಾವರಣ ಕಾಣುವಂತೆ ಒಂದು ಜಿಮ್ ಕೂಡ ಇದೆ.

ಮತ್ತೊಂದು ಮನೆಯ ಬೆಲೆ ಬರೋಬ್ಬರಿ 7.5 ಕೋಟಿ ರೂಪಾಯಿ, ಇದರಲ್ಲಿಯೂ 3 ಬೆಡ್ ರೂಮ್ ಒಂದು ಸ್ವಿಮ್ಮಿಂಗ್ ಫೂಲ್, ಮತ್ತೆರಡು ಮನೆಗಳ ಬೆಲೆ ಕ್ರಮವಾಗಿ 180 ಕೋಟಿ ಹಾಗೂ ಇನ್ನೊಂದು 150 ಕೋಟಿ ರೂಪಾಯಿಗಳು. ಇದಷ್ಟೇ ಅಲ್ಲದೇ ಅದೇ ಬೆಲ್ ಏರ್ ಪ್ರದೇಶದಲ್ಲೇ 32 ಕೋಟಿ ರೂಪಾಯಿ ನೀಡಿ ಮತ್ತೊಂದು ಮನೆ ಖರೀದಿಸಿದರು.

ಇದರ ಸೇರ್ಪಡೆಯಿಂದ ಅದೊಂದೇ ಅತ್ಯಂತ ಪ್ರತಿಷ್ಟಿತ ಹಾಗೂ ಅತ್ಯಂತ ಸೆಕ್ಯೂರ್ ಏರಿಯಾದಲ್ಲಿ ಇವರಿಗೆ ಸೇರಿದ ನಾಲ್ಕು ಮನೆಗಳಾದವು. ಇನ್ನೂ ಮತ್ತೊಂದು ಜಾಗದಲ್ಲಿ ಅಂದರೆ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಒಂದು 100 ವರ್ಷ ಹಳೆಯ ಮನೆಯನ್ನು ಕೊಂಡುಕೊಂಡರು. ಇದರ ಸಧ್ಯದ ಬೆಲೆ ಬರೋಬ್ಬರಿ 265 ಕೋಟಿ ರೂಪಾಯಿಗಳು.

ಇನ್ನೂ ವಿಶೇಷತೆ ಎಂದರೆ ಇದರಲ್ಲಿ ಪುರಾತನ ಶೈಲಿಯ ಸೋಫಾ ಸೆಟ್, ಡೈನಿಂಗ್ ಸೆಟ್, ಹಳೆಯ ಕಾಲದ ಎಂಟ್ರೆನ್ಸ್, ಕನ್ನಡಿಗಳಿಂದ ತುಂಬಿದ ಲಿವಿಂಗ್ ರೂಮ್, ಔಟ್ ಸೈಡ್ ಸ್ವಿಮ್ಮಿಂಗ್ ಫೂಲ್ ಇವೆ. ಇಲ್ಲಿಂದ ಸ್ಯಾನ್ ಫ್ರಾನ್ಸಿಸ್ಕೋ ನಗರದ ಸೌಂದರ್ಯ ಸವಿಯಬಹುದಾಗಿದೆ.

ಇನ್ನೂ ಕ್ಯಾಲಿಫೋರ್ನಿಯದಲ್ಲಿ ತಮ್ಮ ಮಾಜಿ ಪತ್ನಿಗೆ ವಾಸಿಸಲು 30 ಕೋಟಿ ರೂಪಾಯಿ ಮೊತ್ತದ ಮನೆಯೊಂದಿದೆ. ಸದ್ಯ ಈ ಎಲ್ಲಾ ಮನೆಗಳನ್ನು ಮಾರಾಟ ಮಾಡಲು ಇಚ್ಛೆಸಿರುವ ಎಲಾನ್ ಅವರು ಒಂದು ವೆಬ್ಸೈಟ್ ನಲ್ಲಿ ಸೇಲ್ ಗಾಗಿ ಹಾಕಿದ್ದು ಆಗಿದೆ. ಇನ್ನೂ ಇಷ್ಟೆಲ್ಲ ಇರುವ ಇವರು ದಿನದ 15 ಘಂಟೆ ಕೆಲಸ ಮಾಡುತ್ತಾರಂತೆ.

ತಮ್ಮ ಕಂಪನಿಗಳ ಕೆಲಸ ತಮ್ಮ ಕಣ್ಣ ಮುಂದೆಯೇ ನಡೆಯಲಿ ಎಂದು ಅದೆಷ್ಟೋ ಸಲ ಇವರು ಫ್ಯಾಕ್ಟರಿಯಲ್ಲೇ ಇರುವ ಸೋಫಾಗಳಲ್ಲೇ ಹೆಚ್ಚು ನಿದ್ರಿಸುತ್ತಾರಂತೆ. ತಮ್ಮ ಒಂದು ನಿಮಿಷದ ಪ್ರಾಫಿಟ್ 1.4 ಕೋಟಿ ರೂಪಾಯಿ ನಷ್ಟ ಮಾಡಿಕೊಳ್ಳಲು ಇಚ್ಚಿಸದ ಇವರು ಕಮರ್ಷಿಯಲ್ ಪ್ಲೇನ್ ಗಳಲ್ಲಿ ತಿರುಗಿದರೆ ಸಮಯ ವ್ಯರ್ಥ ಎಂದು ಸ್ವಂತ ಏರ್ ಜೆಟ್ ನಲ್ಲೆ ಓಡಾಡುತ್ತಾರೆ.

ಇನ್ನೂ ಸುಲಭದಲ್ಲಿ ಹೇಳಬೇಕೆಂದರೆ ಇವರ ಬಳಿ ಇರುವ ಒಟ್ಟು ಆಸ್ತಿ ಇವರು ಬಿಸಿನೆಸ್ ಬಿಟ್ಟು ಸದ್ಯ ಇರುವ ದುಡ್ಡಿನಲ್ಲೇ ತಿಂಗಳಿಗೆ 3.5 ಲಕ್ಷ ರೂಪಾಯಿ ಖರ್ಚು ಮಾಡುತ್ತ ಕುಳಿತರು ಅವರಿಗೆ ಎಲ್ಲಾ ದುಡ್ಡು ಖಾಲೀ ಮಾಡಲು ಬರೋಬ್ಬರಿ 30 ಲಕ್ಷ ವರ್ಷಗಳು ಬೇಕಂತೆ!! ಅವರ ಬಗ್ಗೆ ಒಂದು ವಿಡಿಯೊ ಕೆಳಗಿದೆ, ಆಸಕ್ತಿ ಇದ್ದವರು ನೋಡಿ…

ಇವರ ಬಳಿ ಎರಡು ಗಲ್ಫ್ ಸ್ಟ್ರೀಮ್ ಜಿ-60 ಎಂಬ ಪ್ರೈವೇಟ್ ವಿಮಾನಗಳಿವೆ, ಇದರಲ್ಲಿ ಒಂದು ಸಲ 16 ಪ್ರಯಾಣಿಕರು ಪ್ರಯಾಣಿಸಬಹುದಂತೆ. ಇನ್ನು ಇದರಲ್ಲಿಯೇ ಒಂದು ಮಿನಿ ಕಿಚನ್ ಇದ್ದು ಅದರೊಟ್ಟಿಗೆ ಒಂದು ರೂಮ್ ಕೂಡ ಇದೆಯಂತೆ. ಇದರ ಬೆಲೆ ಬರೋಬ್ಬರಿ 490 ಕೋಟಿ ರೂಪಾಯಿಗಳು. ಅವರ ಜೀವನ ಚರಿತ್ರೆ ವಿವರಿಸುವ ಒಂದು ವಿಡಿಯೊ ಮೇಲಿದೆ ನೋಡಿ…
-ಮಂಜುನಾಥ್