ಒಂದು ಕಾಲದಲ್ಲಿ ಸಚಿನ್ – ಸೆಹ್ವಾಗ್ ರನ್ನು ಕಟ್ಟಿ ಹಾಕುತ್ತಿದ್ದ ಪಾಕಿಸ್ತಾನದ ಈ ಆಫ್ ಸ್ಪಿನ್ ಬೌಲರ್ ಈಗ ಜೀವನ ನಡೆಸಲು ಟ್ಯಾಕ್ಸಿ ಓಡಿಸುತ್ತಿದ್ದಾರೆ!
ಮಾಮೂಲಾಗಿ ಅಂತರರಾಷ್ಟ್ರೀಯ ಕ್ರಿಕೆಟಿಗರಿಗೆ ಹಣದ ಕೊರತೆ ಇರುವುದಿಲ್ಲ. ಎಲ್ಲ ಆಟಗಾರರು ಕೋಟಿಗೆ ಬಾಳುತ್ತಾರೆ. ಆದರೆ ಇದು ಭಾರತದ ಕ್ರಿಕೇಟಿಗರಿಗಷ್ಟೇ, ಎಲ್ಲ ದೇಶದ ಕ್ರಿಕೇಟಿಗರಿಗೆ ಅನ್ವಯಿಸುವುದಿಲ್ಲ. ಇತ್ತೀಚೆಗೆ ಆಸ್ಟ್ರೇಲಿಯಾ ಆಟಗಾರ ಕಾರ್ಪೆಂಟರ್ ಕೆಲಸ ಮಾಡುತ್ತಿರುವ ವಿಷಯ ವೈರಲ್ ಆಗಿತ್ತು, ಈಗ ಪಾಕಿಸ್ತಾನದ ಒಬ್ಬ ಕ್ರಿಕೆಟಿಗ ಹೊಟ್ಟೆ ಹೊರೆಯಲು ಟ್ಯಾಕ್ಸಿ ಓಡಿಸುತ್ತಿರುವ ವಿಷಯ ಬಹಿರಂಗವಾಗಿದೆ.
ಉದರ ಪೋಷಣಿಗೂ ಹಣ ಇಲ್ಲದ ಪರಸ್ಥಿತಿ ಪಾಕಿಸ್ತಾನದ ಈ ಮಾಜಿ ಕ್ರಿಕೆಟಿಗನಿಗೆ ಒದಗಿ ಬಂದಿದೆ. 1997 ರಲ್ಲಿ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ ಪಾಕಿಸ್ತಾನ ಆಫ್ ಸ್ಪಿನ್ನರ್ ಅರ್ಷದ್ ಖಾನ್ ರವರೇ ಈಗ ತಮ್ಮ ಹೊಟ್ಟೆಪಾಡಿಗಾಗಿ ಟ್ಯಾಕ್ಸಿ ಓಡಿಸುತ್ತಿರುವುದು. ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ಹೊಟ್ಟೆ ಅವರು ಉಬರ್ ಕ್ಯಾಬ್ ಓಡಿಸುತ್ತಾರೆ.

ಪಾಕಿಸ್ತಾನ ತಂಡದ ಉದಯೋನ್ಮುಖ ಸ್ಪಿನ್ ಬೌಲರ್ ಗೆ ಜೀವನೋಪಾಯಕ್ಕಾಗಿ ಟ್ಯಾಕ್ಸಿ ಓಡಿಸುವ ಸ್ಥಿತಿ ಬಂದಿರುವುದು ಶೋಚನೀಯ. ಅರ್ಷದ್ ಖಾನ್ ಮಾಮೂಲಿ ಕ್ರಿಕೇಟಿಗನಲ್ಲ, ಯಾವಾಗಲೂ ಭಾರತದ ವಿರುದ್ಧ ಆತನ ಸಾಧನೆ ಉತ್ತಮವಾಗಿರುತ್ತಿತ್ತು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ರಂಥವರನ್ನೇ ಕಟ್ಟಿ ಹಾಕಿ ವಿಕೆಟ್ ಗಳಿಸಿದ್ದಾನೆ.
ಅರ್ಷದ್ ಖಾನ್ ತಮ್ಮ ವೃತ್ತಿಜೀವನದಲ್ಲಿ 9 ಟೆಸ್ಟ್ ಮತ್ತು 58 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 32 ಟೆಸ್ಟ್ ಮತ್ತು 56 ಏಕದಿನ ವಿಕೆಟ್ ಪಡೆದಿದ್ದಾರೆ. ಅವರು ತಮ್ಮ ಕೊನೆಯ ಟೆಸ್ಟ್ ಮತ್ತು ಏಕದಿನ ಪಂದ್ಯವನ್ನು ಭಾರತ ವಿರುದ್ಧ ಆಡಿರುವುದು ವಿಶೇಷ. ಅಲ್ಲಿಂದ ಮತ್ತೆ ಆತನಿಗೆ ಅವಕಾಶವೇ ಸಿಗಲಿಲ್ಲ.

ಕ್ರಿಕೆಟ್ ಆಟಗಾರರು ಮಾಮೂಲಾಗಿ ಕೋಟ್ಯಾದೀಶರು. ಈ ಆಟಗಾರರು ತಮ್ಮ ದೇಶಕ್ಕಾಗಿ ಮಾತ್ರವಲ್ಲ, ಅನೇಕ ದೊಡ್ಡ ಕ್ರಿಕೆಟ್ ಲೀಗ್ ಗಳು, ಕೌಂಟಿಗಳು, ಕ್ಲಬ್ ಗಳು ಹೀಗೆ ಎಲ್ಲ ಕಡೆ ಆಡಿ ಕೈ ತುಂಬಾ ಸಂಪಾದನೆ ಮಾಡಬಹುದು. ಐಪಿಎಲ್, ಬಿಬಿಎಲ್, ಪಿಎಸ್ಎಲ್ ಮುಂತಾದ ಲೀಗ್ ಗಳಲ್ಲಂತೂ ಹಣದ ಹೊಳೆ ಹರಿಯುತ್ತದೆ.
ಆದರೆ ಎಲ್ಲೂ ಸಲ್ಲದ ಅರ್ಷದ್ ಖಾನ್ ಆಸ್ಟ್ರೇಲಿಯಾದಲ್ಲಿ ವಾಸವಿದ್ದು, ಅಲ್ಲಿ ಜೀವನ ನಡೆಸುವುದಕ್ಕಾಗಿ ಟ್ಯಾಕ್ಸಿ ಓಡಿಸಬೇಕಾಗಿದೆ. ಅಲ್ಲಿಯವರೇ ಆದ ಜೇವಿಯರ್ ಡೊಹೆರ್ಟಿ (Xavier Doherty) ಎಂಬ ಈ ಆಟಗಾರ ಇದೀಗ ತಮ್ಮ ಜೀವನ ನಿರ್ವಹಣೆಗಾಗಿ, ಕುಟುಂಬವನ್ನು ಪೋಷಿಸುವುದಕ್ಕಾಗಿ ಕಾರ್ಪೆಂಟರ್ ಕೆಲಸವನ್ನು ಮಾಡುತ್ತಿದ್ದಾರೆ!

ಕೆಲವು ಸಮಯದ ಹಿಂದೆ ನ್ಯೂಜಿಲ್ಯಾಂಡ್ ನ ಸ್ಟಾರ್ ಆಲ್-ರೌಂಡರ್ ಎನಿಸಿಕೊಂಡಿದ್ದ ಕ್ರಿಸ್ ಕೆನ್ಸ್ರ್ ಅವರು ರಸ್ತೆಯಲ್ಲಿ ಕೆಲಸ ಮಾಡುತ್ತಿರುವ ದೃಶ್ಯಗಳು ಕಂಡು ಬಂದಿತ್ತು. ಕುಟುಂಬದ ನಿರ್ವಹಣೆಗಾಗಿ ಅವರು ಆಕ್ಲೆಂಡಿನಲ್ಲಿ ಬಸ್ ಗಳನ್ನು ತೊಳೆಯುತ್ತಿರುವ ಹಾಗೂ ಬಸ್ ಚಾಲನೆಯನ್ನು ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದವು.
-Team Infotrend