VIDEO : ಮರಿಯ ಜೊತೆಗೆ ಹೋಗುತ್ತಿದ್ದ ಕಾಡೆಮ್ಮೆಯ ಮೇಲೆ ಎರಗಿದ ಸಿಂಹಗಳು, ಆಗ ಎಮ್ಮೆ ತೋರಿಸಿದ ಧೈರ್ಯ ಕಂಡು ಬೆರಗಾದ ನೆಟ್ಟಿಗರು! ವಿಡಿಯೊ ನೋಡಿ

ಹೆತ್ತ ತಾಯಿ ತಾನು ಜನ್ಮ ಕೊಟ್ಟ ಮಕ್ಕಳಿಗೆ ಏನಾದರೂ ಅಪಾಯ ಎದುರಾಗುತ್ತದೆ ಎಂದರೆ, ತನ್ನ ಪ್ರಾಣವನ್ನು ಪಣಕ್ಕಿಡಲು ಹಿಂದೆ-ಮುಂದೆ ಆಲೋಚನೆಯನ್ನು ಮಾಡುವುದಿಲ್ಲ. ಏಕೆಂದರೆ ಕರುಳಿನ ಬಂಧ ಅಂತಹದ್ದು. ತಾಯಿಯ ಮಮತೆಗೆ ಸರಿಸಾಟಿಯಾದ ಇನ್ನೊಂದು ಪ್ರೀತಿ ಇಡೀ ಜಗತ್ತಿನಲ್ಲಿ ಯಾವುದೂ ಇಲ್ಲ. ಈ ವಿಷಯವನ್ನು ಸಾಬೀತು ಮಾಡುವಂತಹ ಅದೆಷ್ಟೋ ಘಟನೆಗಳು ಇತಿಹಾಸದ ಉದ್ದಕ್ಕೂ ನಡೆಯುತ್ತಲೇ ಬಂದಿವೆ.

ಅದಕ್ಕೆ ವಿಶ್ವದಾದ್ಯಂತ ತಾಯಿಗೆ ನೀಡುವ ಸ್ಥಾನವನ್ನು ಬೇರೆ ಯಾರಿಗೂ ಕೂಡಾ ನೀಡಲಾಗುವುದಿಲ್ಲ. ಆಕೆ ತೋರುವಂತಹ ನಿಸ್ವಾರ್ಥ ಹಾಗೂ ಅಪರಿಮಿತವಾದ ವಾತ್ಸಲ್ಯ ಹಾಗೂ ಮಮತೆಯನ್ನು ಬೇರೆ ಯಾರಿಂದಲೂ ಕೊಡುವುದು ಎಂದಿಗೂ ಸಾಧ್ಯವಿಲ್ಲ ಎಂದೇ ಹೇಳಬಹುದು.

ತಾಯಿಯ ಮಮತೆ ಎನ್ನುವ ವಿಚಾರ ಬಂದಾಗ ಇದು ಮನುಷ್ಯ ಹಾಗೂ ಪ್ರಾಣಿಗಳಲ್ಲಿ ಬೇರೆ ಬೇರೆ ರೀತಿಯಾಗಿ ಏನೂ ಇರುವುದಿಲ್ಲ. ಪಶು ಸಂಕುಲದಲ್ಲಿಯೂ ಪ್ರಾಣಿಗಳು ತಮ್ಮ ಮರಿಗಳ ಮೇಲೆ ಅಪಾರವಾದ ಪ್ರೀತಿ, ವಾತ್ಸಲ್ಯ ಹಾಗೂ ಮಮತೆಯನ್ನು ತೋರಿಸುತ್ತದೆ. ವಿಶೇಷವಾಗಿ ದಟ್ಟವಾದ ಅರಣ್ಯಗಳಲ್ಲಿ ವಾಸಿಸುವ ಪ್ರಾಣಿಗಳು.

ಅವು ತಮ್ಮ ಮರಿಗಳಿಗೆ ಏನಾದರೂ ತೊಂದರೆಯಾಗುತ್ತದೆ ಎನ್ನುವ ಅನುಮಾನ ಬಂದ ಕೂಡಲೇ ಅವುಗಳ ರಕ್ಷಣೆಗೆ ಮುಂದಾಗುತ್ತವೆ. ಇಂತಹ ಪರಿಸ್ಥಿತಿಗಳಲ್ಲಿ ಅವು ತಮ್ಮ ಮರಿಗಳ ರಕ್ಷಣೆಯ ವಿಚಾರದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡಲು ಮುಂದಾಗಿ ಬಿಡುತ್ತವೆ. ಅದಕ್ಕೆ ತಾಜಾ ಉದಾಹರಣೆ ಈ ಕೆಳಗಿನ ವಿಡಿಯೊ…

ಸೋಶಿಯಲ್ ಮೀಡಿಯಾಗಳಲ್ಲಿ ಪ್ರಾಣಿಗಳು ತಮ್ಮ ಮರಿಗಳಿಗಾಗಿ ಹೋ’ರಾಡುವ ಅನೇಕ ದೃಶ್ಯಗಳ ವಿಡಿಯೋಗಳು ಈಗಾಗಲೇ ವೈರಲ್ ಆಗಿವೆ. ಪ್ರಸ್ತುತ ಅಂತಹದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಅಪಾರವಾದ ಮೆಚ್ಚುಗೆಯನ್ನು ಪಡೆದಿದೆ.

ಹೇಗೆ ಒಂದು ಕಾಡೆಮ್ಮೆ ತನ್ನ ಮರಿಯನ್ನು ಕಾಪಾಡಿಕೊಳ್ಳಲು ಸಿಂಹದ ದಂಡಿನ ಮೇಲೆ ಧೈರ್ಯವಾಗಿ ದಾ’ಳಿ ಇಡುತ್ತದೆ ಎಂಬುದನ್ನು ನೋಡಿದ ನೆಟ್ಟಿಗರು, ಆ ತಾಯಿಯ ಪ್ರೇಮಕ್ಕೆ ಸಲಾಂ ಎನ್ನುತ್ತಿದ್ದು, ಕಾಮೆಂಟ್ ಗಳನ್ನು ಮಾಡಿ ಭರಪೂರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಎಲ್ಲರೂ ತಾಯಿ ಪ್ರೀತಿಯನ್ನು ಹೊಗಳುವವರೇ.

ವನ್ಯ ಜೀವಿಗಳ ವಿಶೇಷ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಆಗಾಗ ಹಂಚಿಕೊಳ್ಳುವ ಭಾರತೀಯ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವಿಡಿಯೋ ಒಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಗಮನಿಸಿದಾಗ ಅರಣ್ಯದ ಒಂದು ಭಾಗದಲ್ಲಿ ಕಾಡೆಮ್ಮೆಯೊಂದು ತನ್ನ ಮರಿಯ ಜೊತೆಗೆ ನಡೆದು ಹೋಗುತ್ತಿರುತ್ತದೆ.

ಅದೇ ಸಂದರ್ಭದಲ್ಲಿ ಅವುಗಳನ್ನು ಬೇಟೆಯಾಡಲು ಹೊಂಚು ಹಾಕಿದಂತಹ ಸಿಂಹಗಳ ಗುಂಪೊಂದು ಹಿಂದೆ ಬರುತ್ತದೆ, ಏಕಾಏಕೀ ಎಮ್ಮೆಯನ್ನು ಸುತ್ತುವರಿಯುತ್ತವೆ.‌ ಯಾವಾಗ ತನ್ನ ಮರಿಗೆ ಅ’ಪಾ’ಯ ಎದುರಾಗುವುದೆಂದು ಕಾಡೆಮ್ಮೆಗೆ ಅನಿಸಿತೋ ಕೂಡಲೇ ಅದು ತನ್ನ ಮರಿಯನ್ನು ರಕ್ಷಿಸಲು ಮುಂದಾಗಿ ಬಿಡುತ್ತದೆ.

ಎದುರಿಗೆ ಸಿಂಹಗಳ ಗುಂಪೇ ಇದ್ದರೂ ಭಯ ಪಡದ ಆ ತಾಯಿ ಸಿಂಹಗಳ ಮೇಲೆ ಧಾ’ಳಿ ಇಡುತ್ತದೆ. ಎಮ್ಮೆಯ ಧಾ’ಳಿಗೆ ಬೆದರಿದ ಸಿಂಹಗಳು ಅಲ್ಲಿಂದ ಓಡುತ್ತವೆ. ಆಗಲೂ ಅವುಗಳನ್ನು ಬೆನ್ನಟ್ಟಿ ಹೋಗುವ ಎಮ್ಮೆಯು ತನ್ನ ಪ್ರಾ’ಣದ ಬಗ್ಗೆ ಭ’ಯವನ್ನು ತೊರೆದು ತನ್ನ ಮರಿಯ ರಕ್ಷಣೆಗಾಗಿ ಸಿಂಹಗಳನ್ನು ಎದುರುಹಾಕಿಕೊಳ್ಳಲು ಸಿದ್ಧವಾಗಿರುವುದು ಸ್ಪಷ್ಟವಾಗಿ ಈ ವಿಡಿಯೋದಲ್ಲಿ ಕಾಣುತ್ತದೆ.

ಸುಶಾಂತ್ ಅವರು ಹಂಚಿಕೊಂಡಿರುವ ಈ ವಿಡಿಯೋವನ್ನು ಈಗಾಗಲೇ 29 ಸಾವಿರಕ್ಕಿಂತಲೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 500ಕ್ಕೂ ಅಧಿಕ ಜನರು ರಿಟ್ವೀಟ್ ಮಾಡಿದ್ದರೆ, ಮೂರು ಸಾವಿರಕ್ಕಿಂತ ಹೆಚ್ಚು ಮಂದಿ ಲೈಕ್ ಗಳನ್ನು ನೀಡಿದ್ದಾರೆ. ವಿಡಿಯೋ ನೋಡಿ ಕಾಮೆಂಟ್ ಮಾಡಿದ ನೆಟ್ಟಿಗರೊಬ್ಬರು ತನ್ನ ಮಕ್ಕಳಿಗಾಗಿ ಸಾ’ವಿನ ಜೊತೆ ಹೋರಾಡಲು ಸಿದ್ಧವಾಗಿ ಬಿಡುತ್ತಾಳೆ ತಾಯಿ, ಅದು ಪ್ರಾಣಿಯೇ ಆದರೂ ಸರಿ ಎಂದು ಹೇಳಿದ್ದಾರೆ.

ಮತ್ತೊಬ್ಬರು ತಾಯಿಯ ಧೈರ್ಯ ಹಾಗೂ ಬಲಕ್ಕೆ ಬೇರೊಂದು ಹೋಲಿಕೆಯಿಲ್ಲ ಎಂದು ಹೇಳಿದ್ದಾರೆ. ಯಾವುದೇ ರೂಪದಲ್ಲಿ ಇರಲಿ ತಾಯಿ ತಾಯಿಯೇ ಆಗಿರುತ್ತಾಳೆ, ತನ್ನ ಮಕ್ಕಳನ್ನು ಸದಾ ಕಾಯುತ್ತಾಳೆ ಎಂದು ಒಬ್ಬರು ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಹೀಗೆ ನೆಟ್ಟಿಗರು ವಿವಿಧ ಕಾಮೆಂಟ್ ಗಳನ್ನು ಮಾಡುವ ಮೂಲಕ ಅಪಾರವಾದ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.