ನಾಯಿಯು ದುರ್ವಾಸನೆಯ ಹೂಸು ಬಿಡುತ್ತಿದೆಯೆಂದು ಸಾವಿರಾರು ರೂ.ಖರ್ಚು ಮಾಡಿದ ಮಹಿಳೆ, ಗಂಡ ನಿಜಾಂಶ ಬಾಯ್ಬಿಟ್ಟಾಗ ಆಗಿತ್ತು ಶಾಕ್
ಒಬ್ಬಳು ಗರ್ಭಿಣಿ ಸ್ತ್ರೀಯ ಕಥೆಯೊಂದು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಪ್ರಸ್ತುತ ಮಹಿಳೆ ಯಾರು ಮತ್ತು ಎಲ್ಲಿಯವಳು ಎಂಬುದು ಗೊತ್ತಾಗಿಲ್ಲ. ಆದರೆ ಒಂದು ಪ್ರಸಿದ್ಧ ಸೋಶಿಯಲ್ ಮೀಡಿಯಾ ಸೈಟ್ನಲ್ಲಿ ಆಕೆ ತನ್ನ ಸ್ವಂತದ ಕಥೆಯನ್ನು ಹೇಳಿದ್ದಾಳೆ. ಈ ಪೋಸ್ಟ್ ಕಳೆದ ವಾರದಲ್ಲಿ ಜಗತ್ತಿನ ತುಂಬ ಅತಿ ಹೆಚ್ಚು ವೈರಲ್ ಆದ ಪೋಸ್ಟ್ ಆಗಿದೆ. ತುಂಬಾ ವಿಚಿತ್ರವಾದ ಘಟನೆಯೊಂದು ಮಹಿಳೆಯ ಜೊತೆಗೆ ನಡೆದಿದೆ. ತನ್ನ ಜೊತೆಗಿದ್ದ ಪ್ರಸಂಗವನ್ನು ಈ ಮಹಿಳೆಯು ತುಂಬಾ ಪ್ರಾಮಾಣಿಕವಾಗಿ ಶೇರ್ ಮಾಡಿಕೊಂಡಿದ್ದಾಳೆ. ಅದನ್ನು ಕೇಳಿದ ನಂತರ ನಿಮಗೂ ಸಹ ನಗು ತಡೆಯಲಿಕ್ಕಿಲ್ಲ.
ಕಳೆದ ತಿಂಗಳು ಈಕೆ ಊಟ ಮಾಡುವಾಗ ತುಂಬಾ ಕೆಟ್ಟ ವಾಸನೆ ಬರುವ ಅನುಭವವಾಯಿತಂತೆ. ಮನೆಯಲ್ಲಿ ಈಕೆಯ ಜೊತೆಗೆ ಪತಿ ಹಾಗೂ ಒಂದು ಸಾಕು ನಾಯಿ ಜೆರ್ರಿ ಈ ಮೂವರಷ್ಟೇ ಇದ್ದರಂತೆ. ಆ ವಾಸನೆ ಇಷ್ಟೊಂದು ದುರ್ವಾಸನೆಯಿಂದ ಕೂಡಿತ್ತೆಂದರೆ ಮಹಿಳೆಯು ಊಟವನ್ನೇ ಬಿಟ್ಟು ಬೇರೆ ಕೋಣೆಯಲ್ಲಿ ಹೋದಳು. ಆದರೂ ಆಕೆಗೆ ಬಹಳ ಹೊತ್ತಿನವರೆಗೆ ಕೆಟ್ಟ ವಾಸನೆ ಮೂಗಿನಲ್ಲಿ ಕುಳಿತ ಹಾಗೆ ಎನಿಸುತ್ತಿತ್ತು ಎಂದು ಮಹಿಳೆ ಹೇಳುತ್ತಾಳೆ. ಅನಂತರ ಪತಿಯು ಆಕೆಗೆ ನಾಯಿ ಗ್ಯಾಸ್ ಬಿಡುತ್ತಿದೆ ಎಂದು ಹೇಳಿದನು. ಎರಡನೆಯ ದಿನವೂ ವಾಸನೆ ಅಲ್ಪಸ್ವಲ್ಪ ಮಧ್ಯದಲ್ಲಿ ಬರುತ್ತಿತ್ತು. ಹೀಗಾಗಿ ಆ ಮಹಿಳೆಗೆ ಮನೆಯಲ್ಲಿರುವುದು ಅಸಾಧ್ಯವಾಯಿತು. ಆರೋಗ್ಯದ ದೃಷ್ಟಿಯಿಂದ ಮಹಿಳೆಯು ನಾಯಿಯನ್ನು ಪ್ರಾಣಿಗಳ ಡಾಕ್ಟರ್ ಕಡೆಗೆ ತೆಗೆದುಕೊಂಡು ಹೋದಳು.
ನಾಯಿಯು ಸತತವಾಗಿ ಯಾಕೆ ಗ್ಯಾಸ್ ಬಿಡುತ್ತದೆ ಎಂದು ಡಾಕ್ಟರ್ ಅನೇಕ ಟೆಸ್ಟುಗಳನ್ನು ಮಾಡಿದರು. ಜೊತೆಗೆ ತಿಂಗಳುಗಳವರೆಗೆ ಔಷಧಿ ಉಪಚಾರವನ್ನು ಮುಂದುವರಿಸಿದನು. ಹೆಚ್ಚುಕಡಿಮೆ ಒಂದು ತಿಂಗಳು ಆ ಮಹಿಳೆಯು ತಮ್ಮ ಸಾಕು ನಾಯಿಯನ್ನು ಡಾಕ್ಟರ್ ಕಡೆಗೆ ಕರೆದುಕೊಂಡು ಹೋಗುತ್ತಿದ್ದಳು. ಇದಕ್ಕಾಗಿ ಆ ಮಹಿಳೆಯು ಸಾಕಷ್ಟು ಹಣವನ್ನು ಸಹ ಖರ್ಚು ಮಾಡಿದಳು.
vet ನ ಸಲಹೆಯಂತೆ ನಾಯಿಯ ಡಯಟ್ ಬದಲಾಯಿಸಿದರು. ಆದರೂ ಕೊಳೆತ ತತ್ತಿಯ ವಾಸನೆ ಮಾತ್ರ ಆಕೆಯನ್ನು ಬಿಡುತ್ತಿರಲಿಲ್ಲ. ಅದರಲ್ಲಿ ಆಕೆ ಗರ್ಭವತಿಯಾಗಿರುವುದರಿಂದ ಮತ್ತಷ್ಟು ಸಮಸ್ಯೆಯಾಯಿತು. ಈ ಕಾರಣದಿಂದ ಸುಮಾರು ತಿಂಗಳುಗಟ್ಟಲೆ ನೈರಾಷ್ಯದಲ್ಲಿಯೇ ಇದ್ದಳು.
ಕೊನೆಗೆ ಕೆಲವು ದಿ��