Viral Video: ಹಕ್ಕಿಯ ಬೇಟೆಯಾಡಲು ವಿದ್ಯುತ್ ತಂತಿಯನ್ನು ಏರಿದ ಹಾವು: ವೀಡಿಯೋ ನೋಡಿ ಶಾಕ್ ಆದ ಜನ
ಪ್ರಾಣಿಗಳಿಗೆ ಪ್ರಕೃತಿಯೇ ಒಂದು ಪಾಠ ಶಾಲೆ ಇದ್ದಂತೆ. ಅವು ತಮ್ಮ ಜೀವನ ನಿರ್ವಹಣೆಯ ಪಾಠಗಳನ್ನು ಪ್ರಕೃತಿಯ ಮಡಿಲಿನಲ್ಲೇ ಕಲಿಯುತ್ತವೆ. ಆದರೆ ಮನುಷ್ಯ ಮಾತ್ರ ಸದಾ ಎಷ್ಟೇ ಕಲಿತರೂ ಸಹಾ ಅವನು ಪ್ರಕೃತಿಯ ಮುಂದೆ ಸದಾ ಚಿಕ್ಕವನೇ ಎನ್ನುವುದು ಮಾತ್ರ ವಾಸ್ತವ. ಪ್ರಕೃತಿಯ ಮಡಿಲಿನಲ್ಲಿ ಅನೇಕ ವೈವಿದ್ಯಮಯವಾದ ಜೀವಿಗಳು ಇವೆ. ಈ ಜೀವಿಗಳ ಜೀವನ ಶೈಲಿಯು ಸಹಾ ಬಹಳ ಆಶ್ಚರ್ಯ ಉಂಟು ಮಾಡುತ್ತದೆ. ಹಾವುಗಳು ನಮ್ಮ ಪರಿಸರದಲ್ಲಿ ಒಂದು ವಿಸ್ಮಯಕಾರಿ ಜೀವಿಗಳು ಎನಿಸಿವೆ. ಹಾವುಗಳನ್ನು ಕಂಡರೆ ಜನರು ಭಯ ಪಡುವರು. ಹಾವುಗಳನ್ನು ಕಂಡರೆ ಬಹಳ ದೂರ ಓಡಿ ಹೋಗುತ್ತಾರೆ. ಇಂತಹ ಹಾವೊಂದು ತನ್ನ ಬೇಟೆಯನ್ನು ಹಿಡಿಯಲು ಮಾಡಿದ ಪ್ರಯತ್ನದ ಒಂದು ವೀಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಹಾವಿನ ಈ ವೀಡಿಯೋ ನಿಜಕ್ಕೂ ಬಹಳ ರೋಚಕ ಎನಿಸುತ್ತದೆ. ಅಲ್ಲದೇ ಆಹಾರಕ್ಕಾಗಿ ಜೀವಿಗಳು ಏನೆಲ್ಲಾ ಪ್ರಯತ್ನವನ್ನು ಮಾಡುತ್ತವೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ಆಹಾರಕ್ಕಾಗಿ ಪ್ರಾಣಿ ಪಕ್ಷಿಗಳು ಹೇಗೆಲ್ಲಾ ಸಾಹಸಗಳನ್ನು ಮಾಡುತ್ತವೆ ಎನ್ನುವುದನ್ನು ನಾವು ನೋಡಿದಾಗ, ಇದು ಉಳಿವಿಗಾಗಿ ಹೋರಾಟ ಎನ್ನುವ ಡಾರ್ವಿನ್ ನ ವಿಕಾಸ ಸಿದ್ಧಾಂತವನ್ನು ನಮಗೆ ನೆನಪಿಸುತ್ತದೆ. ಹಾಗಾದರೆ ಈ ವೀಡಿಯೋದಲ್ಲಿ ಅಂತಹುದೇನಿದೆ?? ಈ ವೀಡಿಯೋ ವೈರಲ್ ಆಗಲು ಕಾರಣವೇನು?? ಎನ್ನುವ ಪ್ರಶ್ನೆಗಳು ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ.
ವೀಡಿಯೋದಲ್ಲಿ ನೋಡಿದಾಗ, ಹಾವೊಂದು ಹಕ್ಕಿಯನ್ನು ಹಿಡಿಯುವ ಸಲುವಾಗಿ ಎತ್ತರದಲ್ಲಿರುವ ವಿದ್ಯುತ್ ತಂತಿಯ ಮೇಲೆ ಏರಿದೆ. ಅದು ತಂತಿಗೆ ಸುತ್ತಿಕೊಂಡು ಹರ ಸಾಹಸವನ್ನು ಮಾಡುತ್ತಾ ತಂತಿಯ ಮೇಲೆ ಕುಳಿತಿದ್ದ ಹಕ್ಕಿಯನ್ನು ಹಿಡಿಯಲು ಹೊರಟಿದೆ.
ಹಕ್ಕಿಯು ಸಹಾ ಹಾವನ್ನು ನೋಡಿ ಭಯ ಪಡದೆ ಅಲ್ಲೇ ಕುಳಿತಿದೆ. ಹಾವು ಹತ್ತಿರ ಬಂದಾಗ ಹಕ್ಕಿ ಸ್ವಲ್ಪ ದೂರ ಹಾರಿ ಕೂರುತ್ತದೆ. ಆದರೆ ಹಾವು ಮಾತ್ರ ಆಸೆಯನ್ನು ಬಿಡದೆ ಹಕ್ಕಿಯನ್ನು ಹಿಡಿಯಲು ಮತ್ತೆ ತಂತಿಯ ಮೇಲೆ ಸಾಹಸವನ್ನು ಮಾಡುತ್ತಾ ಮುಂದಕ್ಕೆ ಸಾಗುತ್ತದೆ.
ಅದೇ ರೀತಿಯ ಇನ್ನೊಂದು ದೃಶ್ಯದಲ್ಲಿ ನಾವು ಗಮನಿಸಿದ ಅಲ್ಲೊಂದು ಹಾವು ತಂತಿಯ ಮೇಲಿಂದ ಬಂದು, ಅನಂತರ ಒಂದು ಆಂಟೆನಾ ಮೇಲಿಂದ ಕೆಳಕ್ಕೆ ಇಳಿದು, ಅಲ್ಲೊಂದು ಹಕ್ಕಿಯ ತಲೆಯನ್ನು ತನ್ನ ಹಲ್ಲಿನಿಂದ ಕಚ್ಚಿ ಹಿಡಿದು ಮೇಲಕ್ಕೆ ಎತ್ತಿಕೊಂಡು ಹೋಗುವುದನ್ನು ನಾವು ನೋಡಬಹುದಾಗಿದೆ. ಹಾವು ತನ್ನ ಆಹಾರಕ್ಕಾಗಿ ಈ ರೀತಿಯೆಲ್ಲಾ ಸಾಹಸಗಳನ್ನು ಮಾಡುವುದು ನೋಡಿದಾಗ ಒಮ್ಮೆ ವಿಸ್ಮಯ ಎನಿಸದೇ ಇರಲಾರದು. ಹಾವಿನ ಈ ವೀಡಿಯೋ ಬಹಳ ರೋಮಾಂಚಕಾರಿ ಎನಿಸುತ್ತದೆ. ವೈರಲ್ ಆದ ಈ ವೀಡಿಯೋವನ್ನು ಲಕ್ಷಗಟ್ಟಲೆ ಜನರು ವೀಕ್ಷಣೆಯನ್ನು ಮಾಡಿದ್ದಾರೆ.
ವಿಡಿಯೋ ನೋಡಿ
ಸುಮಾರು 26 ಸಾವಿರಕ್ಕೂ ಅಧಿಕ ಮಂದಿ ಈ ವೀಡಿಯೋಗೆ ಲೈಕ್ ಗಳನ್ನು ನೀಡಿದ್ದು, ಎರಡು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಎರಡು ವೀಡಿಯೋಗಳನ್ನು ಮರ್ಜ್ ಮಾಡಿ ಮೋಸ ಮಾಡಿರುವೆಯಾ?? ಎಂದು ವೀಡಿಯೋ ಶೇರ್ ಮಾಡಿದವರನ್ನು ಬೈದಿದ್ದಾರೆ. ಇನ್ನೂ ಕೆಲವರು ಹಾವಿನ ಸಾಹಸವನ್ನು ಮೆಚ್ಚಿ ಹೊಗಳಿದ್ದಾರೆ. ಹಾವು ಎರಡು ತಂತಿಗಳ ಮೇಲೆ ಬಂದಾಗ ವಿದ್ಯುತ್ ಹರಿದು ಸಾಯಬೇಕಿತ್ತು, ಏಕೆ ಹಾವು ಸಾಯಲಿಲ್ಲ?? ಎಂದು ಪ್ರಶ್ನೆ ಮಾಡಿದ್ದಾರೆ.