ಈ ಸರ್ಕಾರಿ ಸಂಸ್ಥೆಗೊಂದು ಸೂಕ್ತ ಹೆಸರನ್ನು ಸೂಚಿಸಿ ಬರೋಬ್ಬರಿ 15 ಲಕ್ಷ ರೂ.ಗಳನ್ನು ಗೆಲ್ಲಿ !!!
ನಿಮಗೆ ಒಂದು ವೇಳೆ ಮನೆಯಲ್ಲಿಯೇ ಕುಳಿತು ಬುದ್ಧಿಯಿಂದ ಹಣ ಗಳಿಸಬೇಕೆಂಬ ಆಸೆ ಇದ್ದರೆ ಬುದ್ಧಿವಂತರಾದ ನಿಮಗೆ ಇದು ಸುವರ್ಣ ಅವಕಾಶವೆಂದು ಹೇಳಬೇಕು. ಯಾಕೆಂದರೆ ಸರಕಾರ ಜನರಿಗೆ 15 ಲಕ್ಷ ರೂಪಾಯಿಗಳನ್ನು ಗೆಲ್ಲುವ ಅವಕಾಶ ನೀಡುತ್ತಿದೆ. ಕೇಂದ್ರ ತನ್ನ 2021 ರ ಬಜೆಟ್ ನಲ್ಲಿ ಮೂಲ ಸೌಲಭ್ಯಗಳ ನಿಧಿಗಾಗಿ ಅದರಲ್ಲಿಯೂ ವಿಶೇಷವಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಗಾಗಿ ಯೋಜನೆ ಜಾಹೀರು ಮಾಡಿದೆ. ರಾಷ್ಟ್ರೀಯ ಮೂಲಭೂತ ಸೌಲಭ್ಯಗಳ ಅಡಿಯಲ್ಲಿ 2024-25 ವರೆಗೆ 7000 ಪ್ರಾಜೆಕ್ಟ್ ಗಳ ಮೇಲೆ 111 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮಾಡುವ ಉದ್ದೇಶ ಕೇಂದ್ರ ಹೊಂದಿದೆ. My Gov India ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೇಲೆ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಈ ಯೋಜನೆಗಳ ಅನುಷ್ಠಾನ ಕಾರ್ಯರೂಪಕ್ಕೆ ತರಲು ಸಮಯಕ್ಕೆ ಸರಿಯಾಗಿ ದೊಡ್ಡಪ್ರಮಾಣದಲ್ಲಿ ಹಣದ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ತಾವುಗಳು ಮುಂಬರುವ ಆಗಸ್ಟ್ 15 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಸ್ಪರ್ಧೆಯಲ್ಲಿ ಗೆಲ್ಲುವರಿಗೆ ಪ್ರಶಸ್ತಿಯ ಸ್ವರೂಪದಲ್ಲಿ 15 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.
ಇದಕ್ಕಾಗಿ ಈ ಕೆಲಸ ಮಾಡಬೇಕಾಗುತ್ತದೆ.
ಅಭಿವೃದ್ಧಿ ಮತ್ತು ಹಣಕಾಸು ಸಚಿವಾಲಯವು ಜನರಿಂದ ಡೆವಲಪ್ಮೆಂಟ್ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ (DFI) ಸಲುವಾಗಿ ಸಂಸ್ಥೆಯ ಹೆಸರು, ಅದಕ್ಕಾಗಿ ಒಂದು ಟ್ಯಾಗ್ ಲೈನ್ ಹಾಗೂ ಲೋಗೋ ಡಿಸೈನ್ ಸೂಚಿಸಲು ಆಮಂತ್ರಿಸಿದೆ. ನಿಮ್ಮ ಕೆಲಸ ಮೇಲಿನ ಈ ಮೂರು ಕೆಲಸಕ್ಕೆ ಸಂಬಂಧಿಸಿದ್ದು ಆಗಿರಬೇಕು.
ಹೆಸರು ಟ್ಯಾಗ್ ಲೈನ್ ಮತ್ತು ಲೋಗೋ ನಲ್ಲಿ ಡೆವಲಪ್ಮೆಂಟ್ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ನ ಸ್ಥಾಪನೆಯ ಹಿಂದಿನ ಉದ್ದೇಶ ಹೊಂದಿರಬೇಕು. ಹೆಸರು ಟ್ಯಾಗ್ ಲೈನ್ ಮತ್ತು ಲೋಗೋ ಇವು ಮೂರು ಬೇರೆ ಬೇರೆ ಆಗಿರಬೇಕು. ಆದರೆ ಇವುಗಳಲ್ಲಿ ಒಂದಕ್ಕೊಂದು ಸಾಮ್ಯತೆ ಕಂಡು ಬರುವದು ಅವಶ್ಯಕವಾಗಿದೆ.

ನೀವು ಸ್ಪರ್ಧೆಯಲ್ಲಿ ನಿಮ್ಮ ಹೆಸರನ್ನು ಈ ರೀತಿಯಾಗಿ ನೋಂದಾಯಿಸಬಹುದು.
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸಲುವಾಗಿ ಎಲ್ಲಕ್ಕೂ ಮೊದಲು mygov.in ಈ ಪೋರ್ಟಲ್ ಮೇಲೆ ಹೋಗಬೇಕಾಗುವುದು. ಇಲ್ಲಿ ನಿಮಗೆ ಕಾಂಟೆಸ್ಟ್ ಮೇಲೆ ಹೋಗಿ ಲಾಗಿನ್ ಟು ಪಾರ್ಟಿಸಿಪೇಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು. ತದನಂತರ ನೋಂದಣಿಯ ವಿವರಗಳನ್ನು ಭರ್ತಿ ಮಾಡಬೇಕು. ನೋಂದಣಿ ಮಾಡಿದ ನಂತರ ನಿಮ್ಮ ಎಂಟ್ರಿ ಸಬ್ ಮಿಟ್ ಮಾಡಬೇಕು.
ಪ್ರಶಸ್ತಿಯ ಸ್ವರೂಪ ಈ ರೀತಿಯಾಗಿದೆ….
ಪ್ರಥಮ ಬಹುಮಾನ- 5 ಲಕ್ಷ ರೂಪಾಯಿಗಳು.
ದ್ವಿತೀಯ ಬಹುಮಾನ- 3 ಲಕ್ಷ ರೂಪಾಯಿಗಳು.
ತೃತೀಯ ಬಹುಮಾನ- 2 ಲಕ್ಷ ರೂಪಾಯಿಗಳು.
ಟ್ಯಾಗ್ ಲೈನ್ ಸಲುವಾಗಿ…
ಪ್ರಥಮ ಬಹುಮಾನ- 5 ಲಕ್ಷ ರೂಪಾಯಿಗಳು.
ದ್ವಿತೀಯ ಬಹುಮಾನ- 3 ಲಕ್ಷ ರೂಪಾಯಿಗಳು.
ತೃತೀಯ ಬಹುಮಾನ- 2 ಲಕ್ಷ ರೂಪಾಯಿಗಳು.
ಲೋಗೋ ಸಲುವಾಗಿ…..
ಪ್ರಥಮ ಬಹುಮಾನ- 5 ಲಕ್ಷ ರೂಪಾಯಿಗಳು.
ದ್ವಿತೀಯ ಬಹುಮಾನ- 3 ಲಕ್ಷ ರೂಪಾಯಿಗಳು.
ತೃತೀಯ ಬಹುಮಾನ- 2 ಲಕ್ಷ ರೂಪಾಯಿಗಳು.