ಭಾರತವನ್ನು ನಕಲಿಸಿ ಧ್ವಜಗಳನ್ನು ರೂಪಿಸಿಕೊಂಡ ದೇಶಗಳಿವು: ಇವುಗಳ ಧ್ವಜ ಅಕ್ಷರಶಃ ಭಾರತದ ತ್ರಿವರ್ಣದ ನಕಲಾಗಿದೆ!
ನಮ್ಮ ಭಾರತ ದೇಶವು ಶತಮಾನಗಳ ಕಾಲ ಬ್ರಿಟಿಷ್ ಆಳ್ವಿಕೆಗೆ ಒಳಪಟ್ಟು, ಅನುಭವಿಸಿದ ನ ರಕ ಯಾತನೆಯು ಹಾಗೂ ಬ್ರಿಟೀಷರ ದಾಸ್ಯದಿಂದ ಭಾರತವನ್ನು ಮುಕ್ತಗೊಳಿಸಲು ಅದೆಷ್ಟೋ ಜನ ದೇಶಪ್ರೇಮಿ ಗಳು ತಮ್ಮ ತನು, ಮನ, ಧನ ಹಾಗೂ ಪ್ರಾಣವನ್ನು ತ್ಯಾಗ ಮಾಡಿದ್ದು ಒಂದು ಮಹೋನ್ನತ ಇತಿಹಾಸ. ಅನೇಕ ದೇಶ ಪ್ರೇಮಿಗಳ ತ್ಯಾಗದ ಫಲದಿಂದ ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯವು ದಕ್ಕಿತು. ಭಾರತ ಸ್ವತಂತ್ರವಾದ ಮೇಲೆ ನಾವೆಲ್ಲರೂ ಸಹಾ ಸಂವಿಧಾನದ ಮುಖಾಂತರ ನಮ್ಮ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ಭಾರತದ ರಾಷ್ಟ್ರ ಧ್ವಜ, ನಮ್ಮ ತ್ರಿವರ್ಣ ಧ್ವಜಕ್ಕೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮಹತ್ವವಾದ ಸ್ಥಾನವಿದೆ.
ನಮ್ಮ ತ್ರಿವರ್ಣ ಧ್ವಜದಲ್ಲಿ ಇರುವ ಮೂರು ಬಣ್ಣಗಳು ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಂತಹ ಪ್ರತಿಯೊಬ್ಬ ಕ್ರಾಂತಿಕಾರಿಗಳಿಗೂ ಒಂದು ರೀತಿಯಲ್ಲಿ ಶಕ್ತಿಯನ್ನು ಹಾಗೂ ನವ ಚೈತನ್ಯವನ್ನು ತುಂಬಿದ್ದವು ಎಂದರೆ ತಪ್ಪಾಗಲಾರದು. ಇಂದಿಗೂ ನಾವು ತ್ರಿವರ್ಣ ಧ್ವಜವನ್ನು ನೋಡಿದಾಗ, ನಮ್ಮೊಳಗೂ ಸಹಾ ಒಂದು ಹೊಸ ಚೈತನ್ಯ, ಹೊಸ ಹುಮ್ಮಸ್ಸು ಮೂಡಿ ಬರುತ್ತದೆ.

ನಮ್ಮ ತ್ರಿವರ್ಣವು ನಮ್ಮ ದೇಶದಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಇದೇ ವೇಳೆ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿನ ಭಾರತದ ಧ್ವಜವನ್ನು ಹೋಲುತ್ತವೆ. ಆ ದೇಶಗಳು ನಮ್ಮ ರಾಷ್ಟ್ರ ಧ್ವಜದ ವಿನ್ಯಾಸವನ್ನು ಕದ್ದಿರಬಹುದು ಆದರೆ ನಮ್ಮ ದೇಶದಂತಹ ಐಕ್ಯತೆಯನ್ನಲ್ಲ.

ಹಾಗಾದರೆ ನಾವಿಂದು ನಮ್ಮ ಭಾರತದ ಧ್ವಜವನ್ನು ಹೋಲುವ ಬೇರೆ ದೇಶದ ಧ್ವಜಗಳು, ಆ ದೇಶಗಳ ಬಗ್ಗೆ ತಿಳಿಯೋಣ. ಬೊಲಿವಿಯಾ, ನೈಜರ್ ಹಾಗೂ ಘಾನಾ ದೇಶಗಳ ರಾಷ್ಟ್ರ ಧ್ವಜಗಳನ್ನು ಗಮನಿಸಿದಾಗ ಅಲ್ಲಿ ನಮ್ಮ ತ್ರಿವರ್ಣ ಧ್ವಜದ ಹೋಲಿಕೆಗಳು ಬಹಳ ಸ್ಪಷ್ಟವಾಗಿ ಕಾಣುವುದನ್ನು ನಾವು ನೋಡಬಹುದು. ಘಾನಾ ದೇಶದ ಧ್ವಜವು ಮೂರು ಬಣ್ಣದ ಪಟ್ಟಿಗಳನ್ನು ಹೊಂದಿದೆ. ಅದರ ಮಧ್ಯದಲ್ಲಿ ನಕ್ಷತ್ರವಿದೆ.

ಘಾನಾದ ರಾಷ್ಟ್ರಧ್ವಜದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೆ ಒಂದು ಕ್ಷಣ ಅದು ಭಾರತದ ತ್ರಿವರ್ಣದಂತೆ ಕಾಣುವುದು. ಆದರೆ ಅದರ ಮಧ್ಯದಲ್ಲಿ ಇರುವ ನಕ್ಷತ್ರದಿಂದ ಮಾತ್ರವೇ ವ್ಯತ್ಯಾಸ ಎನಿಸುತ್ತಿದೆ. ಹೌದು ನಮ್ಮ ಭಾರತದ ತ್ರಿವರ್ಣದಲ್ಲಿ ಇರುವಂತಹ ಅಶೋಕ ಚಕ್ರಕ್ಕಿಂತ ಭಿನ್ನವಾಗಿ ನಕ್ಷತ್ರ ಇದೆ. ಇದನ್ನು ಹೊರತುಪಡಿಸಿ, ಉಳಿದೆಲ್ಲವೂ ಒಂದೇ ರೀತಿ ಕಾಣುತ್ತದೆ ಎನ್ನುವುದನ್ನು ನಾವು ಗಮನಿಸಬಹುದಾಗಿದೆ.