ವ್ಯಕ್ತಿಯೊಬ್ಬ ಫ್ಲಿಪ್ಕಾರ್ಟ್ ನಿಂದ ಆರ್ಡರ್ ಮಾಡಿದನು 53 ಸಾವಿರದ iPhone; ಬಾಕ್ಸ್ ಓಪನ್ ಮಾಡಿದ ಮೇಲೆ ಒಳಗೆ 5 ₹ ವಸ್ತು! ನೀವೇ ನೋಡಿ…
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ ಅಕ್ಟೋಬರ್ 3 ರಿಂದ ಪ್ರಾರಂಭವಾಗಿದೆ. ಹೀಗಾಗಿ ಇಲ್ಲಿ ಸಿಗುವ ಅನೇಕ ಆಫರ್ ಗಳ ಬಗ್ಗೆ ನೀವು ಕೇಳಿರಬಹುದು. ಆದರಿಲ್ಲಿ ಐಫೋನ್ ಮೇಲೆ ದೊರೆಯುವ ಆಫರ್ ಬಗ್ಗೆ ತುಂಬಾ ಚರ್ಚೆಯಾಗುತ್ತಿದೆ. ಹಾಗೆ ನೋಡಲಾಗಿ ಫ್ಲಿಪ್ಕಾರ್ಟ್ ತುಂಬಾ ನಂಬಿಕೆಯ ಆನ್ಲೈನ್ ಶಾಪಿಂಗ್ ಮಾರ್ಕೆಟ್ ಎಂದು ಹೇಳಲಾಗುತ್ತದೆ. ಆದರೆ ಒಮ್ಮೊಮ್ಮೆ ಇದು ಸಹ ವಿಶ್ವಾಸಕ್ಕೆ ಪೆಟ್ಟು ನೀಡುತ್ತದೆ. ಇತ್ತೀಚಿಗೆ ನಡೆದ ಒಂದು ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಏಕೆಂದರೆ ಯೂಸರ್ ಒಬ್ಬನು ಫ್ಲಿಪ್ಕಾರ್ಟ್ ಮೇಲೆ ತನ್ನ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾನೆ. ಕಾರಣ ಆತ ಸೆಲ್ ನಲ್ಲಿ ಒಂದು ಐಫೋನ್ 12 ಆರ್ಡರ್ ಮಾಡಿದ್ದನು, ಮನೆಗೆ ಮಾತ್ರ ಒಂದು ಸೋಪಿನ ಬಾರ್ ಡಿಲೆವರಿ ಮಾಡಿದ್ದಾರೆ. ಈ ಸಂಪೂರ್ಣ ಘಟನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ….
ಒಂದು ನ್ಯೂಸ್ ಚಾನೆಲ್ ರಿಪೋರ್ಟ್ ಪ್ರಕಾರ ಸಿಮರನ್ ಪಾಲ್ ಸಿಂಹ ಹೆಸರಿನ ವ್ಯಕ್ತಿಯೊಬ್ಬನು ಫ್ಲಿಪ್ಕಾರ್ಟ್ ಬಿಗ್ ಬಿಲ್ಲಿಯನ್ ಡೇಸ್ ಸೇಲ್ ನಲ್ಲಿ 53 ಸಾವಿರದ ಐಫೋನ್ 12 ಆರ್ಡರ್ ಮಾಡಿದ್ದನು. ಅವನಿಗೆ ಡಿಲೆವರಿ ಮಾಡಿದ ಬಾಕ್ಸ್ನಲ್ಲಿ ಐಫೋನ್ 12 ಬದಲಾಗಿ ನೀರ್ಮಾ ಸಾಬೂನಿನ ಎರಡು ಬಾರ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ. GoAndroid ಹೆಸರಿನ ಯುಟ್ಯೂಬ್ ಪೇಜ್ ನಲ್ಲಿ ಆತ ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.
ನೋಡಿ ಆ ವಿಡಿಯೋವನ್ನು….
ಯೂಸರ್ ಮಾಡಿದನು ಈ ಕೆಲಸ.
ಸಿಮರನ್ ಪಾಲ್ ಸಿಂಹನಿಗೆ ಬಾಕ್ಸ್ ಓಪನ್ ಮಾಡಿದ ನಂತರ ಸೋಪಿನ ಬಾರ್ ಸಿಕ್ಕಿತು. ತದನಂತರ ಆತ ಮೊಟ್ಟ ಮೊದಲು ಡಿಲೆವರಿ ಕನ್ಫರ್ಮ್ ಮಾಡುವ ಓಟಿಪಿ ರಿಕ್ವೆಸ್ಟ್ ನ್ನು ತಿರಸ್ಕರಿಸಿದನು. ಇದರಿಂದಾಗಿ ಕಂಪನಿಗೆ ಆರ್ಡರ್ ಡಿಲೆವರಿ ಪೆಂಡಿಂಗ್ ಇರುವುದನ್ನು ಸೂಚಿಸುತ್ತಿತ್ತು.
ಸ್ವಲ್ಪ ದಿನಗಳ ಪ್ರಯತ್ನದ ನಂತರ ಹಾಗೂ ಡಿಲೆವರಿ ಬಾಯ್ ಜೊತೆಗಿನ ಮಾತುಕತೆಯ ನಂತರ ಓಪನ್ ಬಾಕ್ಸ್ ಡಿಲೆವರಿ ಆಪ್ಶನ್ ಕಾರಣದಿಂದಾಗಿ ಫ್ಲಿಪ್ಕಾರ್ಟ್ ತನ್ನ ತಪ್ಪನ್ನು ಒಪ್ಪಿಕೊಂಡಿತು ಮತ್ತು ನೀಡಿದ ಆರ್ಡರ್ ಕ್ಯಾನ್ಸಲ್ ಮಾಡಿ ಹಣವನ್ನು ಮರಳಿ ನೀಡಲು ಒಪ್ಪಿಕೊಂಡಿತು. ಅನಂತರ ಕೆಲವೇ ದಿನಗಳಲ್ಲಿ ಯೂಸರ್ ನ ಹಣ ಆತನ ಅಕೌಂಟ್ನಲ್ಲಿ ಜಮೆಯಾಯಿತು.
ವಿಡಿಯೋ ನೋಡಿ
ಈ ರೀತಿ ಪ್ರತಿಸಲ ಆಗುವುದಿಲ್ಲ ಆದರೆ ಯಾವತ್ತು ಈ ರೀತಿ ಆಗುವುದಿಲ್ಲವೆಂದು ತಿಳಿಯಬೇಡಿ. ನಮ್ಮ ಹಣ ಸುರಕ್ಷಿತವಾಗಿರುವ ಸಲುವಾಗಿ ನಿಮಗೆ ಹೇಳುವ ಒಂದು ಸಲಹೆ ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳಿ. ಯಾವುದೇ ರೀತಿಯ ದೊಡ್ಡ ಆರ್ಡರನ್ನು ಪ್ಲೇಸ್ ಮಾಡುವಾಗ ಓಪನ್ ಬಾಕ್ಸ್ ಡಿಲೆವರಿ ಆಯ್ಕೆ ಮಾಡಿಕೊಳ್ಳಿ. ಇದರಿಂದ ನೀವು ಡಿಲೆವರಿ ರಿಸೀವ್ ಮಾಡುವ ಮೊದಲು ವಸ್ತುವನ್ನು ಚೆಕ್ ಮಾಡಬಹುದು.