ಎದೆಯ ಮೇಲೆ ಹೇರಳವಾಗಿ ಕೇಶರಾಶಿ ಇರುವವರು ಈ ಲೇಖನವನ್ನು ತಪ್ಪದೇ ಓದಿ…

ಎದೆಯ ಮೇಲೆ ಅಪಾರ ಪ್ರಮಾಣದ ಕೇಶರಾಶಿಯನ್ನು ಹೊಂದಿದ ಎಷ್ಟೋ ಪುರುಷರನ್ನು ನೋಡುತ್ತೇವೆ. ಯಾರ ಎದೆಯ ಮೇಲೆ ಸಾಕಷ್ಟು ಕೇಶಗಳು ಇರುತ್ತವೆಯೋ ಅವರ ಬಗ್ಗೆ ಕೆಲವೊಂದು ಸ್ವಾರಸ್ಯಕರ ವಿಷಯಗಳು ತಿಳಿದುಬಂದಿವೆ. ಇದನ್ನು ಸುಮ್ಮನೆ ಹಾಗೆ ಹೇಳುತ್ತಿಲ್ಲ, ಇದರ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಿದೆ. ನಿಮ್ಮ ಎದೆಯ ಮೇಲೆ ಒಂದು ವೇಳೆ ಸಾಕಷ್ಟು ಕೇಶರಾಶಿ ಇದ್ದರೆ ಈ ಲೇಖನವನ್ನು ಮಾತ್ರ ನೀವು ಓದಲೇಬೇಕು.

ಶಾಸ್ತ್ರಗಳಲ್ಲಿ ಇದರ ಬಗ್ಗೆ ಕೆಲವೊಂದು ಸ್ವಾರಸ್ಯಕರ ಸಂಗತಿಗಳನ್ನು ಹೇಳಲಾಗಿದೆ. ಇಂದಿನ ಈ ಲೇಖನದಲ್ಲಿ ಎದೆಯ ಮೇಲಿರುವ ಹೆಚ್ಚುವರಿ ಕೂದಲಿನ ಬಗ್ಗೆ ವಿಶೇಷವಾಗಿ ತಿಳಿದುಕೊಳ್ಳುವ.

ಯಾವ ಯಾವ ಪುರುಷರ ಎದೆ ಅಗಲವಾಗಿರುತ್ತದೆ ಮತ್ತು ಎದೆ ಸಾಕಷ್ಟು ಕೂದಲೂಗಳಿಂದ ತುಂಬಿರುತ್ತದೆ ಅಂಥ ಪುರುಷರು ತುಂಬಾ ಧನವಂತರು ಮತ್ತು ವೈಭವಿಗಳಾಗಿರುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಇಂಥ ಪುರುಷರು ತುಂಬಾ ಪರಿಶ್ರಮವನ್ನು ತೆಗೆದುಕೊಳ್ಳುವವರಾಗಿರುತ್ತಾರೆ.

ಶಾಸ್ತ್ರದಲ್ಲಿ ಹೀಗೂ ಹೇಳಲಾಗುತ್ತದೆ ಏನೆಂದರೆ, ಎದೆಯ ಮೇಲೆ ಕೇಶರಾಶಿ ಇದ್ದವರು ತುಂಬಾ ಸಜ್ಜನಿಕೆಯ ಸ್ವಭಾವವನ್ನು ಹೊಂದಿರುತ್ತಾರೆ. ಇಂಥ ಪುರುಷರು ತುಂಬಾ ಉದಾರ ಹಾಗೂ ಭಾವನಾತ್ಮಕ ಪ್ರವೃತ್ತಿಯವರು ಆಗಿರುತ್ತಾರೆ. ಅಷ್ಟೇ ಅಲ್ಲ ವ್ಯಕ್ತಿಯು ಶಾರೀರಿಕವಾಗಿ ಬಲಶಾಲಿ ಮತ್ತು ಸದೃಢತೆಯನ್ನು ಹೊಂದಿರುತ್ತಾರೆ. ಈ ರೀತಿಯ ಪುರುಷರು ಪತ್ನಿಗೆ ತುಂಬಾ ಅಪ್ಯಾಯಮಾನವಾಗಿ ಇರುತ್ತಾರೆ ಏಕೆಂದರೆ ಪತ್ನಿಗೆ ಇವರು ಯಾವತ್ತು ತುಂಬಾ ಖುಷಿಯಲ್ಲಿ ಇಡುತ್ತಾರೆ.

ಯಾರ ಎದೆಯು ಕಡಿಮೆ ಕೇಶದಿಂದ ಕೂಡಿರುತ್ತದೆಯೋ ಅವರು ಶ್ರೀಮಂತ, ಬುದ್ಧಿವಂತ, ವಿದ್ಯಾಪ್ರೇಮಿ ಹಾಗೂ ಸಂಗೀತಗಾರರು ಆಗುವ ಸಾಧ್ಯತೆಗಳಿವೆ. ಇಂಥ ವ್ಯಕ್ತಿಗಳು ಪತ್ನಿಯ ಮೇಲೆ ಎಷ್ಟೇ ರೇಗಾಡಿದರೂ ಪ್ರೀತಿ ಮಾತ್ರ ಪತ್ನಿಗೆ ಗೊತ್ತಾಗದಂತೆ ತುಂಬಾ ಮಾಡುತ್ತಿರುತ್ತಾರೆ.