ವೇಟರ್ ನ ಜಾಗರೂಕತೆಯಿಂದಾಗಿ ಉಳಿಯಿತು ಚಿಕ್ಕ ಮಗುವಿನ ಮುಗ್ಧ ಜೀವ, ಎದೆ ಡವಡವ ಎನ್ನುವ ವಿಡಿಯೋ…
ಅದೃಷ್ಟ ಬಲವಾಗಿದ್ದರೆ ಯಾರೂ ಏನು ಮಾಡಲಿಕ್ಕೆ ಸಾಧ್ಯವಿಲ್ಲ ಎಂಬ ಈ ಮಾತು ಎಷ್ಟೋ ಸಲ ನಮ್ಮ ಗಮನಕ್ಕೆ ಬರುತ್ತದೆ. ಈ ಮಾತಿಗೆ ಪುಷ್ಟಿ ನೀಡುವಂಥ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಡುಬರುತ್ತಿದೆ. ಈ ವಿಡಿಯೋ ನೋಡಿದಾಗ ನಿಮಗೂ ಸಹ ಮೇಲೆ ಹೇಳಿದ ಮಾತಿನ ಪ್ರತ್ಯಯ ಬರಬಹುದು. ಅದರ ಜೊತೆಗೆ ಮಗುವಿನ ರಕ್ಷಣೆಗೆ ಓಡಿಬಂದ ವೇಟರ್ ಗೂ ಸಹ ತಪ್ಪದೇ ಹೊಗಳಿ ಧ್ಯನ್ಯವಾದ ಹೇಳುವಿರಿ. ಈ ಘಟನೆಯಲ್ಲಿ ವೇಟರ್ ಗೆ ಮುಂದಾಗುವ ಅಪಘಾತ ತಿಳಿಯುತ್ತಲೇ ತನ್ನ ಕೈಯಲ್ಲಿಯ ಆಹಾರ ಪದಾರ್ಥಗಳು ಕೆಳಗೆ ಬೀಳುತ್ತವೆ ಎಂಬ ಯೋಚನೆಯನ್ನು ತೊರೆದು ಚಿಕ್ಕಮಗುವಿನ ರಕ್ಷಣೆಗಾಗಿ ಜಾಗೃತನಾದನು.
ವಿಡಿಯೋದಲ್ಲಿ ಕಾಣುವ ಹಾಗೆ ಚಿಕ್ಕ ಮಗು ತನ್ನ ತಾಯಿಯನ್ನು ಬಹುಶಃ ಚಾಕಲೇಟ್ ಗಾಗಿ ಸತಾಯಿಸುತ್ತಿದ್ದಾನೆ. ತಾಯಿಯು ಆತನ ಕಡೆಗೆ ಗಮನ ಕೊಡದೆ ಹಾಗೆಯೇ ಮುಂದೆ ಹೋದಾಗ ಮಗು ಅಲ್ಲಿಯೇ ಬದಿಗಿರುವ ಫ್ಯಾನ್ಸಿ ಶೋಕೇಸ್ ನ ಬಾಗಿಲು ತೆಗೆದು ಚಾಕಲೇಟ್ ತೆಗೆದುಕೊಳ್ಳಲು ಮುಂದಾಗುತ್ತದೆ. ಆಗ ಆ ಶೋಕೇಸ್ ನ ಬ್ಯಾಲೆನ್ಸ್ ತಪ್ಪಿ ಮಗುವಿನ ಮೇಲೆಯೆ ಬೀಳಲು ವಾಲುತ್ತದೆ. ಸರಿಯಾಗಿ ಅದೇ ಸಮಯಕ್ಕೆ ತನ್ನ ಟ್ರೇ ನಲ್ಲಿ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಬರುತ್ತಿರುವ ವೇಟರ್ ನ ಗಮನ ಅದರ ಮೇಲೆ ಬೀಳುತ್ತದೆ. ಆಗ ಆತ ಸ್ವಲ್ಪವೂ ಸಮಯ ವ್ಯರ್ಥ ಮಾಡದೇ ಬೀಳುತ್ತಿರುವ ಶೋಕೇಸ್ ಹಿಡಿಯಲು ಪ್ರಯತ್ನಿಸಿದ್ದಾನೆ. ಇದನ್ನು ನೋಡಿದ ತಾಯಿಯೂ ಸಹ ಓಡಿಬಂದು ಶೋಕೇಸ್ ನ್ನು ಹಿಡಿಯುತ್ತಾಳೆ.
ವಿಡಿಯೋ ನೋಡಿ
रेस्टोरेंट वर्कर की सतर्कता व क्विक रिएक्शन से बच्चा बाल-बाल बच गया. #SituationalAwareness हम सभी के लिए बेहद ज़रूरी है. सतर्कता से अनेक हादसों से बचा जा सकता है और ज़रूरत पड़ने पर किसी दूसरे को बचाया जा सकता है.
— Dipanshu Kabra (@ipskabra) November 24, 2021
Video Credits – @nowthisnews pic.twitter.com/OPE5ErAyVK
ಪ್ರಸ್ತುತ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಂಶು ಕಾಬರಾ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಶೇರ್ ಮಾಡಿದ್ದಾರೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಸಾವಿರಾರು ಜನರು ನೋಡಿ ತಮ್ಮ ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ದೀಪಂಶು ಅವರು ಈ ವಿಡಿಯೋವನ್ನು ಶೇರ್ ಮಾಡುತ್ತಾ ಕ್ಯಾಪ್ಷನ್ ನಲ್ಲಿ ರೆಸ್ಟೋರೆಂಟ ವರ್ಕರ್ ನ ಜಾಗರೂಕತೆಯಿಂದಾಗಿ ಮಗುವಿನ ಜೀವ ಉಳಿಯಿತು ಎಂದು ಬರೆದಿದ್ದಾರೆ. SituationalAwareness ಎಲ್ಲರಿಗೂ ತುಂಬಾ ಅಗತ್ಯವಾಗಿದೆ. ಈ ರೀತಿಯ ಜಾಗರೂಕತೆಯಿಂದ ಅನೇಕ ದುರ್ಘಟನೆಗಳನ್ನು ಆಗುವ ಮೊದಲೇ ತಡೆಯಬಹುದು. ಮತ್ತು ಅವಶ್ಯಕತೆ ಬಿದ್ದಾಗ ಇನ್ನೊಬ್ಬರ ಜೀವವನ್ನು ಸಹ ಉಳಿಸಬಹುದಾಗಿದೆ.