ದೇಶದಲ್ಲಿಯೇ ಮೊದಲ ಬಾರಿಗೆ 3 ಅಡಿ ಎತ್ತರವಿದ್ದ ವ್ಯಕ್ತಿಗೆ ಸಿಕ್ಕಿತು ಡ್ರೈವಿಂಗ್ ಲೈಸನ್ಸ್; ಲಿಮ್ಕಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲು….

ದೇಶದಲ್ಲಿ ಯಾವುದೇ ದೊಡ್ಡ ವಾಹನಗಳನ್ನು ಚಲಾಯಿಸಬೇಕಾದರೆ ಅದಕ್ಕೆ ಯೋಗ್ಯ ಲೈಸೆನ್ಸ್ ಬೇಕಾಗಿರುವುದು ಅನಿವಾರ್ಯ. ಲೈಸೆನ್ಸ್ ಪಡೆಯಲು ಭಾರತ ಸರ್ಕಾರವು ನಾಗರಿಕರಿಗೆ ಕೆಲವೊಂದು ನಿಯಮಗಳನ್ನು ಹಾಗೂ ಶರತ್ತುಗಳನ್ನು ಹಾಕಿದೆ. ಅವುಗಳನ್ನು ಪೂರ್ತಿ ಮಾಡಿದಾಗಲೇ ಲೈಸನ್ಸ್ ಸಿಗುತ್ತದೆ. ಇದಕ್ಕೆ ಸಂಬಂಧಿಸಿದ ಸುದ್ದಿಯೊಂದು ಹೊಸದಾಗಿ ವರದಿಯಾಗಿದೆ. ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಬರೀ ಮೂರೇ ಮೂರು ಅಡಿ ಎತ್ತರವಿದ್ದ ವ್ಯಕ್ತಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲಾಗಿದೆ. ಈ ವ್ಯಕ್ತಿಯ ಹೆಸರು ಗಟ್ಟಿಪಲ್ಲಿ ಶಿವಲಾಲ್. ದೇಶದಲ್ಲಿ ಅತೀ ಕಡಿಮೆ ಎತ್ತರದ ಮೊಟ್ಟಮೊದಲ ಡ್ರೈವಿಂಗ್ ಲೈಸೆನ್ಸ್ ಹೋಲ್ಡರ್ ಎಂಬ ದಾಖಲೆ ಗಟ್ಟಿಪಲ್ಲಿ ಶಿವಲಾಲ್ ಇವರ ಹೆಸರಿಗೆ ಸೇರಿದೆ.

ಇವರ ಎತ್ತರ ಬರೀ ಮೂರು ಅಡಿ ಇದ್ದು ಇವರು ತೆಲಂಗಾಣದ ಕುಕಟಪಲ್ಲಿ ನಿವಾಸಿಯಾಗಿದ್ದಾರೆ. 42 ವಯಸ್ಸಿನ ಶಿವಲಾಲ್ ಇವರಿಗೆ ಸಾರ್ವಜನಿಕ ಸಾರಿಗೆ ಸೌಲಭ್ಯದಿಂದಲೇ ಪ್ರಯಾಣಿಸಬೇಕಾಗುತ್ತಿತ್ತು. ಈ ಪ್ರಯಾಣದಿಂದಾಗಿ ಅವರಿಗೆ ತುಂಬಾ ಸಮಸ್ಯೆಗಳು ಎದುರಾಗುತ್ತಿದ್ದವು. ಇವರಿಗೆ ಸ್ವಂತ ವಾಹನ ಚಲಾಯಿಸಲು ಬರುತ್ತಿರಲಿಲ್ಲ. ಈ ಕಾರಣದಿಂದ ಪ್ರಯಾಣಕ್ಕಾಗಿ ಸಾರ್ವಜನಿಕ ಸಾರಿಗೆಯ ಉಪಯೋಗ ಮಾಡುತ್ತಿದ್ದರು. ಅವರು ಕ್ಯಾಬ್ ನ ಉಪಯೋಗ ಸಹ ಮಾಡಿದರು. ಅಲ್ಲಿ ಜನರು ಅವರಿಗೆ ಚುಚ್ಚುಮಾತುಗಳಿಂದ ಗೋಳು ಹೊಯ್ದುಕೊಳ್ಳುತ್ತಿದ್ದರು. ಹೀಗಾಗಿ ಅವರಿಗೆ ಮಾನಸಿಕವಾಗಿ ತುಂಬಾ ಹಿಂ#ಸೆಯಾಗುತ್ತಿತ್ತು. ಈ ಎಲ್ಲ ಕಾರಣಗಳಿಂದ ನೊಂದ ಶಿವಲಾಲ್ ಅವರು ತಾವೇ ಸ್ವತಃ ವಾಹನ ನಡೆಸುವುದನ್ನು ಕಲಿಯಬೇಕೆಂದು ನಿರ್ಧರಿಸಿದರು.

ವಾಹನ ನಡೆಸುವುದನ್ನು ಕಲಿಯುವಾಗ ಇವರಿಗೆ ಮತ್ತೆ ಅನೇಕ ತೊಂದರೆಗಳು ಬರಲಾರಂಭಿಸಿದವು. ಹೀಗೆ ಒಂದು ದಿನ ಅಮೆರಿಕೆಯಲ್ಲಿಯ ಕುಳ್ಳ ವ್ಯಕ್ತಿಯೊಬ್ಬನು ವಾಹನ ನಡೆಸುವ ವಿಡಿಯೋ ನೋಡಿದರು. ಇದರಿಂದ ಶಿವಲಾಲ್ ಅವರಲ್ಲಿ ತಾನು ಸಹ ವಾಹನ ನಡೆಸಿಯೇ ನಡೆಸುತ್ತೇನೆ ಎಂಬ ಆತ್ಮವಿಶ್ವಾಸ ಹುಟ್ಟಿತು. ಹಾಗೂ ಡ್ರೈವಿಂಗ್ ಲೈಸೆನ್ಸ್ ಸಲುವಾಗಿ ಅರ್ಜಿಯನ್ನು ಹಾಕಿದರು. ಆದರೆ ಎಲ್ಲ ಕಡೆಯೂ ಅವರ ಅರ್ಜಿಯನ್ನು ವಜಾ ಮಾಡಿದರು. ಇದರಿಂದ ಶಿವಲಾಲ್ ಅವರು ವಾಹನವನ್ನು ನಡೆಸುವ ಸಂಪೂರ್ಣ ತಂತ್ರಜ್ಞಾನವನ್ನು ಕಲಿತುಕೊಳ್ಳಲು ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ತದನಂತರ ಹೈದರಾಬಾದ್ ನಲ್ಲಿ ಕಸ್ಟಮ್ ಕಾರಿನ ಡಿಸೈನ್ ಮಾಡುವ ವ್ಯಕ್ತಿಯೊಬ್ಬನ ಮಾಹಿತಿ ಪಡೆದರು. ಈ ವ್ಯಕ್ತಿಯಿಂದ ಇವರು ತಮ್ಮ ಕಾರಿನಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರು. ಕಾಲಿಗೆ ನಿಲುಕದ ಪೆಡಲ್ಸ್ ಗಳನ್ನು ಸಾಮಾನ್ಯಕ್ಕಿಂತ ಎತ್ತರಕ್ಕೆ ಮಾಡಿಕೊಂಡರು. ಯಾಕೆಂದರೆ ಶಿವಲಾಲ್ ಅವರ ಕಾಲುಗಳು ಅಲ್ಲಿಯವರೆಗೆ ಹೋಗಿ ತಲುಪುತ್ತಿರಲಿಲ್ಲ.

ಈಗ ಶಿವಲಾಲ್ ಅವರು ತಮ್ಮ ಹೆಂಡತಿಗೂ ಸಹ ಕಾರು ನಡೆಸುವುದನ್ನು ಕಲಿಸುತ್ತಿದ್ದಾರೆ. ಕುಳ್ಳರು ಸ್ವತಂತ್ರ ಜೀವನ ಜೀವಿಸಲು ಸಹಾಯವಾಗುವ ಸಲುವಾಗಿ ಪಟ್ಟಣದಲ್ಲಿ ಒಂದು ವಿಶೇಷ ಡ್ರೈವಿಂಗ್ ಸ್ಕೂಲ್ ಓಪನ್ ಮಾಡುವ ಉದ್ದೇಶವನ್ನು ಶಿವಲಾಲ್ ಅವರು ಹೊಂದಿದ್ದಾರೆ. ಶಿವಲಾಲ್ ಅವರ ಗೇರ್ ಗಳಿಲ್ಲದ ಸ್ವಯಂ ಚಾಲಿತ ವಾಹನಕ್ಕೆ ತೆಲಂಗಾಣ ಸರಕಾರವು ಮಾನ್ಯತೆ ನೀಡಿದೆ.

ಕಡಿಮೆ ಎತ್ತರವಿರುವ ವ್ಯಕ್ತಿಗಳ ಗುಂಪಿನಲ್ಲಿ ಮೊಟ್ಟ ಮೊದಲ ಬಾರಿಗೆ ಡ್ರೈವಿಂಗ್ ಲೈಸೆನ್ಸ್ ದೊರೆತ ಕಾರಣಕ್ಕಾಗಿ ಶಿವಲಾಲ್ ಅವರ ಹೆಸರು ತೆಲುಗು ಬುಕ್ ಆಫ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಅಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.