ಈ ಜನ್ಮದಿನಾಂಕ ಹೊಂದಿದ ವ್ಯಕ್ತಿಗಳಿಗೆ 2022 ಈ ವರ್ಷ ಇರಲಿದೆ ತುಂಬಾ ವಿಶೇಷ; ನೌಕರಿ ಮತ್ತು ಉದ್ಯೋಗದಲ್ಲಿ ಭರ್ಜರಿ ಲಾಭ!

ಸಂಖ್ಯಾಶಾಸ್ತ್ರದ ಪ್ರಕಾರ ನಾವು ಯಾವುದೇ ಒಂದು ವ್ಯಕ್ತಿಯ ಜನ್ಮದಿನಾಂಕದ ಪ್ರಕಾರ ಆತನ ಜೀವನದಲ್ಲಿಯ ಅನೇಕ ವಿಷಯಗಳ ಬಗ್ಗೆ ಮುಂದಿನ ಭವಿಷ್ಯ ತಿಳಿದುಕೊಳ್ಳಬಹುದು. 2022 ಈ ವರ್ಷದ ಬಗ್ಗೆ ಹೇಳಬೇಕಾದರೆ ಕೆಲವೊಂದು ಜನ್ಮದಿನಾಂಕಗಳನ್ನು ಹೊಂದಿರುವ ವ್ಯಕ್ತಿಗಳಿಗಾಗಿ ಈ ವರ್ಷವೂ ತುಂಬಾ ವಿಶೇಷ ಗಿಫ್ಟ್ ತರಲಿದೆ. 2022 ಈ ವರ್ಷದ ಒಟ್ಟು ಸಂಕಲನ 6 ಬರುತ್ತದೆ. 6 ಅಂಕಿಯನ್ನು ಶುಕ್ರಗ್ರಹದ ಅಂಕಿಯನ್ನು ತಿಳಿಯಲಾಗುತ್ತದೆ. ಇದು ತುಂಬಾ ಒಳ್ಳೆಯ ಸಂಖ್ಯೆಯಾಗಿದೆ. ಯಾವ ವ್ಯಕ್ತಿಗಳ ಮೂಲ ಸಂಖ್ಯೆ 6 ಇದೆ ಅವರಿಗಾಗಿ ಈ ವರ್ಷ ತುಂಬಾ ಮಹತ್ವದ್ದಾಗಿದೆ. ಇದರ ಹೊರತಾಗಿ 2022ರಲ್ಲಿ 2 ಈ ಸಂಖ್ಯೆ ಮೂರು ಬಾರಿ ಬರುವುದರಿಂದ ರಾಡಿಕ್ಸ್ 2 ಈ ಜನರಿಗಾಗಿ ಹೊಸವರ್ಷ ತುಂಬಾ ವಿಶೇಷವಾಗಿ ಇರಲಿದೆ.

ರಾಡಿಕ್ಸ್ ಒಂದು – ಯಾರ ಹುಟ್ಟಿದ ದಿನಾಂಕ 1, 10, 19 ಅಥವಾ 28 ಇದೆಯೋ ಅವರ ರಾಡಿಕ್ಸ್ ಸಂಖ್ಯೆ 1 ಇರುತ್ತದೆ. ಈ ರೀತಿಯ ವ್ಯಕ್ತಿಗಳು ನೌಕರಿಯಲ್ಲಿ ಮಾಡಿದ ಪ್ರಯತ್ನಕ್ಕೆ ಫಲ ಸಿಗಲಿದೆ. ಉದ್ಯೋಗ ವ್ಯವಸಾಯಗಳಲ್ಲಿ ಏರಿಳಿತ ಇದ್ದರೂ ಸಹ ಅದನ್ನು ಸರಿಯಾಗಿ ನಡೆಸಿಕೊಂಡು ಮುಂದೆ ಹೋಗುವಲ್ಲಿ ಯಶಸ್ವಿಯಾಗುವರು. ಈ ವರ್ಷದಲ್ಲಿ ಇವರಿಗೆ ತುಂಬಾ ಹಣ ದೊರೆಯಲಿದೆ. ಮತ್ತು ವರ್ಷದ ಮಧ್ಯದಲ್ಲಿ ಅಂತೂ ನಿಮ್ಮ ಜೊತೆಗೆ ತುಂಬಾ ಒಳ್ಳೆಯದಾಗಲಿದೆ. ಹೀಗಾಗಿ ಇವರು ಈ ವರ್ಷ ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಹೊಂದುವುದರಲ್ಲಿ ಸಂದೇಹವಿಲ್ಲ.

ರಾಡಿಕ್ಸ ಎರಡು – ಯಾವುದೇ ತಿಂಗಳಿನ 2, 11, 20 ಅಥವಾ 29 ನೇ ದಿನಾಂಕಕ್ಕೆ ಹುಟ್ಟಿದವರ ರಾಡಿಕ್ಸ್ ಸಂಖ್ಯೆ ಎರಡಾಗಿರುತ್ತದೆ. ಈ ರಾಶಿಯ ವ್ಯಕ್ತಿಗಳಿಗಾಗಿ ಬರುವ ಹೊಸವರ್ಷ ತುಂಬಾ ಫಲಪ್ರದವಾಗಲಿದೆ. ಇವರಿಗೆ ನೌಕರಿಯಲ್ಲಿ ಹೊಸ ಅವಕಾಶಗಳು ಸಿಗಲಿವೆ. ಪ್ರತಿಯೊಂದು ಸವಾಲನ್ನು ಎದುರಿಸುತ್ತಾ ಮುಂದೆ ಹೋಗುವಿರಿ. ಈ ವರ್ಷ ಆರ್ಥಿಕವಾಗಿ ಲಾಭ ಸಿಗಲಿದೆ. ನೀವು ಸೇವೆ ಸಲ್ಲಿಸುವ ಸ್ಥಳದಲ್ಲಿ ಅನೇಕ ಸಂಕಟಗಳು ಬಂದರೂ ಅವುಗಳನ್ನು ಸರಿಯಾಗಿ ಬಗೆಹರಿಸಿ ಮುನ್ನುಗ್ಗುವಿರಿ.

ರಾಡಿಕ್ಸ್ ಆರು – ಯಾವುದೇ ತಿಂಗಳಿನ 6,15 ಮತ್ತು 24 ದಿನಾಂಕದಂದು ಜನಿಸಿದ ವ್ಯಕ್ತಿಗಳ ರಾಡಿಕ್ಸ್ ಸಂಖ್ಯೆ 6 ಇದೆ. ಈ ರಾಶಿಯ ವ್ಯಕ್ತಿಗಳಿಗೆ 2022 ಈ ಹೊಸ ವರ್ಷವು ತುಂಬಾ ಶುಭವಾಗಲಿದೆ. ತಮ್ಮ ಕರಿಯರ್ ನಲ್ಲಿ ಮೊಟ್ಟಮೊದಲ ಬಾರಿಗೆ ಪ್ರಗತಿಯ ಹೆಚ್ಚುವರಿ ಸಾಧ್ಯತೆಯನ್ನು ನೋಡಲಿದ್ದಾರೆ. ವಿಶೇಷವಾಗಿ ಕುಟುಂಬದಲ್ಲಿ ಸದಸ್ಯರ ಸಹಕಾರ ಸಾಕಷ್ಟು ದೊರೆಯಲಿದೆ. ಹೀಗಾಗಿ ಆರ್ಥಿಕ ಪರಿಸ್ಥಿತಿ ತನ್ನಂತಾನೆ ಬಲಗೊಳ್ಳಲಿದೆ. ಮದುವೆ ಮಾಡಿಕೊಳ್ಳಲಿರುವ ವ್ಯಕ್ತಿಗಳಿಗೂ ಈ ವರ್ಷ ತುಂಬಾ ಚೆನ್ನಾಗಿ ಇರಲಿದೆ. ನೌಕರಿಯಲ್ಲಿ ಬಡ್ತಿ ಸಿಗುವ ಸಂಕೇತಗಳು ಕಂಡು ಬರುತ್ತಿವೆ. ನಿಮ್ಮಲ್ಲಿರುವ ಸೂಪ್ತ ಗುಣಗಳನ್ನು ಮತ್ತು ಪ್ರತಿಭೆಗಳನ್ನು ತೋರಿಸುವ ಅವಕಾಶ ಈ ವರ್ಷ ನಿಮಗೆ ಭರ್ಜರಿಯಾಗಿ ಸಿಗಲಿದೆ. ಆದಾಯವು ತುಂಬಾ ಚೆನ್ನಾಗಿ ಆಗಲಿದೆ.