ಜನವರಿ 1 ರಂದು 10 ಕೋಟಿಗೂ ಹೆಚ್ಚು ರೈತರಿಗೆ ಮೋದಿ ಕಡೆಯಿಂದ ಹೊಸ ವರ್ಷದ ಉಡುಗೊರೆ: ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ? ತಿಳಿದುಕೊಳ್ಳಿ!!!

ಪ್ರಧಾನಿ ನರೇಂದ್ರ ಮೋದಿ ಅವರು 2022 ರ ಜನವರಿ 1 ರಂದು ದೇಶದ ರೈತರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಲಿದ್ದಾರೆ.  ವಾಸ್ತವವಾಗಿ, ಪಿಎಂ ಮೋದಿ ಅವರು ಈ ದಿನ ರೈತರ ಬ್ಯಾಂಕ್ ಖಾತೆಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 10 ನೇ ಕಂತನ್ನು ಬಿಡುಗಡೆ ಮಾಡುತ್ತಾರೆ.

ಫಲಾನುಭವಿಗಳು ಬ್ಯಾಂಕ್ ಖಾತೆಯ ಇ-ಕೆವೈಸಿ ಅವಶ್ಯವಾಗಿ ಮಾಡಬೇಕು.

ಜನವರಿ 1 ರಂದು ಈ ಯೋಜನೆಯ  ಲಾಭ ಪಡೆದುಕೊಳ್ಳುವ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ಸರ್ಕಾರ ಸಂದೇಶ ರವಾನಿಸಿದೆ ಎಂದು ಹೇಳಲಾಗುತ್ತಿದೆ. ಅಂತಹ ಸಂದರ್ಭಗಳಲ್ಲಿ, ಈ ಯೋಜನೆಯ ಹಕ್ಕುದಾರರು ತಮ್ಮ ಬ್ಯಾಂಕ್ ಖಾತೆಯ E-Kyc ಅನ್ನು ಮಾಡಲು ಸಲಹೆ ನೀಡಲಾಗುತ್ತದೆ, ಏಕೆಂದರೆ e-KYC ಇಲ್ಲದಿದ್ದರೆ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದಿಲ್ಲ ಎಂದು ತಿಳಿದು ಬಂದಿದೆ.

ಒಂದು ವರ್ಷದಲ್ಲಿ 2-2 ಸಾವಿರ ರೂಪಾಯಿ ಮೂರು ಕಂತುಗಳು ಖಾತೆಗೆ ಟ್ರಾನ್ಸ್ಫರ್ ಮಾಡಲಾಗುತ್ತದೆ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9 ಕಂತುಗಳು ಫಲಾನುಭವಿಗಳ ಖಾತೆಗೆ  ಸದ್ಯಕ್ಕೆ ವರ್ಗಾವಣೆ ಮಾಡಲಾಗಿದೆ.  ಈ ಯೋಜನೆಯ ಈ ಕಂತಿನಲ್ಲಿ ಸರಕಾರ ರೈತರ ಖಾತೆಗಳಿಗೆ 2000 ರೂ ವರ್ಗಾವಣೆ ಮಾಡಲಾಗುತ್ತದೆ.  ವರ್ಷಕ್ಕೆ ಮೂರು ಕಂತುಗಳನ್ನು ಸರ್ಕಾರ ಕಳುಹಿಸುತ್ತದೆ.  ಅಂದರೆ, ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ 6 ಸಾವಿರ ರೂ. ಲಾಭ ಸಿಗಲಿದೆ.

ಯೋಜನೆಯ ಅಡಿಯಲ್ಲಿ ನಿಮ್ಮ ಹೆಸರು ಇದೆಯೋ? ಇಲ್ಲವೋ? ಎಂಬುದು ಹೀಗೆ ತಿಳಿದುಕೊಳ್ಳಿ.

10 ನೇ ಕಂತು ಬಿಡುಗಡೆ ಮಾಡುವ ಮೊದಲು ಸರ್ಕಾರವು ಫಲಾನುಭವಿಗಳ ಪಟ್ಟಿಯನ್ನು pmkisan.gov.in ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದೆ ಎಂದು ಕೆಲವು ಮಾಧ್ಯಮಗಳಿಂದ ತಿಳಿದು ಬಂದಿದೆ.  ಫಲಾನುಭವಿಗಳು ಈ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಬಹುದು. ಇದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಲಾಭ ಪಡೆದ ರೈತರ ಹೆಸರನ್ನು ಒಳಗೊಂಡಿದೆ.  ಹೆಸರನ್ನು ಪರಿಶೀಲಿಸಲು ಈ ಕೆಳಗಿನ ಸ್ಟೆಪ್ಸ್ ಗಳನ್ನು  ಅನುಸರಿಸಿ..

– ಎಲ್ಲಕ್ಕಿಂತ ಮುಂಚೆ
pmkisan.gov.in  ಪೋರ್ಟಲ್ಗೆ ಹೋಗಿ.
– ವೆಬ್‌ಸೈಟ್‌ನ ಮುಖಪುಟದಲ್ಲಿ ‘ಫಾರ್ಮರ್ಸ್ ಕಾರ್ನರ್’ ಗೆ ಹೋಗಿ.
– ಫಲಾನುಭವಿಗಳ ಪಟ್ಟಿ / ಬೆನಿಫಿಶಿಯರ್ ಲಿಸ್ಟ್  ಟ್ಯಾಬ್‌ನಲ್ಲಿ ಹೋಗಿ.
– ನಿಮ್ಮ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ಬ್ಲಾಕ್ ಮತ್ತು ಗ್ರಾಮದ ವಿವರಗಳನ್ನು ನಮೂದಿಸಿ.
– ಇದರ ನಂತರ get report  ಮೇಲೆ ಕ್ಲಿಕ್ ಮಾಡಿ. ತದನಂತರ ಲಿಸ್ಟ್ ನಲ್ಲಿರುವ ಮಾಹಿತಿ ನಿಮಗೆ ದೊರೆಯುವದು.   ಸರ್ಕಾರದಿಂದ ಈ ಯೋಜನೆಯ ಲಾಭವನ್ನು ಪಡೆದ ರೈತರ ಹೆಸರನ್ನು ರಾಜ್ಯ/ಜಿಲ್ಲಾವಾರು/ತಹಸಿಲ್/ಗ್ರಾಮವಾರು ಸಹ ನೋಡಬಹುದು.