Mahindra ಈ ಬೈಕ್ ಗೆ ನೀಡಿತು ಹೊಸರೂಪ… ಭಾರತದಲ್ಲಿ 26 ವರ್ಷಗಳ ನಂತರ ಆಗಲಿದೆ ಲಾಂಚ್!
ಮಹಿಂದ್ರ ಅಂಡ್ ಮಹಿಂದ್ರ ಕಂಪನಿಯು ಬೈಕ್ ತಯಾರಿಸುವ ಹಳೆಯ ಪ್ರಸಿದ್ಧ ಬ್ರ್ಯಾಂಡ್ ಗೆ ಹೊಸ ರೂಪ ನೀಡಿದೆ. ಸುಮಾರು 26 ವರ್ಷಗಳ ನಂತರ ಈಗ ಮತ್ತೆ ಈ ಮೋಟಾರ್ ಸೈಕಲ್ ಭಾರತದಲ್ಲಿ ಪ್ರಸ್ತುತ ಪಡಿಸಲಿದ್ದಾರೆ. ಇದು ರಾಯಲ್ ಎನ್ಫೀಲ್ಡ್ ನಂತಹ ದೊಡ್ಡ ಬ್ರ್ಯಾಂಡ್ ಗೆ ಸ್ಪರ್ಧೆ ನೀಡಲಿದೆ. ಮಹಿಂದ್ರ ಸಮೂಹದ ಕ್ಲಾಸಿಕ್ ಲಿಜೇಂಡ್ಸ್ ಕೆಲವು ವರ್ಷಗಳ ಹಿಂದೆ ಜಾವಾ ಮೋಟರ್ ಸೈಕಲ್ ಮತ್ತು ಬ್ರಿಟನ್ ನ ಬಿಎಸ್ಎ ಮೋಟಾರ್ ಸೈಕಲ್ ಗೆ ಹೊಸ ಸಂಜೀವಿನಿ ನೀಡಿತ್ತು. ಈಗ ಇದೇ ಕಂಪನಿಯ ಮೋಟರ್ ಸೈಕಲ್ ನ ಇನ್ನೊಂದು ಪ್ರಸಿದ್ಧ ಬ್ರಾಂಡ್ ಆದ ಯೆಜ್ದಿ ಗೆ ಹೊಸ ರೂಪದಲ್ಲಿ ಮಾರುಕಟ್ಟೆಗೆ ತರುತ್ತಿದೆ. ಕೆಲವೇ ದಿವಸಗಳ ಹಿಂದೆ ಆನಂದ ಮಹಿಂದ್ರಾ ಅವರು ಟ್ವಿಟರ್ನಲ್ಲಿ ಟೀಜರ್ ಒಂದನ್ನು ಶೇರ್ ಮಾಡಿದ್ದರು. ಕ್ಲಾಸಿಕ್ ಲಿಜೆಂಡ್ಸ್ ಈ ಜನವರಿಯಲ್ಲಿ ಯೆಜ್ದಿ ಬ್ರಾಂಡಿನ ಮೊದಲ ಬೈಕ್ ಯೆಜ್ದಿ ರೋಡ್ ಕಿಂಗ್ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದ್ದಾರೆ. ಸುಮಾರು ಇಪ್ಪತ್ತಾರು ವರ್ಷಗಳ ಹಿಂದೆ ಅಂದರೆ 1996 ರಲ್ಲಿ ಅದರ ಕೊನೆಯ ಯೂನಿಟ್ ಮಾರಾಟವಾಗಿತ್ತು. ಇದರ ಹೊರತಾಗಿ ಕಂಪನಿಯು ಯಜ್ದಿ ಅಡ್ವೆಂಚರ್ ಮತ್ತು ಯಜ್ದಿ ಸ್ಕ್ರಬಲರ್ ಪ್ರಸ್ತುತ ಪಡಿಸಲಿದ್ದಾರೆ.
ಯಜ್ದಿ ರೋಡ್ ಕಿಂಗ್ ಬೈಕಿನ ವೈಶಿಷ್ಟಗಳು ಏನೆಂದರೆ 334 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಇರಲಿದೆ. ಇದು ಜಾವಾ ಪರ್ಕ್ ನಲ್ಲಿ ಕಾಣಿಸಿದೆ. ಪ್ರಸ್ತುತ ಇಂಜಿನ್ 30 bhp ಮ್ಯಾಕ್ಸ್ ಪವರ್ ಮತ್ತು 32.74 ಎನ್ ಎಮ್ ಪೀಕ್ ಟಾರ್ಕ್ ಜನರೇಟ್ ಮಾಡುತ್ತದೆ. ಇದರಲ್ಲಿ ಗ್ರಾಹಕರಿಗೆ 6 ಸ್ಪೀಡ್ ಗೇರ್ ಬಾಕ್ಸ್ ದೊರೆಯುತ್ತದೆ. ಇದರ ಜೊತೆಗೆ ಮೋಟಾರ್ಸೈಕಲ್ ನ ಮುಂದಿನ ಬದಿಯಲ್ಲಿ 21 ಇಂಚಿನ ಸ್ಪೋಕ್ ವ್ಹೀಲ್ ಮತ್ತು 17 ಇಂಚಿನ ಹಿಂಬದಿಯ ವ್ಹೀಲ್ ಸಿಗಲಿದೆ. ಎರಡು ಬದಿಯಲ್ಲಿ ಡಿಸ್ಕ್ ಬ್ರೇಕ್ ದೊರೆಯಲಿದೆ.
ಬೆಲೆ ಎಷ್ಟು ಇರಬಹುದು?
ಯೆಜ್ಡಿ ರೋಡ್ಕಿಂಗ್ ಆನ್ ರೋಡ್ ಪ್ರೈಸ್ ಸುಮಾರು 1.60 ಲಕ್ಷ ರೂಪಾಯಿಗಳವರೆಗೆ ಇರಲಿದೆ. ಎರಡನೆಯದಾದ ಯಜ್ದಿ ಅಡ್ವೆಂಚರ್ ಬೆಲೆ 2.10 ಲಕ್ಷ ರೂಪಾಯಿಗಳವರೆಗೆ ಇರಲಿದೆ. ಮಾರುಕಟ್ಟೆಯಲ್ಲಿ ಈ ಬೈಕಿನ ಸ್ಪರ್ಧೆ ರಾಯಲ್ ಎನ್ಫೀಲ್ಡ್ ನ ಅನೇಕ ಬೈಕ್ ಗಳಾದ ಅದರಲ್ಲಿಯೂ ವಿಶೇಷವಾಗಿ ಹಿಮಾಲಯನ್ ಜೊತೆಗೆ ಸ್ಪರ್ಧೆ ಇರಲಿದೆ. ಆದರೆ ಹಿಮಾಲಯನ್ ಬೈಕ್ 400 ಸಿಸಿ ಸೆಗ್ಮೆಂಟ್ ಬೈಕ್ ಆಗಿದೆ.