ಟ್ರೈನಿನಲ್ಲಿ ಪ್ರವಾಸ ಮಾಡುವಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ; ಈ ವ್ಯಕ್ತಿಯ ಜೊತೆಗೆ ನಡೆದದ್ದನ್ನು ನೋಡಿ ವೈರಲ್ ವಿಡಿಯೋದಲ್ಲಿ…!

ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಕಂಟೆಂಟ್ ಗಳನ್ನು ನೋಡಿದರು ಕಡಿಮೆಯೇ. ಕೆಲವೊಂದು ಕಂಟೆಂಟ್ ಗಳು ತುಂಬಾ ತಮಾಷೆಯಾಗಿದ್ದರೆ ಇನ್ನು ಕೆಲವು ಕಂಟೆಂಟ್ ಗಳು ಸಾಮಾಜಿಕ ಜವಾಬ್ದಾರಿಯನ್ನು ಎತ್ತಿ ತೋರಿಸುವಂಥವು ಇರುತ್ತವೆ. ಹೀಗೆ ನಾನಾ ವಿಧದ ಕಂಟೆಂಟ್ ಗಳು ನಮಗೆ ನೋಡಲು ಸಿಗುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಚೆನ್ನಾಗಿದ್ದರೆ ನೋಡುನೋಡುವಷ್ಟರಲ್ಲಿ ವೈರಲ್ ಆಗಿ ಬಿಡುತ್ತವೆ. ಈ ವಿಡಿಯೋಗಳು ನಮಗೆ ಖುಷಿಯನ್ನು ನೀಡಿದರೆ ಕೆಲವು ವಿಡಿಯೋಗಳು ಸರಿಯಾದ ಪಾಠವನ್ನು ಅಥವಾ ಉದಾಹರಣೆಯನ್ನು ನೀಡುತ್ತವೆ.

ಈಗ ನೋಡುವ ವಿಡಿಯೋ ರೈಲ್ವೆ ಸ್ಟೇಷನ್ ನಲ್ಲಿ ನಡೆದ ಘಟನೆಯೊಂದು ತೋರಿಸುತ್ತಿದೆ. ಇಲ್ಲಿ ಕಳ್ಳನೊಬ್ಬ ಎಷ್ಟೊಂದು ಜಾಣತನದಿಂದ ಕಳ್ಳತನ ಮಾಡಿದ್ದಾನೆ ಎಂಬುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ದೃಶ್ಯದಿಂದ ನಾವು ತುಂಬಾ ಜಾಗೃತೆ ವಹಿಸಬೇಕಾಗಿದೆ, ವಿಶೇಷವಾಗಿ ಸಾರ್ವಜನಿಕ ವಲಯದ ಸಾರಿಗೆಗಳನ್ನು ಉಪಯೋಗಿಸುವಾಗ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ರೈಲ್ವೆ ಸ್ಟೇಷನ್ ಪರಿಸರದಲ್ಲಿ ವ್ಯಕ್ತಿಯೊಬ್ಬನು ಇನ್ನೊಬ್ಬ ವ್ಯಕ್ತಿಯ ಕೈಯಲ್ಲಿ ಇರುವ ಮೊಬೈಲನ್ನು ಕಸಿದುಕೊಂಡು ಹೋಗಿದ್ದಾನೆ. ಈ ಕುಕೃತ್ಯವನ್ನು ಮಾಡುವಾಗ ಆತ ಎಷ್ಟೊಂದು ಜಾಣತನದಿಂದ ಇದಕ್ಕೆ ಅಂತಿಮ ಸ್ವರೂಪ ನೀಡಿದ್ದಾನೆ ಎಂಬುದು ತಿಳಿದುಬರುತ್ತದೆ. ಇಲ್ಲಿ ವ್ಯಕ್ತಿಯೊಬ್ಬನು ರೈಲು ಬೋಗಿಯ ಬಾಗಿಲಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿದ್ದಾನೆ. ಆತನ ಸುತ್ತಲೂ ಅನೇಕ ಜನರು ಸುತ್ತಾಡುತ್ತಿದ್ದಾರೆ. ಅದರಲ್ಲಿ ಒಬ್ಬ ಕಳ್ಳನು ಫೋನ್ ನಲ್ಲಿ ಮಾತನಾಡುವ ವ್ಯಕ್ತಿಯ ಮೇಲೆ ಕಣ್ಣಿಟ್ಟಿದ್ದಾನೆ. ಆತ ಮೊದಲು ಟ್ರೈನಿನಲ್ಲಿ ಏರುತ್ತಾನೆ. ಯಾವಾಗ ಟ್ರೈನ್ ಚಲಿಸಲು ಪ್ರಾರಂಭವಾಗುತ್ತದೆ ಆಗ ಆ ಕಳ್ಳನು ಥಟ್ಟನೆ ಕೆಳಗಿಳಿದು ಹಿಂದಿನ ಬಾಗಿಲಿನಲ್ಲಿ ನಿಂತು ಫೋನಿನಲ್ಲಿ ಮಾತನಾಡುತ್ತಿರುವ ವ್ಯಕ್ತಿಯ ಕೈಯಿಂದ ಮೊಬೈಲನ್ನು ಹಠಾತ್ತನೆ ಕಸಿದುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. ಆ ಸಮಯದಲ್ಲಿ ಪ್ಲಾಟ್ ಫಾರ್ಮ್ ನಲ್ಲಿ ಜಾಸ್ತಿ ಗದ್ದಲವಿರದ ಕಾರಣ ಆತ ಯಾರ ಕೈಗೂ ಸಿಗದೇ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾನೆ.

ವೀಡಿಯೋ ನೋಡಿ

ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಂ ನಲ್ಲಿ haq_se_engineers ಈ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 60 ಸಾವಿರಕ್ಕಿಂತ ಹೆಚ್ಚು ಜನರು ನೋಡಿದ್ದಾರೆ. ಇದನ್ನು ನೋಡಿದ ಅನೇಕ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.

ಮಿತ್ರರೇ, ಈ ವಿಡಿಯೋ ನೋಡಿದ ನಂತರ ನೀವು ಸಹ ಜಾಗೃತರಾಗಿರಿ, ಹಾಗೂ ಈ ರೀತಿಯ ತಪ್ಪು ಎಂದಿಗೂ ಮಾಡಬೇಡಿ.