Articles

ಮುಂಬಯಿ ಲೈಫ್ ಲೈನ್ ಎಂದೇ ಹೆಸರುವಾಸಿಯಾದ ಲೋಕಲ್ ಟ್ರೈನ್ ನಲ್ಲಿ ನಡೆದ ನಕ್ಕು ನಗಿಸುವ ಈ ದೃಶ್ಯವನ್ನೊಮ್ಮೆ ನೋಡಿಯೇ ಬಿಡಿ…!

ಮುಂಬಯಿ ಎಂದಾಗ ತಕ್ಷಣ ಎಲ್ಲರ ನೆನಪಿಗೆ ಬರುವದು ಏನೆಂದರೆ ಅಲ್ಲಿ ಸಿಟಿ ಬಸ್ಸುಗಳಂತೆ ಓಡಾಡುವ ಲೋಕಲ್ ಟ್ರೈನ್ ಗಳು. ಮುಂಬಯಿಯಲ್ಲಿ ಓಡಾಡುವ ಲೋಕಲ್ ಟ್ರೈನ್ ಗಳಿಗೆ ಅಲ್ಲಿಯ ಲೈಫ್ ಲೈನ್ ಎಂದೇ ಕರೆಯಲಾಗುತ್ತದೆ. ಮುಂಬೈಯಲ್ಲಿ ವಾಸಿಸುವವರ ಹತ್ತಿರ ಟು ವೀಲರ್ ಅಥವಾ ಫೋರ್ ವೀಲರ್ ಇದ್ದರೂ ಸಹ ಸರಿಯಾದ ಸಮಯಕ್ಕೆ ಹೆಚ್ಚುವರಿ ಅಂಶದಲ್ಲಿ ಉಪಯೋಗವಾಗುವುದು ಲೋಕಲ್ ಟ್ರೈನ್ ಮಾತ್ರ ಎಂದರೆ ತಪ್ಪಾಗಲಾರದು. ಯಾಕೆಂದರೆ ಟ್ರಾಫಿಕ್ ಸಮಸ್ಯೆಯಿಂದಾಗಿ ಟ್ರೈನ್ ಹೊರತಾಗಿ ಬೇರೆ ಯಾವುದೇ ವಾಹನದಲ್ಲಿ ತಲುಪಬೇಕಾದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ಹೋಗಿ ಮುಟ್ಟುವುದು ಕಷ್ಟವೆಂದು ಹೇಳಬಹುದು.

ಇಂಥ ಲೋಕಲ್ ಟ್ರೈನ್ ನಲ್ಲಿ ಯಾವಾಗಲೂ ತುಂಬಾ ಗದ್ದಲ ಇರುವುದು ಸಾಮಾನ್ಯ. ಮುಂಬಯಿಯ ಉಪನಗರಗಳಲ್ಲಿ ಸಂಚರಿಸಲು ಉಪಯುಕ್ತವಾದ ಸಾರಿಗೆ ಎಂದರೇ ಲೋಕಲ್ ಟ್ರೈನ್ ಮಾತ್ರ. ಹೀಗಾಗಿ ಈ ಲೋಕಲ್ ಟ್ರೈನ್ ಗಳಲ್ಲಿ ಸದಾ ಜನಜಂಗುಳಿ ತುಂಬಿರುತ್ತದೆ. ಈ ಟ್ರೈನ್ ಗಳಲ್ಲಿ ದೂರದ ಪ್ರವಾಸ ಮಾಡುವವರು ಕೆಲವೊಮ್ಮೆ ಜಾಗದ ಮೇಲೆಯೇ ಕುಳಿತು ಮಲಗಿಕೊಳ್ಳುವುದು ಸಹಜ.

ಹೀಗೆಯೇ ಯಾತ್ರಿಕನೊಬ್ಬ ಮಲಗಿಕೊಂಡಾಗ ನಡೆದ ಘಟನೆಯ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಾಣುವ ಹಾಗೆ ವ್ಯಕ್ತಿಯೊಬ್ಬನು ಕೊನೆಯ ಸೀಟಿನ ಮೇಲೆ ಕುಳಿತು ಗಾಢವಾದ ನಿದ್ರೆಗೆ ಜಾರಿದ್ದಾನೆ. ಅದೇ ಸಮಯಕ್ಕೆ ಆತನ ಎದುರಿಗೆ ಕುಳಿತ ವ್ಯಕ್ತಿಯೊಬ್ಬ ಮುಂದಾಗುವ ದೃಶ್ಯದ ಮನವರಿಕೆ ಮಾಡಿಕೊಂಡು ಮೊದಲೇ ವಿಡಿಯೋ ಮಾಡಿಕೊಂಡಿದ್ದಾನೆ.

ವ್ಯಕ್ತಿ ಮಲಗಿದ್ದಾನೆನೋ ನಿಜ, ಆದರೆ ನಿದ್ರೆಯಲ್ಲಿ ತಾನು ಎಲ್ಲಿ ಮಲಗಿದ್ದೇನೆ ಎಂಬುದನ್ನೇ ಮರೆತು ಬಿಟ್ಟಿದ್ದಾನೆ. ಸ್ವಲ್ಪ ಸಮಯದ ನಂತರ ಆತನು ಬ್ಯಾಲೆನ್ಸ್ ಕಳೆದುಕೊಂಡು ಬದಿಗೆ ಬಿದ್ದು ಬಿಟ್ಟಿದ್ದಾನೆ. ಕೆಲವು ಕ್ಷಣ ಅಲ್ಲಿದ್ದವರಿಗೆ ಒಮ್ಮೆಲೆ ಏನಾಯಿತೆಂಬುದೇ ತಿಳಿದಿಲ್ಲ.

ವಿಡಿಯೋ ನೋಡಿ

ಈ ತಮಾಷೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ sayyyam_pi ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೋಡಿದ ನೇಟಿಜನ್ಸ್ ಗಳು ಅನೇಕ ರೀತಿಯ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಮುಂದಿನ ಬಾರಿ ಪ್ರವಾಸದಲ್ಲಿರುವಾಗ ನೀವು ಸಹ ಎಲ್ಲಿ ಮಲಗುತ್ತೀರಿ ಎಂಬುದರ ಬಗ್ಗೆ ನೆನಪಿರಲಿ ಮಿತ್ರರೇ ಜೋಕೆ.

Leave a Comment

Your email address will not be published. Required fields are marked *