ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಅವತಾರ್ ನಲ್ಲಿ! ಸಿಂಗಲ್ ಚಾರ್ಜ್ ನಲ್ಲಿ 151 ಕಿಲೋಮೀಟರ್ ರೇಂಜ್! ಬೆಲೆ ತಿಳಿದುಕೊಳ್ಳಿ ಎಷ್ಟು ಅಂತ….
ಜಗತ್ತಿನಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಮತ್ತು ಡಿಮಾಂಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮುಂಬರುವ ಸಮಯದಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಮತ್ತು ಆಟೋಮೊಬೈಲ್ ಗಳ ವರ್ಚಸ್ವವೇ ಇರಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಟು ವೀಲರ್ ಇರಲಿ ಅಥವಾ ಫೋರ್ ವೀಲರ್ ಈ ಎರಡು ಸೆಗ್ಮೆಂಟ್ ಗಳಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ ಗಳ ಸಂಖ್ಯೆ ಡಿಮಾಂಡ್ ಮತ್ತು ಸಪ್ಲೈ ಹೆಚ್ಚಾಗುತ್ತಲಿವೆ. ಸದ್ಯ ಭಾರತದಲ್ಲಿಯೂ ಈ ಸೆಗ್ಮೆಂಟ್ ನಲ್ಲಿ ಅನೇಕ ಸ್ಟಾರ್ಟಪ್ ಕಂಪನಿಗಳು ಮುಂದೆ ಬರುತ್ತಿವೆ. ಹಾಗೂ ಅವರಿಗೆ ಗ್ರಾಹಕರ ಒಳ್ಳೆಯ ಬೆಂಬಲ ದೊರಕುತ್ತಿದೆ.
ಕ್ಯಾಲೆಂಡರ್ ಇಯರ್ 2021ರಲ್ಲಿ ಸುಮಾರು 1.5 ಲಕ್ಷ ಎಲೆಕ್ಟ್ರಿಕ್ ವೆಹಿಕಲ್ಸ್ ಗಳು ರಜಿಸ್ಟರ್ ಆಗಿವೆ. ಹೆಚ್ಚುತ್ತಿರುವ ಪ್ರದೂಷಣೆಯಿಂದ ಮುಕ್ತವಾಗಲು ಎಲೆಕ್ಟ್ರಿಕ್ ವಾಹನಗಳ ದೊಡ್ಡ ಪಾತ್ರವಿದೆ. ಒಂದು ರೀತಿಯಲ್ಲಿ ಹೆಚ್ಚುತ್ತಿರುವ ಪ್ರದೂಷಣೆಯನ್ನು ಎಲೆಕ್ಟ್ರಿಕ್ ವಾಹನಗಳಿಂದ ಸಹಜವಾಗಿ ಕಂಟ್ರೋಲ್ ಮಾಡಲು ಸಾಧ್ಯವಿದೆ. ನೀವು ನಿಮ್ಮ ವೆಹಿಕಲ್ ನ್ನು ಎಲೆಕ್ಟ್ರಿಕ್ ಕಿಟ್ ಅಳವಡಿಸುವ ಮುಖಾಂತರ ಅದನ್ನು EV (ಎಲೆಕ್ಟ್ರಿಕ್ ವೆಹಿಕಲ್) ಯಲ್ಲಿ ಕನ್ವರ್ಟ್ ಮಾಡಬಹುದಾಗಿದೆ.
ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಕಿಟ್…
GoGoA1 ಇದು ಭಾರತದಲ್ಲಿ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (NGT) ಜೊತೆಗೆ ಸೇರಿ ಹೀರೋ ಸ್ಪ್ಲೆಂಡರ್ ಸಲುವಾಗಿ ಎಲೆಕ್ಟ್ರಿಕ್ ಕಿಟ್ (Hero Splendor Electric Kit) ತಯಾರಿಸುತ್ತಿದೆ. ಜೊತೆಗೆ ಇನ್ನಿತರ ಬೇರೆ ಕಂಪನಿಯ ಬೈಕ್ ಗಳಿಗಾಗಿ ಎಲೆಕ್ಟ್ರಿಕ್ ಕಿಟ್ ತಯಾರಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ.
35 ಸಾವಿರ ರೂಪಾಯಿ ಬೆಲೆ…
ಈ ಎಲೆಕ್ಟ್ರಿಕ್ ಕಿಟ್ ಬೆಲೆ 35 ಸಾವಿರ ರೂಪಾಯಿಗಳಷ್ಟಿದೆ. ಮಹಾರಾಷ್ಟ್ರ ಬೇಸ್ಡ್ ಫರ್ಮ್ ದಾವೆ ಮಾಡುವ ಪ್ರಕಾರ, ಇದು 151 ಕಿಲೋಮೀಟರ್ ರೇಂಜ್ ನೀಡುತ್ತದೆ. ಒಂದು ಸಲ ಚಾರ್ಜ್ ಮಾಡಿದಾಗ ಅಥವಾ ಸಿಂಗಲ್ ಚಾರ್ಜ್ ನಲ್ಲಿ 151 ಕಿಲೋಮೀಟರ್ ಚಲಿಸಬಹುದಾಗಿದೆ. ಈ ಕಂಪನಿಯು RTO ಅಪ್ರೂವ್ಡ್ ಎಲೆಕ್ಟ್ರಿಕ್ ಕಿಟ್ ನ್ನು ಉಪಲಬ್ದ ಮಾಡಿ ಕೊಡುತ್ತದೆ. ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಎಲೆಕ್ಟ್ರಿಕ್ ಕಿಟ್ ಡಿಮಾಂಡ್ ಸದ್ಯ 60 ಪ್ರತಿಶತ ಹೆಚ್ಚಾಗಿದೆ. ಈ ಕಂಪನಿಯ ಇನ್ನು 50% ಕ್ಕಿಂತಲೂ ಹೆಚ್ಚು ಫ್ರೆಂಚೈಸಿ ರಜಿಸ್ಟರ್ ಮಾಡಲಾಗಿದೆ. ಈ ಫ್ರೆಂಚೈಜಿ ದೆಹಲಿ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕರ್ನಾಟಕ ಮತ್ತು ಪಶ್ಚಿಮ ಬಂಗಾಲ ನಂತಹ ರಾಜ್ಯಗಳಲ್ಲಿ ರಜಿಸ್ಟರ್ ಮಾಡಲಾಗಿದೆ.