Video: ಈ ಮಹಾಭೂಪ ಎಮ್ಮೆಯನ್ನು ತನ್ನ ಭುಜದ ಮೇಲೆ ಎತ್ತಿಕೊಳ್ಳಲು ಹೋದ, ಮುಂದೆ ಆಗಿದ್ದೇನು ವೀಡಿಯೋ ನೋಡಿ!!!!
ಇಂದಿನ ಕಲಿಯುಗದಲ್ಲಿ ಪ್ರತಿಯೊಬ್ಬರೂ ಬಲಿಷ್ಠವಾಗಿರುತ್ತಾರೆ ಅಂತ ಹೇಳೋಕೆ ಸಾಧ್ಯನೇ ಇಲ್ಲ ಏಕೆಂದರೆ ಹಿಂದಿನ ಕಾಲದ ಮನುಷ್ಯರಷ್ಟು ಇಂದಿನ ಕಾಲದ ಜನರು ಶಕ್ತಿಯನ್ನು ಹೊಂದಿಲ್ಲ. ಹಿಂದಿನ ಜನರ ಬಲಿಷ್ಠತೆಯ ಬಗ್ಗೆ ನಾವು ಕೇಳಿದ್ದೇವೆ. ಅವರೊಂದಿಗೆ ನಮ್ಮನ್ನು ಹೋಲಿಸಿದರೆ ನಾವು ಶೂನ್ಯ. ಇಂದಿನ ಜಂಕ್ ಫುಡ್ ಮತ್ತು ಕೆಮಿಕಲ್ ಯುಕ್ತ ಧಾನ್ಯಗಳಿಂದಾಗಿ ನಮ್ಮ ಶರೀರಕ್ಕೆ ಅಷ್ಟೊಂದು ಪೌಷ್ಟಿಕತೆ ದೊರೆಯುವದಿಲ್ಲ. ನಾವು ಬೆಳೆಯುವ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಯಬೇಕು ಅನ್ನೋ ಉದ್ದೇಶದಿಂದ ಅವುಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕ ಔಷಧಿ ಹೀಗೆ ಹಲವಾರು ಪ್ರಕಾರದ ಪ್ರಯೋಗ ಮಾಡುವದರರಿಂದ ಬೆಳೆಯು ತನ್ನ ನೈಸರ್ಗಿಕವಾಗಿ ಬೆಳೆಯುವ ಸಾಮರ್ಥ್ಯ ಕಳೆದುಕೊಂಡು ಅದರಲ್ಲಿಯ ಪೌಷ್ಟಿಕ ಅಂಶ ನಷ್ಟವಾಗುತ್ತದೇ ಹೀಗಾಗಿ ನಾವೆಷ್ಟೇ ಆಹಾರ ಸೇವನೆ ಮಾಡಿದರೂ ಸಹ ನಮ್ಮ ಶರೀರ ಸದೃಡವಾಗುವದಿಲ್ಲ.
ಸಾಮಾನ್ಯವಾಗಿ ನಮ್ಮ ಶರೀರ ಸದೃಢ ಮಾಡಿಕೊಳ್ಳಲು ಇಂದು ಅನೇಕ ತರುಣರು ಜಿಮ್ ನತ್ತ ಸಾಗುತ್ತಿದ್ದಾರೆ. ಜಿಮ್ ನಲ್ಲಿ ಹಲವಾರು ಪ್ರಕಾರದ ಕಸರತ್ತು ಮಾಡಿ ತಮ್ಮ ಶರೀರವನ್ನು ಫಿಟ್ ಹಾಗೂ ಸದೃಢ ಮಾಡಿಕೊಳ್ಳುವರು. ಆದರೆ ಜಿಮ್ ನಲ್ಲಿ ಮಾಡಿದ ಬಾಡಿ ಬಹಳಷ್ಟು ದಿನದ ವರೆಗೆ ಉಳಿಯಬೇಕಾದರೆ ನಾವು ಪ್ರತಿನಿತ್ಯ ಚಾಚೂ ತಪ್ಪದೆ ಜಿಮ್ ಗೆ ಹೋಗಬೇಕಾಗುತ್ತೆ. ಕೆಲವರು ಒಂದು ತಿಂಗಳು ಅಥವಾ ಎರಡು ತಿಂಗಳವರಗೆ ಜಿಮ್ ಗೆ ಹೋಗಿ ತಮ್ಮ ಬಾಡಿ ಸದೃಡವಾಗಿಸಬೇಕು ಎಂದು ಆಸೆ ಪಡುತ್ತಾರೆ. ಅದೂ ಸಾಧ್ಯಾನೆ ಆಗುವದಿಲ್ಲ ಆದರೆ ಕೆಲವರು ತಾವು ಜಿಮ್ ಗೆ ಹೋಗುತ್ತಿದ್ದರೆ ಸಾಕು ತಮ್ಮಷ್ಟಕ್ಕೆ ತಾವು ಶಕ್ತಿಮಾನ ಅನ್ನೋ ತರ ಫೀಲ್ ಮಾಡಿಕೊಂಡು ಏನೆಲ್ಲಾ ಸಾಧನೆ ಮಾಡುತ್ತಾರೆ. ಪ್ರಸ್ತುತವಾಗಿ ಅಂತಹ ಪುಣ್ಯಾತ್ಮನ ಒಂದು ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಒಬ್ಬ ಭೂಪ ತನ್ನ ಶಕ್ತಿಯನ್ನು ಜನರಿಗೆ ತೋರಲು ಮಾಡಿರುವ ಸಾಹಸವನ್ನು ನೋಡಿದರೆ ಆಶ್ಚರ್ಯ ಪಡುವಿರಿ. ಏಕೆಂದರೆ ಈತನೂ ಸಹ ಜಿಮ್ ನಲ್ಲಿ ಕಸರತ್ತು ಮಾಡಿ ಕೆಲವೊಂದಿಷ್ಟು ಶರೀರ ಬೆಳವಣಿಗೆ ಮಾಡಿಕೊಂಡಿದ್ದಾನೆ. ಆ ತಾಕತ್ತನ್ನು ಜನರಿಗೆ ತೋರ್ಪಡಿಸುವ ಸಲುವಾಗಿ ತಮ್ಮ ಮನೆಯ ಮುಂದೆ ಕಟ್ಟಿರುವ ಎಮ್ಮೆಯನ್ನು ತನ್ನ ಭುಜದ ಮೇಲೆ ಅಂದರೆ ಬಾಹುಬಲಿ ತನ್ನ ಭುಜದ ಮೇಲೆ ಶಿವಲಿಂಗವನ್ನು ಹೇಗೆ ಹೊತ್ತುಕೊಳ್ಳುತ್ತಾನೆಯೊ ಅದೇ ತರಹ ಈತನು ಸಹ ಆ ಎಮ್ಮೆಯನ್ನು ತನ್ನ ಭುಜದ ಮೇಲೆ ಹೊತ್ತಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ನಾವು ಕುಸ್ತಿ ಪೈಲ್ವಾನ್ ಗಳು ತಾವು ಕುಸ್ತಿ ಆಡೋಕ್ಕಿಂತ ಮುಂಚೆ ಕೆಲವೊಂದಿಷ್ಟು ಕಸರತ್ತುಗಳು ಹೇಗೆ ಮಾಡುತ್ತಾರೆಯೋ ಈತನು ಸಹ ಮೊದಲಿಗೆ ಕಸರತ್ತು ಮಾಡುತ್ತಾನೆ ತದನಂತರ ಅಲ್ಲಿ ಕಟ್ಟಿದ್ದ ಎಮ್ಮೆಯ ಬುಡಕ್ಕೆ ತನ್ನ ಎರಡು ಕೈಗಳನ್ನು ಹಾಕಿ ತನ್ನ ಭುಜದ ಮೇಲೆ ಎತ್ತಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಆದರೆ ಎಮ್ಮೆಗಳ ಭಾರ ಎಷ್ಟು ಇರುತ್ತವೆ ಅನ್ನೋದು ನಮಗೆಲ್ಲ ಗೊತ್ತಿರುವ ಸಂಗತಿಯಾಗಿದೆ. ಹೀಗಾಗಿ ಭಾರವಾದ ಎಮ್ಮೆಯೂ ಸ್ವಲ್ಪವೂ ಕೂಡಾ ಮೇಲೆ ಏಳದೆ ಹಾಗೆ ನಿಲ್ಲುತ್ತದೆ ಆದರೆ ಈ ಮನುಷ್ಯ ಮಾತ್ರ ತನ್ನ ಪ್ರಯತ್ನ ಬಿಡೋದು ಕೊನೆಗೆ ಏನಾಯಿತು ಅನ್ನೋದು ಸ್ವತಃ ನೀವೇ ವಿಡಿಯೋದಲ್ಲಿ ನೋಡಿ.
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋಗೆ ತುಂಬಾ ಲೈಕ್ಸ್ ಸಹ ಬಂದಿವೆ ಅಲ್ಲದೆ ಅದೆಷ್ಟೋ ನೆಟ್ಟಿಗರು ಈತನ ಹುಚ್ಚು ಸಾಹಸದ ಕುರಿತು ಕಾಮೆಂಟ್ ಮಾಡಿ ಸಲಹೆ ನೀಡಿದ್ದಾರೆ.