ಭಾರತದ ದಾಖಲೆಯಲ್ಲಿ ಇನ್ನೊಂದು ಮುಕುಟ! ಜಗತ್ತಿನ ಎಲ್ಲಕ್ಕೂ ಎತ್ತರದ ರೇಲ್ವೆ ಬ್ರಿಡ್ಜ್! ರೇಲ್ವೆ ಸಚಿವರು ಶೇರ್ ಮಾಡಿದರು ಅದ್ಭುತವಾದ ಫೋಟೋ…

ಜಮ್ಮು ಕಾಶ್ಮೀರದ ಚಿನಾಬ್ ನದಿಯ ಮೇಲೆ ಕಟ್ಟುತ್ತಿರುವ ರೇಲ್ವೆ ಬ್ರಿಡ್ಜ್ ಇದು ಜಗತ್ತಿನ ಅತೀ ಎತ್ತರದ ರೇಲ್ವೆ ಬ್ರಿಡ್ಜ್ ಎಂದೇ ಹೆಸರು ಗಳಿಸಲಿದೆ. ಸದ್ಯ ಈ ಕಾಮಗಾರಿ ಪೂರ್ಣತ್ವದ ಕಡೆಗೆ ಮುನ್ನುಗ್ಗುತ್ತಿದೆ. ಇದರದೇ ಒಂದು ಸುಂದರವಾದ ಫೋಟೋವನ್ನು ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಹಂಚಿಕೊಂಡಿದ್ದಾರೆ. ಜೊತೆಗೆ ಕ್ಯಾಪ್ಶನ್ ನಲ್ಲಿ ಮೋಡಗಳ ಮೇಲಿರುವ ಜಗತ್ತಿನ ಅತೀ ಎತ್ತರದ ಚಿನಾಬ್ ಪೂಲ್ ಎಂದಿದ್ದಾರೆ. ನೀವು ಈ ಫೋಟೋದಲ್ಲಿ ಬ್ರಿಡ್ಜ್ ನ ಎತ್ತರದ ಜೊತೆಗೆ ಅದರ ಸುತ್ತಮುತ್ತ ಗುಂಪುಗೂಡಿದ ಮೋಡಗಳನ್ನು ಸಹ ನೋಡಬಹುದಾಗಿದೆ.

ಚೀನಾಬ್ ನದಿಯ ಮೇಲೆ ಕಟ್ಟಲ್ಪಡುತ್ತಿರುವ ಈ ಬ್ರಿಡ್ಜ್ ನ ಎತ್ತರ 359 ಮೀಟರ್ ಇದ್ದು ಇನ್ನು ಕೆಲವೇ ಕೆಲವು ದಿವಸಗಳಲ್ಲಿ ಕಾಶ್ಮೀರ್ ಕಣಿವೆ ದೇಶದ ಇನ್ನಿತರ ಭಾಗಕ್ಕೆ ರೇಲ್ವೆ ಮುಖಾಂತರ ಜೋಡಿಸಲಿದೆ. ಈ ಬ್ರಿಡ್ಜ್ ನಿರ್ಮಾಣ ಭಾರತಕ್ಕೆ ಒಂದು ಮೈಲಿಗಲ್ಲು ಸಾಬೀತಾಗಲಿದೆ. ಪ್ರಸ್ತುತ ಬ್ರಿಡ್ಜ್ ನ ಕೆಲಸ ಮುಂಬರುವ ಮಾರ್ಚ್ ವರೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ (KRCL) ಮತ್ತು ಉಧಮಪೂರ್-ಶ್ರೀನಗರ-ಬಾರಾಮುಲ್ಲಾ ರೈಲ್ವೆ ಲಿಂಕ್ (USBRL) ಜಂಟಿ ಪ್ರೊಜೆಕ್ಟ್ ನಲ್ಲಿ 111 ಕಿಲೋಮೀಟರ್ ಸವಾಲಿನ ಚಿನಾಬ್ ಪೂಲ್ ಇನ್ನೇನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಈ ಬ್ರಿಡ್ಜ್ ಎಷ್ಟೊಂದು ಎತ್ತರವಾಗಿದೆ ಎಂದರೆ, ಜಗತ್ತಿನ ಏಳು ಆಶ್ಚರ್ಯಗಳಲ್ಲಿ ಒಂದಾದ ಫ್ರಾನ್ಸ್ ನ ಐಫೆಲ್ ಟವರ್ (ಎತ್ತರ 324 ಮೀಟರ್) ಗಿಂತಲೂ 35 ಮೀಟರ್ ಹೆಚ್ಚು ಈ ಬ್ರಿಡ್ಜ್ ನ ಎತ್ತರ ಇರಲಿದೆ. ಇನ್ನು ಇದರ ಉದ್ದ 17 ಸ್ಪ್ಯಾನ್ ಸಹ 1,315 ಮೀಟರ ಇದ್ದು ಅದರಲ್ಲಿ ಚೀನಾಬ್ ನದಿಯ ಮೇಲಿನ ಮುಖ್ಯ ಕಮಾನುಗಳ ಉದ್ದಳತೆ 467 ಮೀಟರ್ ಇದೆ. ಈ ಬ್ರಿಡ್ಜ್ ನಲ್ಲಿ ಉಪಯೋಗಿಸಲಾದ ಸ್ಟ್ರಕ್ಚರಲ್ ಸ್ಟೀಲಿನ ಇನ್ನೊಂದು ವೈಶಷ್ಟ್ಯವೆಂದರೆ, ಈ ಬ್ರಿಡ್ಜ್ -10 ರಿಂದ – 40 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೂ ಯಾವುದೇ ಸಮಸ್ಯೆ ಇಲ್ಲದೆ ಫೇಸ್ ಮಾಡುತ್ತದೆ. ಒಟ್ಟಿನಲ್ಲಿ ಜಮ್ಮು ಕಾಶ್ಮೀರದ ವಾತಾವರಣವು ಈ ಬ್ರಿಡ್ಜ್ ಮೇಲೆ ಯಾವುದೇ ಪರಿಣಾಮನ್ನುಂಟು ಮಾಡುವುದಿಲ್ಲ.