ಗಗನಾಧಿಪತಿ ಗರುಡರಾಜ ನರಿಯ ಮೇಲೆ ಬೇಟೆಗಾಗಿ ಅಟ್ಯಾಕ್ ಮಾಡಿದ ರೌದ್ರರೂಪ ನೋಡಿ ಈ ವೈರಲ್ ವಿಡಿಯೋದಲ್ಲಿ! ಆದರೆ ಕೊನೆ ಏನಾಗಿರಬೇಕು? ಅಂತೀರಾ. ಹೇಳಿ ನೋಡೋಣ…
ಒಂದೊಂದು ಜೀವಿಗಳು ಒಂದೊಂದು ಕ್ಷೇತ್ರದಲ್ಲಿ ರಾಜನಂತೆ ವರ್ತಿಸಲು ನಿಸರ್ಗವು ಅವುಗಳಿಗೆ ಅದ್ಭುತವಾದ ಶಕ್ತಿ ನೀಡಿದೆ. ನೀರಿನಲ್ಲಿ ಮೊಸಳೆ, ಕಾಡಿನಲ್ಲಿ ಸಿಂಹ ಹಾಗೆ ಆಕಾಶದಲ್ಲಿ ಗರುಡ ಬೇಟೆಯಾಡುವದರಲ್ಲಿ ತುಂಬಾ ಕತರ್ನಾಕ್ ಆಗಿರುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಗರುಡರಾಜ ಬೇಟೆಯಾಡಿದ ವಿಡಿಯೋ ಒಂದು ಭರ್ಜರಿಯಾಗಿ ವೈರಲ್ ಆಗುತ್ತಿದೆ. ಗರುಡನ ತೀಕ್ಷ್ಣವಾದ ದೃಷ್ಟಿ ಸಾಕಷ್ಟು ದೂರದಿಂದಲೂ ತನ್ನ ಬೇಟೆಯನ್ನು ಸಹಜವಾಗಿ ಶೋಧಿಸುವಲ್ಲಿ ಸಮರ್ಥವಾಗಿರುತ್ತದೆ. ಇದರ ಇನ್ನೊಂದು ವೈಶಿಷ್ಠ್ಯವೇನೆಂದರೆ ಗಂಟೆಗೆ ಸುಮಾರು 320 ಕಿಮೀ ವೇಗದಲ್ಲಿ ಹಾರಾಟ ಮಾಡಬಲ್ಲದು. ಇದರ ಕಾಲುಗಳು ಅದ್ಭುತವಾದ ಶಕ್ತಿಯನ್ನು ಹೊಂದಿರುತ್ತದೆ. ಜೊತೆಗೆ ಅದರ ಉಗುರುಗಳಲ್ಲಿ ಬಲಿಷ್ಠವಾದ ಪ್ರಾಣಿಯನ್ನು ಹಿಡಿಯುವಂತ ಶಕ್ತಿ ಇರುತ್ತದೆ.
ಸದ್ಯ ಇದೇ ಗರುಡರಾಜನ ಬೇಟೆಯಾಡುವ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಗರುಡ ಪಕ್ಷಿಯು ನರಿಯೊಂದನ್ನು ಬೇಟೆಯಾಡುವ ಪ್ರಯತ್ನ ಮಾಡಿದೆ. ಗರುಡ ಬೇಟೆಯಾಡುವ ಈ ಪದ್ಧತಿ ನೋಡುಗರಿಗೆ ಸ್ತಬ್ಧ ಮಾಡುತ್ತದೆ.
ವಿಡಿಯೋದಲ್ಲಿ ಕಾಣುವ ಹಾಗೆ ನರಿಯೊಂದು ಬೆಟ್ಟದ ಮೇಲಿಂದ ನಡೆದುಕೊಂಡು ಹೋಗುತ್ತಿರುವುದನ್ನು ಮೇಲಿನಿಂದಲೇ ಗಮನಿಸಿದ ಗರುಡ ಅದರ ಮೇಲೆ ಅಟ್ಯಾಕ್ ಮಾಡಿದೆ. ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿಲ್ಲ. ಆಗ ನರಿಯು ಬದುಕಿದೆಯಾ ಬಡಜೀವವೇ ಎಂದು ಬೇರೆ ಕಡೆಗೆ ಓಡುತ್ತಾ ಹೋಗುತ್ತಿದೆ. ಬಲಿಷ್ಠ ಹದ್ದು ಮಾತ್ರ ಅಷ್ಟಕ್ಕೇ ಬಿಡದೆ ಎರಡನೇ ಬಾರಿ ಅದರ ಮೇಲೆ ತೀವ್ರವಾಗಿ ದಾಳಿ ನಡೆಸಿದ್ದನ್ನು ಇಲ್ಲಿ ನೋಡಬಹುದು.
ವಿಡಿಯೋ ನೋಡಿ
— Life and nature (@afaf66551) February 13, 2022
ಈ ವಿಡಿಯೋವನ್ನು Life and nature ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ಮೇಲೆ ಹದ್ದು ಬೇಟೆಯಾಡುವದರಲ್ಲಿ ತುಂಬಾ ಕತರ್ನಾಕ್ ಪಕ್ಷಿಯೆಂದು ತಿಳಿದುಬರುತ್ತದೆ. ಪ್ರಸ್ತುತ ವಿಡಿಯೋ ತುಂಬ ವೇಗದಲ್ಲಿ ವೈರಲ್ ಹಾಗೂ ಶೇರ್ ಆಗುತ್ತಿದೆ. ವಿಡಿಯೋದಲ್ಲಿ ಕೊನೆಗೆ ಹದ್ದು ನರಿಯನ್ನು ಹಿಡಿದಿದೆಯೋ ಅಥವಾ ನರಿಯೇ ಹದ್ದಿಗೆ ಹಿಡಿದಿದೆ ಎಂಬುದು ಸ್ಪಷ್ಟವಾಗಿ ಕಂಡು ಬಂದಿಲ್ಲ. ಈ ವಿಡಿಯೋ ನೋಡಿದ ನಿಮಗೆ ಏನನಿಸುತ್ತದೆ ಎಂಬುದು ಕಮೆಂಟ್ ಮಾಡಿ ಹೇಳಿ ನೋಡೋಣ.