ಶಿವಸೇನೆಯ ಕಾರ್ಯಕರ್ತನೊಬ್ಬನಿಗೆ ಒಗಟಾದ ಮಾಸ್ಕ್; ಫಜೀತಿಗೊಳಗಾದ ತಮಾಷೆಯ ವಿಡಿಯೋ ಆಗುತ್ತಿದೆ ಬರ್ಜರಿ ವೈರಲ್! ನಮ್ಮ “ಹೌದೋ ಹುಲಿಯಾ” ಕಾರ್ಯಕರ್ತನೇ ಸೂಪರ್!
ಜಗತ್ತಿನಲ್ಲಿ ಕೋರೋನ ಎಂಟ್ರಿ ಹೊಡೆದು ಎರಡು ವರ್ಷಗಳ ಸಮಯವೇ ಕಳೆದು ಹೋಯಿತು. ಈ ಪರಿಸ್ಥಿತಿಯಲ್ಲಿ ಮಾಸ್ಕ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಸದ್ಯಕ್ಕಂತೂ ದೇಶದ ತುಂಬಾ ಕೋರೋನದ ರೋಗಿಗಳ ಸಂಖ್ಯೆಯಲ್ಲಿ ತುಂಬಾ ಇಳಿಮುಖವಾಗಿದ್ದು ಕಂಡುಬರುತ್ತದೆ. ಸದ್ಯದ ಪರಿಸ್ಥಿತಿ ನೋಡಿದರೆ ಹಾಗೋ ಹೀಗೋ ಕೋರೋನ ಕಾಯಂ ಆಗಿ ಖತಮ್ ಆಗುತ್ತದೆನೋ ಎಂಬಂತೆ ಕಂಡುಬರುತ್ತಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಉತ್ತರಪ್ರದೇಶದಲ್ಲಿಯ ಶಿವಸೇನೆಯ ರಾಜಕೀಯ ಸಭೆಯಲ್ಲಿಂದ ಕಾರ್ಯಕರ್ತನೊಬ್ಬನ ವಿಡಿಯೋ ಒಂದು ತುಂಬಾ ಜೋರಾಗಿ ವೈರಲ್ ಆಗುತ್ತಿದೆ. ಈತ ಸ್ಟೇಜ್ ಮೇಲೆ ಭಾಷಣದ ನಡೆದ ಸಂದರ್ಭದಲ್ಲಿ ಅಲ್ಲಿಯೇ ಬದಿಗೆ ನಿಂತಿದ್ದಾನೆ. ಅಲ್ಲಿ ನಿಂತು ಮಾಸ್ಕ್ ಹಾಕಿಕೊಳ್ಳಲು ಒಂದೇ ಸಮನೆ ಹೆಣಗಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳಿಗೆ ತುಂಬಾ ತಮಾಷೆಯ ವಿಷಯವಾಗಿದೆ.
ಕೊನೆಗೂ ಮಾಸ್ಕನ ಗಣಿತ ಬಿಡಿಸಲು ಸಾಧ್ಯವಾಗಲೇ ಇಲ್ಲ….
ಕೊರೋನ ಹದ್ದು ಪಾರಾಗಿ ಹೋಗುವ ಸಮಯ ಬಂದರೂ ಇನ್ನು ಕೆಲವರಿಗೆ ಮಾಸ್ಕ್ ತೊಟ್ಟುಕೊಳ್ಳಲು ಬರುತ್ತಿಲ್ಲ ಎಂದರೆ ನಿಜಕ್ಕೂ ಇದು ತಮಾಷೆಯ ಮತ್ತು ನಾಚಿಕೆಗೇಡಿನ ವಿಷಯವೇ ಆಗಿದೆ. ಮಾಸ್ಕ ಇದು ಕೋವಿಡ್ ಪ್ರೋಟೋಕಾಲ್ ನ ಮಹತ್ವದ ಭಾಗವಾಗಿದ್ದರೂ ಕೆಲವರಿಗೆ ಮಾಸ್ಕ್ ತೊಟ್ಟುಕೊಳ್ಳುವುದು ಎಂದರೆ ದೊಡ್ಡ ಕಗ್ಗಂಟಾಗಿ ಹೋಗಿದೆ ಎಂಬುದು ಈ ವಿಡಿಯೋದಲ್ಲಿ ನೋಡಬಹುದು. ಉತ್ತರಪ್ರದೇಶದ ಗೊರಖಪೂರ್ ನಲ್ಲಿ ಶಿವಸೇನೆಯ ಸಭೆಯಲ್ಲಿ ನಾಯಕರು ಸ್ಟೇಜ್ ಮೇಲೆ ಭಾಷಣ ಮಾಡುವುದು ನಡೆದಿತ್ತು. ಅವರ ಬದಿಯಲ್ಲಿ ನಿಂತ ಒಬ್ಬ ಕಾರ್ಯಕರ್ತನು KN 95 ಮಾಸ್ಕ್ ಧರಿಸಿಕೊಳ್ಳುವ ದುರ್ಭರವಾದ ಪ್ರಯತ್ನದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪ್ರಯತ್ನದಲ್ಲಿ ಆತ ಕೊನೆಗೂ ಯಶಸ್ವಿಯಾಗಿಲ್ಲ. ಆ ಕಾರ್ಯಕರ್ತನು ಮಾಸ್ಕ್ ಹಾಕಿಕೊಳ್ಳಲು ಒದ್ದಾಡುತ್ತಿರುವುದನ್ನು ನೋಡಿ ಕೊನೆಗೆ ಬದಿಗೆ ನಿಂತ ಬೇರೊಬ್ಬ ಕಾರ್ಯಕರ್ತ ಆತನಿಗೆ ಸಹಾಯ ಮಾಡಿದಾಗಲೇ ಮಾಸ್ಕ್ ನ ಗಣಿತ ಬಿಡಿಸಲು ಸುಲಭವಾಯಿತು.
ಈ ಕಾರ್ಯಕರ್ತನಿಗೆ ಹೋಲಿಸಿದರೆ ನಮ್ಮ ಕರ್ನಾಟಕದ ಹೌದು ಹುಲಿಯಾ ಪ್ರಸಿದ್ಧಿಯ ಕಾರ್ಯಕರ್ತನೇ ಸೂಪರ್ ಎನ್ನಬಹುದು. ಆತನೂ ಸಹ ಚುನಾವಣೆಯ ಸಂದರ್ಭದಲ್ಲಿ ಒಂದೇ ರಾತ್ರಿಯಲ್ಲಿ ಬೆಳಕಿಗೆ ಬಂದಿದ್ದು ನೆನಪಿಗೆ ಬರುತ್ತದೆ. ಇಡೀ ಕರ್ನಾಟಕವನ್ನೇ ಹೌದು ಹುಲಿಯಾ ಮಯವಾಗಿ ಮಾಡಿ ಬಿಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ ಈ ಮಹಾರಾಯ ಕೋರೋನ ಬಂದು ಎರಡು ವರ್ಷಗಳೇ ಕಳೆದರೂ ಇನ್ನೂ ಸರಿಯಾಗಿ ಮಾಸ್ಕ್ ತೊಟ್ಟುಕೊಳ್ಳಲು ಬರುತ್ತಿಲ್ಲವೆಂದರೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರೆ ತಪ್ಪಲ್ಲ.
ವಿಡಿಯೋ ನೋಡಿ
w8 for it…! 😁 pic.twitter.com/uG7gkaNLBg
— Andolanjivi faijal khan (@faijalkhantroll) February 24, 2022
ಈ ವಿಡಿಯೋವನ್ನು ಒಬ್ಬ ಯೂಸರ್ @faijalkhantroll ಈ ಹೆಸರಿನಿಂದ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾನೆ. ವಿಡಿಯೋದ ಕ್ಯಾಪ್ಷನ್ ನಲ್ಲಿ w8 for it…! ಎಂದು ಬರೆದಿದ್ದಾನೆ. ಇಲ್ಲಿಯವರೆಗೆ ಈ ವಿಡಿಯೋವನ್ನು 7 ಲಕ್ಷಕ್ಕೆ ಸಮೀಪ ಜನರು ವೀಕ್ಷಿಸಿದ್ದು ಸುಮಾರು 20 ಸಾವಿರ ವರೆಗೆ ಲೈಕ್ಸ್ ಗಳು ಬಂದಿವೆ. ನೂರಾರು ಯೂಸರ್ ಗಳು ತರತರದ ತಮಾಷೆಯ ಕಮೆಂಟ್ ಗಳು ಸಹ ಮಾಡುತ್ತಿದ್ದಾರೆ.