ಪುಟ್ಟ ಕಂದಮ್ಮಗೆ ಎತ್ತಿಕೊಂಡು ನಡೆಯುತ್ತಿರುವಾಗಲೇ ಜಾರಿತು ತಂದೆಯ ಕಾಲು! ಮಗುವಿಗೆ ಉಳಿಸಲು ತಂದೆ ಮಾಡಿದ ಪ್ರಯತ್ನ ಗೆದ್ದಿತು ನೇಟಿಜನ್ಸ್ ಗಳ ಮನಸ್ಸು; ವಿಡಿಯೋ ವೈರಲ್…
ಪೋಷಕರು ತಮ್ಮ ಮಕ್ಕಳ ಕಾಳಜಿ ತೆಗೆದುಕೊಳ್ಳುವುದರಲ್ಲಿ ಯಾವುದೇ ರೀತಿಯ ರಾಜೀ ಮಾಡಿಕೊಳ್ಳುವುದಿಲ್ಲ. ಇನ್ನು ಗಾಯ, ನೋವು ಸಂಕಟಗಳಂತೂ ದೂರದ ಮಾತು. ಸ್ವಲ್ಪವೇ ಅಪಾಯದ ಸೂಚನೆ ಕಂಡರೂ ಪೋಷಕರು ತಮ್ಮ ಜೀವದ ಕುಡಿಯನ್ನು ಎದೆಗೆ ಹಚ್ಚಿಕೊಂಡು ಕುಳಿತುಕೊಳ್ಳುತ್ತಾರೆ. ಸದ್ಯ ಇದೇ ರೀತಿಯ ಒಂದು ಮಗುವಿನ ಕಾಳಜಿ ತೆಗೆದುಕೊಂಡ ತಂದೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪ್ರಸ್ತುತ ವ್ಯಕ್ತಿ ತನ್ನ ಮಗುವಿನ ಪುಟ್ಟ ಜೀವವನ್ನು ಯಾವ ರೀತಿ ಉಳಿಸಿದ್ದಾನೆಂಬುದು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ.
ವಿಡಿಯೋದಲ್ಲಿ ಕಾಣುವ ಹಾಗೆ ವ್ಯಕ್ತಿಯು ಮನೆಯಿಂದ ತನ್ನ ಫ್ಯಾಮಿಲಿಯ ಜೊತೆಗೆ ಹೊರಗೆ ಬೀಳುತ್ತಿರುವ ಸಂದರ್ಭದಲ್ಲಿಯೇ ಕಾಲು ಜಾರುತ್ತದೆ. ಆಗ ಆತನು ಸಂಪೂರ್ಣವಾಗಿ ತನ್ನ ಬ್ಯಾಲೆನ್ಸ್ ಕಳೆದುಕೊಂಡು ಕೆಳಗೆ ಬೀಳುತ್ತಿರುತ್ತಾನೆ. ಆದರೆ ಅಲ್ಲಿ ಒಂದು ಹೂಕುಂಡ ಇರುತ್ತದೆ. ಮಗುವಿನ ತಲೆ ಇನ್ನೇನು ಆ ಕೆಳಗೆ ಬಿದ್ದಿರುವ ಹೂಕುಂಡಕ್ಕೆ ಅಪ್ಪಳಿಸುತ್ತದೆ ಎನ್ನುವಷ್ಟರಲ್ಲಿ ತಂದೆಯು ಜಾಣತನದಿಂದ ಅದರ ಬದಿಗೆ ಸರಿಯಾಗಿ ಡೈವ್ ಹೊಡೆದಿದ್ದಾನೆ. ಇದರಿಂದ ಮಗುವನ್ನು ಭೂಮಿಯ ಮೇಲೆ ಹಾಗೂ ಹೂಕುಂಡದ ಮೇಲೆ ಹೋಗಿ ಬೀಳುವುದರಿಂದ ರಕ್ಷಿಸಿದ್ದಾನೆ. ತನ್ನ ಎದೆಯ ಮೇಲೆಯೇ ಗಟ್ಟಿಯಾಗಿ ಹಿಡಿದು ಕೊಂಡಿದ್ದಾನೆ. ಈ ಘಟನೆಯಲ್ಲಿ ಮಗುವಿಗೆ ಕಿಂಚಿತ್ತೂ ಗಾಯವಾಗಿಲ್ಲ.
ವೀಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಹಾಗ್ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 60 ಸಾವಿರ ಜನರು ನೋಡಿದ್ದಾರೆ ಮತ್ತು ತಂದೆಯ ಕಾಳಜಿ ಮತ್ತು ಪ್ರೀತಿಯ ಬಗ್ಗೆ ಅನೇಕ ಅಭಿಪ್ರಾಯಗಳನ್ನು ವ್ಯಕ್ತ ಮಾಡಿದ್ದಾರೆ. ಈ ತಂದೆಗೆ ನೆಟ್ಟಿಗರು ಸೂಪರ್ ಡ್ಯಾಡ್ ಎಂದು ಸಂಬೋಧಿಸುತ್ತಿದ್ದಾರೆ.