ಟೈಮ್ ಕರಾಬು ಹೇಗಿರುತ್ತದೆಂದು ತಿಳಿಯಬೇಕಾದರೆ ಈ ವೈರಲ್ ವಿಡಿಯೋ ನೋಡಿ! ತನ್ನಷ್ಟಕ್ಕೆ ತಾನು ಸೀನಿದಾಗ ಡೇಂಜರ್ ಡಿಕ್ಕಿ! ಸೂಪರ್ ಟೈಮಿಂಗ್ ಎಂದರು ನೇಟಿಜನ್ಸ್…

ಆಪತ್ತು, ಅವಘಡ, ಅಪಘಾತಗಳು ಯಾವತ್ತೂ ಹೇಳಿಕೇಳಿ ಸಂಭವಿಸುದಿಲ್ಲ. ಮತ್ತು ಇಂತಹ ಘಟನೆಗಳು ಯಾವ ರೀತಿಯಾಗಿ ನಡೆಯುತ್ತದೆ ಎಂಬುದರ ಮುನ್ಸೂಚನೆಯೂ ಇರುವುದಿಲ್ಲ. ಇವು ತುಂಬಾ ಹಠಾತ್ತನೆ ಮತ್ತು ಆಕಸ್ಮಿಕವಾಗಿ ನಡೆಯುತ್ತವೆ. ಇದೇ ರೀತಿ ಒಂದು ಇನ್ಸಿಡೆಂಟ್ ಆಫೀಸ್ ಒಂದರಲ್ಲಿ ನಡೆದದ್ದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿಡಿಯೋದಲ್ಲಿ ಕಂಡುಬರುವ ಹಾಗೆ ವ್ಯಕ್ತಿಯೊಬ್ಬನು ಟೇಬಲ್ ಎದುರಿಗೆ ಚೇರ್ ಹಾಕಿಕೊಂಡು ಕುಳಿತಿದ್ದಾನೆ. ಇನ್ನೊಬ್ಬನು ಸರಿಯಾಗಿ ಆತನಿಗೆ ಎದುರಿಗೆ ಟೇಬಲ್ಲಿಗೆ ಆನಿಸಿ ನಿಂತಿದ್ದಾನೆ. ಚೇರ್ ಮೇಲೆ ಕುಳಿತ ವ್ಯಕ್ತಿಯ ಬಲಭಾಗಕ್ಕೆ ಬೇರೆವ್ಯಕ್ತಿಯೊಬ್ಬ ನಿಂತು ಕುಳಿತ ವ್ಯಕ್ತಿಗೆ ಯಾವುದೋ ಒಂದು ಮಾಹಿತಿಯನ್ನು ನೀಡುತ್ತಿದ್ದಾನೆ. ಈ ಮಾಹಿತಿ ನೀಡುವ ಸಂದರ್ಭದಲ್ಲಿ ವ್ಯಕ್ತಿಗೆ ಹಠಾತ್ತನೆ ಸೀನು ಬಂದಿದೆ. ಸರಿಯಾಗಿ ಅದೇ ಸಮಯಕ್ಕೆ ಆಫೀಸಿನಲ್ಲಿ ಯುವತಿಯೊಬ್ಬಳು ಮಾಹಿತಿ ಹೇಳುತ್ತಿರುವ ವ್ಯಕ್ತಿಯ ಎದುರಿನಿಂದ ಹಾಯ್ದು ಹೋಗುತ್ತಿದ್ದಾಳೆ. ಇದನ್ನು ಮಾಹಿತಿ ನೀಡುವ ವ್ಯಕ್ತಿಯು ಸೀನುವಾಗ ಗಮನಿಸಿಲ್ಲ. ಯಾಕೆಂದರೆ ಸೀನು ಬಂದಾಗ ವ್ಯಕ್ತಿಯ ಕಣ್ಣುಗಳು ತನ್ನಂತಾನೇ ಮುಚ್ಚುತ್ತವೆ. ಇದೇ ಕಾರಣದಿಂದ ಸೀನುತ್ತಿರುವ ವ್ಯಕ್ತಿಯು ತನ್ನ ಮುಂದಿನಿಂದಲೇ ಹಾಯ್ದು ಹೋಗುತ್ತಿರುವ ಮಹಿಳೆಯನ್ನು ಗಮನಿಸದೆ ಜೋರಾಗಿ ತಲೆ ಬಾಗಿಸಿ ಸೀನಿದಾಗ ಆತನ ಹಾಗೂ ಯುವತಿಯ ಎರಡೂ ತಲೆಗಳು ಜೋರಾಗಿ ಡಿಕ್ಕಿಯಾಗಿವೆ. ವಿಡಿಯೋದಲ್ಲಿ ಕಂಡುಬಂದಂತೆ ಪೆಟ್ಟು ಇಬ್ಬರಿಗೂ ಜೋರಾಗಿಯೇ ಬಿದ್ದಿದೆ ಎಂದು ತಿಳಿದುಬರುತ್ತದೆ. ಇನ್ನು ಮುಂದೆ ಸೀನುವಾಗ ತುಂಬಾ ಜೋಕೆ ಮಿತ್ರರೇ.

ನೋಡಿ ಈ ವಿಡಿಯೋ…

ಈ ತಲೆಗಳು ಡಿಕ್ಕಿಯಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ discovery.engenharia ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 8 ಲಕ್ಷ ಜನರು ನೋಡಿದ್ದಾರೆ ಮತ್ತು 50 ಸಾವಿರ ಜನ ಲೈಕ್ ಮಾಡಿದ್ದಾರೆ.