VIDEO ವೈರಲ್ : ಬೀಗವೂ ಒಡೆದಿಲ್ಲ, ಕನ್ನವು ಹಾಕಿಲ್ಲ; ಆದರೂ ಲಾಕ್ ಅಪ್ ನಿಂದ ಪರಾರಿಯಾದ ಕಳ್ಳನ ಡೆಮೋ ನೋಡಿ ಪೊಲೀಸರು ಸುಸ್ತು…
ಪೊಲೀಸರು ಎಷ್ಟು ಅಡ್ವಾನ್ಸ್ ಆಗಿರುತ್ತಾರೆಯೋ ಕಳ್ಳರು ಅವರಿಗಿಂತಲೂ ಎಕ್ಸ್ಟ್ರಾ ಅಡ್ವಾನ್ಸ್ ಆಗಿರುತ್ತಾರೆ. ಪೊಲೀಸರಿಗಿಂತ ಕಳ್ಳರ ಅಥವಾ ಅಪರಾಧಿಗಳ ಹೊಮ್ ವರ್ಕ್ ಜಾಸ್ತಿಯಾಗಿರುತ್ತದೆ. ಈಗ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಾಕಣ್ ಪೊಲೀಸ್ ಸ್ಟೇಷನ್ ನಲ್ಲಿಯ ಕಳ್ಳನೊಬ್ಬ ಅಲ್ಲಿಯ ಪೊಲೀಸರ ನಿದ್ದೆಗೆಡಿಸಿದ್ದಾನೆ. ಪೊಲೀಸರು ನಂತರ ಪ್ರಯತ್ನ ಪಟ್ಟು ಪರಾರಿಯಾದ ಕಳ್ಳನನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಳ್ಳ ಲಾಕಪ್ ನಿಂದ ತುಂಬಾ ಸಹಜವಾಗಿ ಪರಾರಿಯಾಗಿದ್ದಾನೆ. ಪರಾರಿಯಾಗುವಾಗ ಲಾಕ್ ಅಪ್ ನ ಬೀಗವೂ ಒಡೆದಿಲ್ಲ ಮತ್ತು ಗೋಡೆಗೆ ಕನ್ನವೂ ಸಹ ಹಾಕದೆ ತುಂಬಾ ಆರಾಮಾಗಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪೊಲೀಸರ ಪ್ರಯತ್ನದ ನಂತರ ಓಡಿಹೋದ ಕಳ್ಳ ಮತ್ತೆ ಸಿಕ್ಕಿಬಿದ್ದಿದ್ದಾನೆ. ಆಗ ಪೊಲೀಸರು ಆತನಿಂದ ಓಡಿಹೋದ ರೀತಿಯ ಡೆಮೊ ಮಾಡಿಸಿಕೊಂಡಿದ್ದಾರೆ.
ಪುಣೆಯ ಹತ್ತಿರದ ನಾಶಿಕ್ ಪಟ್ಟಣಕ್ಕೆ ಹೋಗುವ ಹೈವೇ ಹತ್ತಿರ ಇರುವ ಪೊಲೀಸ್ ಸ್ಟೇಷನ್ ನಿಂದ ಆರೋಪಿಯೊಬ್ಬ ಕಣ್ಮರೆಯಾಗಿದ್ದ. ಲಾಕಪ್ ಲಾಕ್ ಹಾಗೆಯೇ ಬೀಗ ಜಡೆದದ್ದು ಇತ್ತು. ಬಾಗಿಲಿರುವ ಕಬ್ಬಿಣದ ರಾಡ್ ಗಳು ಸಹ ಮೊದಲಿನ ಹಾಗೆಯೇ ಇದ್ದವು. ಆದರೂ ಸಹ ಕಳ್ಳ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದ. ಹಾಗಾದರೆ ಈ ಕಳ್ಳ ಅದ್ಹೇಗೆ ಓಡಿಹೋದನು ಎಂಬ ಪ್ರಶ್ನೆ ಪೊಲೀಸರಿಗೆ ಸತಾಯಿಸುತ್ತಿತ್ತು. ಆದರೆ ಪೊಲೀಸರ ಅದೃಷ್ಟವೆಂಬಂತೆ ಕಳ್ಳ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದ.
ಸಿಕ್ಕಿಬಿದ್ದ ಕಳ್ಳನಿಗೆ ಪೊಲೀಸರು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಬಂದು ಆತನ ಮೇಲೆ ಅಕ್ಷನ್ ತೆಗೆದುಕೊಳ್ಳುವ ಮೊದಲು ಆತ ಲಾಕ್ಅಪ್ ನಿಂದ ಓಡಿಹೋದ ರೀತಿಯನ್ನು ಪೊಲೀಸರಿಗೆ ತಿಳಿದುಕೊಳ್ಳುವುದಿತ್ತು. ಕಳ್ಳನು ಸಹ ಪೊಲೀಸರಿಗೆ ತಾನು ಓಡಿಹೋದ ರೀತಿಯ ಡೆಮೊ ಮಾಡಿ ತೋರಿಸಿದ್ದಾನೆ. ಅದನ್ನು ನೋಡಿದ ಪೊಲೀಸರು ಸಹ ಆಶ್ಚರ್ಯ ಮಾಡಿದ್ದಾರೆ.
ಕೆಲವೇ ಸೆಕೆಂಡುಗಳಲ್ಲಿ ಕಳ್ಳ ಸಹಜವಾಗಿ ಲಾಕ್ ಅಪ್ ನಿಂದ ಓಡಿಹೋದ ರೀತಿಯ ಡೆಮೊ ಮಾಡಿ ತೋರಿಸಿದ ನಂತರ ಪೊಲೀಸರು ಸಹ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಈ ಕಳ್ಳ ಸಂಪೂರ್ಣ ಪೊಲೀಸ್ ಸಿಸ್ಟಮ್ ಗೆ ಸರಿಯಾಗಿ ವಿಚಾರಮಾಡಲು ಹಚ್ಚಿದ್ದಾನೆ. ಪೋಲಿಸ್ ಲಾಕಪ್ ನ್ನು ಕಳ್ಳರು ಓಡಿಹೋಗದಂತೆ ಇನ್ನಷ್ಟು ಸುರಕ್ಷಿತವಾಗಿರುವ ಸಲುವಾಗಿ ಹೆಜ್ಜೆ ಇಡಬೇಕಾಗಿದೆ.
ವಿಡಿಯೋ ನೋಡಿ
लॉकअप से कैसे निकल कर फरार हुआ था आरोपी..पुलिस ने दिखाया लाइव डेमो..#MaharashtraPolice pic.twitter.com/4BY9NvjQkZ
— Zee News (@ZeeNews) March 22, 2022
ಪ್ರಸ್ತುತ ವಿಡಿಯೋದಲ್ಲಿ ಪೊಲೀಸರು ಕಳ್ಳ ಓಡಿ ಹೋದ ಬಗ್ಗೆಯ ಮಾಹಿತಿಯನ್ನು ಮರಾಠಿ ಭಾಷೆಯಲ್ಲಿ ನೀಡಿದ್ದಾರೆ. ಈ ವೀಡಿಯೋವನ್ನು ಟ್ವಿಟರ್ ಮುಖಾಂತರ Zee News ಆಫಿಸಿಯಲ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.