ಬೈಕ್ ಸವಾರರೇ ಹುಷಾರ್! ನಾಯಿ ಬೆನ್ನಟ್ಟಿದ ಭಯದಲ್ಲಿ ಎಂಥ ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು ನೀವೇ ನೋಡಿ! ಈ ವೈರಲ್ ವಿಡಿಯೋದಲ್ಲಿ…
ಬೈಕ್ ಮುಖಾಂತರ ಸಂಚರಿಸುವಾಗ ಅನೇಕ ರೀತಿಯ ಅಪಘಾತಗಳು ನಮ್ಮ ತಪ್ಪಿನಿಂದ ಇಲ್ಲವೇ ಎದುರಿನವರ ತಪ್ಪಿನಿಂದ ಆಗಿ ಹೋಗುತ್ತವೆ. ನಾವು ಎಷ್ಟೇ ಜಾಗರೂಕವಾಗಿ ವಾಹನವನ್ನು ನಡೆಸಿದರೂ ಎದುರಿನವನು ಸಹ ಅಷ್ಟೇ ಜಾಗರೂಕರೂಕತನದಿಂದ ತನ್ನ ವಾಹನವನ್ನು ನಡೆಸಬೇಕು ಅಂದಾಗಲೇ ಅಪಘಾತಗಳು ಕಡಿಮೆಯಾಗುತ್ತವೆ. ಇನ್ನು ಕೆಲವೊಂದು ಸಲ ರಸ್ತೆಯ ಮೇಲೆ ಬೇಕಾಬಿಟ್ಟಿಯಾಗಿ ಓಡಾಡಿಕೊಂಡಿರುವ ಪ್ರಾಣಿಗಳ ತಾಪತ್ರಯದಿಂದಲೂ ಅಪಘಾತಗಳು ನಡೆದು ಹೋಗುತ್ತವೆ. ಉದಾಹರಣೆಗೆ ಹೇಳಬೇಕಾದರೆ ಬೀದಿಯ ಮೇಲಿನ ನಾಯಿ, ಹಂದಿ ಮತ್ತು ದನಗಳು ಅನೇಕ ಅಪಘಾತಗಳಿಗೆ ಕಾರಣವಾಗಿವೆ.
ಈಗ ಇಲ್ಲಿ ನೋಡಲಿರುವ ಒಂದು ಅಪಘಾತವು ಸಹ ನಾಯಿಯ ಕಾರಣದಿಂದಲೇ ಜರುಗಿದೆ. ನಾಯಿ ಹೆಚ್ಚಾಗಿ ಬೈಕ್ ಸವಾರರಿಗೆ ತುಂಬಾನೇ ಬೆನ್ನಟ್ಟುತ್ತವೆ. ಅವುಗಳಿಗೆ ಬೈಕ್ ಗಳು ಒಂದು ರೀತಿಯಲ್ಲಿ ಚಾಲೆಂಜ್ ಮಾಡಿದ ಹಾಗನಿಸುತ್ತದೆ. ಅನೇಕ ಬೈಕ್ ಸವಾರರು ನಾಯಿ ಬೆನ್ನಟ್ಟುತ್ತ ಬಂದ ಕ್ಷಣ ತಮ್ಮ ಬೈಕಿನ ವೇಗವನ್ನು ಒಮ್ಮೆಲೆ ಕಡಿಮೆ ಮಾಡುತ್ತಾರೆ. ಇದು ಅನುಭವಸ್ಥರ ಕೆಲಸ. ಇನ್ನು ಅನಾನುಭವಿಗಳು ಮತ್ತು ನಾಯಿಗೆ ಹೆದರುವವರು ಒಮ್ಮೆಲೆ ಬೈಕಿನ ವೇಗ ಶರವೇಗದಲ್ಲಿ ಹೆಚ್ಚಿಸುತ್ತಾರೆ. ಆಗ ಮುಂದೆ ನಡೆಯುವ ಘಟನೆಯ ಬಗ್ಗೆ ಸ್ವಲ್ಪವೂ ವಿಚಾರ ಮಾಡುವದಿಲ್ಲ. ಕೆಲವೊಂದು ಸಲ ನಾಯಿಗೆ ನೋಡಲು ಹೋಗಿ ನಾಯಿಯಿಂದ ರಕ್ಷಿಸಿಕೊಳ್ಳಲು ಬೈಕ್ ನಡೆಯುವತ್ತ ಮುಂದೆಯೇ ನೋಡುವದಿಲ್ಲ. ಅಂಥ ಸಂದರ್ಭದಲ್ಲಿ ಭಯಾನಕವಾದ ಹಾನಿಗೆ ಒಳಗಾಗಬೇಕಾಗುತ್ತದೆ. ಇಲ್ಲಿ ನಡೆದದ್ದು ಅದೇ. ನಾಯಿಯು ಬೆನ್ನಟ್ಟಲು ಅಥವಾ ಕಚ್ಚಲು ಬಂದಾಗ ಬೈಕ್ ಸವಾರ ಮುಂದಿನದನ್ನು ಯೋಚಿಸದೆ ಬೈಕ್ ವೇಗ ಹೆಚ್ಚಿದ್ದಾನೆ ಆಗ ಬೈಕ್ ಆತನ ಕಂಟ್ರೋಲ್ ನಿಂದ ಹಾರಿ ಮುಂದೆ ಇದ್ದ ಕಾರಿಗೆ ಡಮಾರ್ ಎಂದು ಡಿಕ್ಕಿ ಹೊಡೆದಿದೆ.
ನೋಡಿ ಈ ವಿಡಿಯೋ…
View this post on Instagram
ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ cutepuppy542 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಜನ ವೀಕ್ಷಿಸಿದ್ದಾರೆ. ಮತ್ತು ಲೈಕ್ಸ್ ಗಳ ಸುರಿಮಳೆಯನ್ನು ಮಾಡಿದ್ದಾರೆ.