ಇಂಥ ಪ್ರತಿಭೆ ದೂರವಿರುವದರಿಂದಲೇ ನಮ್ಮ ಬೆಂಗಳೂರ್ ಬುಲ್ಸ್ ಕಬಡ್ಡಿ ಗೆಲ್ಲುತ್ತಿಲ್ಲ; ಈತ ಮೊದಲು ಭರ್ತಿಯಾಗಲೇ ಬೇಕು! ನೋಡಿ ಈ ವೈರಲ್ ವಿಡಿಯೋ…

ಆಟಗಳು ಮನುಷ್ಯನ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಮೊದಲಿನಿಂದಲೂ ಆಟಗಳು ಮನುಷ್ಯನ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಆಟಗಳಿಂದ ಮನುಷ್ಯನಿಗೆ ದೈಹಿಕವಾಗಿ ಬಲವನ್ನು ನೀಡುವುದರ ಜೊತೆಗೆ ಮಾನಸಿಕವಾಗಿಯೂ ನೆಮ್ಮದಿ, ಸ್ಥೈರ್ಯ ನೀಡುತ್ತವೆ. ಪ್ರತಿಯೊಂದು ಆಟದಿಂದ ಮನುಷ್ಯನಿಗೆ ಏನಾದರೂ ಕಲಿಯಲು ಸಿಗುತ್ತದೆ. ಆಟವು ಬರೀ ಆಡುವವರಿಗಷ್ಟೆ ಅಲ್ಲ ನೋಡುವವರಿಗೂ ಅಸಾಮಾನ್ಯವಾದ ಆನಂದ ಸುಖವನ್ನು ನೀಡುತ್ತದೆ. ಆಟಗಳಲ್ಲಿ ಭಾಗವಹಿಸುವ ಆಟಗಾರರೂ ಅಷ್ಟೇ. ಆಟಕ್ಕೆ ಜೀವ ತುಂಬುವ ಕೆಲಸವನ್ನು ಮಾಡುತ್ತಾರೆ. ಆಟಗಳಲ್ಲಿ ನಡೆಯುವ ತಮಾಷೆಯ ಪ್ರಸಂಗಗಳು ಮೊದಲು ಅಲ್ಲಿ ನೋಡುವವರಷ್ಟೆ ಅನುಭವಿಸುತ್ತಿದ್ದರು. ಆದರೀಗ ಕ್ಯಾಮೆರಾ ಯುಗದಲ್ಲಿ ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಆಟಗಳಲ್ಲಿ ನಡೆದು ಹೋದ ಯಾವುದೇ ಪ್ರಸಂಗಗಳನ್ನು ಮತ್ತೆ ಮತ್ತೆ ನೋಡಬಹುದಾಗಿದೆ.

ಇದನ್ನೂ ಓದಿ: ಯೂಟ್ಯೂಬ್ ನಿಂದ ತಿಂಗಳಿಗೆ 15000 ರೂ. ಗಳಿಸಬೇಕಾದರೆ YouTube ಚಾನಲ್ ಗೆ ಸಬ್ ಸ್ಕ್ರೈಬರ್ ಎಷ್ಟಿರಬೇಕು?

ಸದ್ಯ ಕಬಡ್ಡಿ ಆಟದಲ್ಲಿ ನಡೆದ ಪ್ರಸಂಗದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ಅದನ್ನೇ ನಿಮಗಾಗಿ ಇಲ್ಲಿ ತಂದಿದ್ದೇವೆ.

ವಿಡಿಯೋದಲ್ಲಿ ಹಳ್ಳಿಯ ಆಟ ಕಬಡ್ಡಿ ಆಡುವುದು ನಡೆದಿದೆ. ಊರ ಅಭಿಮಾನಿಗಳು ಎಲ್ಲರೂ ಸುಟ್ಟುಗತ್ತಿ ನೋಡಲು ನಿಂತಿದ್ದಾರೆ. ಆಟಗಾರನೊಬ್ಬ ತುಂಬಾ ಜೋರಾದ ಬಿಲ್ಡಪ್ ಕೊಡುತ್ತಾ ಠೀವಿಯಲ್ಲಿ ಎದುರಿನ ತಂಡದ ಮೇಲೆ ಏರಿ ಬರುತ್ತಿದ್ದಾನೆ. ತಂಡದ ಜವಾಬ್ದಾರಿ ಎಲ್ಲವೂ ಆತನ ಮೇಲೆಯೇ ಇದೇ ಎಂಬ ಹಾಗಿದೆ ಆತನ ಸ್ಟೈಲ್.

ಆದರೆ ಪಾಪ ಅದೃಷ್ಟ ಸರಿಯಾದ ಸಮಯಕ್ಕೆ ಕೈ ಕೊಡಬೇಕೇ? ಆಟಗಾರ ಬಂದು ಇನ್ನೇನು ಕಾಲಿನಿಂದ ಜಿಗಿದು ಜೋರಾದ ಕಿಕ್ ಹೊಡೆದು ಒಬ್ಬನನ್ನಾದರೂ ಬಲಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಆತನೇ ಎದುರಿನ ತಂಡ ಆಟಗಾರನ ಕಾಲ್ಕೆಳಗೆ ಬ್ಯಾಲೆನ್ಸ್ ತಪ್ಪಿ ಹಠಾತ್ತನೆ ಬಿದ್ದು ತಾನೇ ಬಲಿಯಾಗಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by Surendar (@iamsurendar___)

ನೋಡಲು ತುಂಬಾ ತಮಾಷೆಯಾದ ಈ ವಿಡಿಯೋ iamsurendar ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ನೆಟಿಜನ್ಸ್ ಗಳಿಗೆ ಸಖತ್ತಾಗಿ ಇಷ್ಟವಾಗಿದ್ದು 1 ಮಿಲಿಯನ್ ಗಿಂತಲೂ ಹೆಚ್ಚು ಲೈಕ್ಸ್ ಗಳ ಸುರಿಮಳೆ ಮಾಡಿದ್ದಾರೆ.

ಇದನ್ನೂ ಓದಿ:

  1. Video; ಮಕ್ಕಳು ಸೂಪರ್ ಹಿಟ್ ಮೂವಿ ‘ಕಾಂತಾರ’ ವೀಕ್ಷಿಸುವಾಗ ನಡೆದ ವಿಡಿಯೋ ದೃಶ್ಯ ಒಮ್ಮೆ ನೋಡಿ…ಏನಾಗಿದೆ…
  2. Viral Video; ಛಳಿಯಿಂದ ಕೂಡಿದ ರಾತ್ರಿಯ ಮಂದ ಬೆಳಕಿನಲ್ಲಿ ಕ್ಲೈಮೇಟ್ ಗೆ ತಕ್ಕಂತೆ ಸೂಪರ್ ಹಿಟ್ ಹಾಡಿಗೆ ಸಿಂಪಲ್ ಹೆಜ್ಜೆ ಹಾಕಿದ ಯುವತಿ!
  3. ಇಂದಿನ ಶಾರ್ಟ್ ಬಟ್ ಸೂಪರ್ ಡಾನ್ಸ್! ಯುವತಿ ಮಾಡಿದಳು ಚಲಿಸುವ ಬಸ್ಸಿನಲ್ಲಿ ನೃತ್ಯ; ನಾಚಿ ನೀರಾದ ಹೆಂಗೆಳೆಯರು…