Articles

Video: ಯುವಕನ ಬ್ಯಾಕ್ ಫ್ಲಿಪ್ ಮಾಡುವದನ್ನು ಅನುಕರಣೆ ಮಾಡಿ ತಾನು ಬ್ಯಾಕ್ ಫ್ಲಿಪ್ ಮಾಡಿದ ಮಂಗ, ನಾನು ಎಲ್ಲದರಲ್ಲಿ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟ ಮಂಗ!!!!

ಸಾಮಾನ್ಯವಾಗಿ ಇಂದಿನ ಯುವ ಪೀಳಿಗೆಗೆ ಏನಾದರೂ ಹೊಸದು ಮಾಡುವದು ತುಂಬಾ ಇಷ್ಟವಾಗುತ್ತೆ. ಇಂದಿನ ಮೊಬೈಲ್ ಯುಗದಲ್ಲಿ ಎಷ್ಟೋ ಹುಡುಗರು ಅಥವಾ ಯುವಕರು ರೀಲ್ಸ್ ಮಾಡುವದರಲ್ಲಿ ತುಂಬಾನೇ ಬ್ಯುಸಿ ಇರುತ್ತಾರೆ. ಆದರೆ ಆ ರೀಲ್ಸ್ ಮಾಡಬೇಕಾದರೆ ಏನಾದರೂ ಹೊಸ ವಿಚಾರ ತೋರಿಸುವದು ಅತ್ಯವಶ್ಯಕವಾಗಿರುತ್ತದೆ. ಹೀಗಾಗಿ ಯುವಪೀಳಿಗೆ ಡ್ಯಾನ್ಸ್ ಮಾಡುವದು, ಕಸರತ್ತು ಮಾಡುವದು, ಏನಾದ್ರೂ ವಿಚಿತ್ರ ಜೋಕ್ಸ್ ಮಾಡುವರು. ಸದ್ಯಕ್ಕೆ ಒಬ್ಬ ಯುವಕ ತಾನು ರೀಲ್ಸ್ ಮಾಡುವ ಸಲುವಾಗಿ ಬ್ಯಾಕ್ ಫ್ಲಿಪ್ ಮಾಡುತ್ತಾನೆ ಆದರೆ ಆ ರೀಲ್ಸ್ ವೀಡಿಯೋ ಸದ್ಯಕ್ಕೆ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವೀಡಿಯೋ ಆತನ ಬ್ಯಾಕ್ ಫ್ಲಿಪ್ ನಿಂದಲ್ಲ ಹೊರತಾಗಿ ಅಲ್ಲ ಅಲ್ಲಿದ್ದ ಒಂದು ಮಂಗನಿಂದ ತುಂಬಾನೇ ವೈರಲ್ ಆಗುತ್ತಿದೆ ಅದು ಹೇಗೆ ಎಂಬುದು ನೋಡೋಣ ಬನ್ನಿ.

ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತಾನು ಬ್ಯಾಕ್ ಫ್ಲಿಪ್ ಮಾಡುತ್ತಾ ವೀಡಿಯೋ ರೆಕಾರ್ಡ್ ಮಾಡುತ್ತಿರುತ್ತಾನೆ ಅಷ್ಟರಲ್ಲಿ ಅವನಿಗೆ ಒಂದು ಮಂಗ ಕಾಣುತ್ತದೆ ಆಗ ರೆಕಾರ್ಡ್ ಮಾಡುವ ವ್ಯಕ್ತಿ ಈತನ ಬ್ಯಾಕ್ ಫ್ಲಿಪ್ ಮುಗಿಯುತ್ತಿದ್ದಂತೆ ಮಂಗನ ವಿಡಿಯೋ ಮಾಡುತ್ತಾನೆ. ಮೊದಲಿಗೆ ಈ ವ್ಯಕ್ತಿ ಒಂದು ಬ್ಯಾಕ್ ಫ್ಲಿಪ್ ಮಾಡುತ್ತಾನೆ ಆತನ ಹಿಂದೆ ದೂರದಿಂದ ಒಂದು ಮಂಗ ನಿಂತುಕೊಂಡು ಈತನು ಮಾಡುತ್ತಿರುವ ಕೃತಿಯನ್ನು ವೀಕ್ಷಣೆ ಮಾಡುತ್ತದೆ. ತದನಂತರ ಆ ಮಂಗ ವ್ಯಕ್ತಿಯ ಬ್ಯಾಕ್ ಫ್ಲಿಪ್ ಮುಗಿದ ಮೇಲೆ ಅದು ಸಹ ಬ್ಯಾಕ್ ಫ್ಲಿಪ್ ಮಾಡುತ್ತದೆ. ಅದು ಸಹ ಎರಡು ಬಾರಿ ಬ್ಯಾಕ್ ಫ್ಲಿಪ್ ಮಾಡುತ್ತದೆ. ಈ ಮಂಗನ ಬ್ಯಾಕ್ ಫ್ಲಿಪ್ ಮಾಡುವದನ್ನು ನೋಡಿದರೆ ವ್ಯಕ್ತಿಯಗಿಂತಲೂ ಮಂಗನೆ ಉತ್ತಮವಾಗಿ. ಬ್ಯಾಕ್ ಫ್ಲಿಪ್ ಮಾಡಿದ್ದು ನಿಮಗೆ ಕಂಡು ಬರುತ್ತದೆ. ಮಂಗ ಜಿಗಿಯುವದು, ಹಾರಡುವದನ್ನು ನೀವು ಸದಾ ನೋಡಿರುವಿರಿ ಸದ್ಯಕ್ಕೆ ಮಂಗನ ಬ್ಯಾಕ್ ಫ್ಲಿಪ್ ವೀಡಿಯೋ ನೋಡಿ.

ವೀಡಿಯೋ ನೋಡಿ.

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ successadictives ಎಂಬ ಹೆಸರಿನ ಅಕೌಂಟ್ ಮೂಲಕ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇದುವರೆಗೆ ಹತ್ತು ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸುಮಾರು ಮೂರು ಮಿಲಿಯನ್ ಗಿಂತಲೂ ಹೆಚ್ಚು ಜನರಿ ಲೈಕ್ಸ್ ಮಾಡಿದ್ದಾರೆ.

Leave a Comment

Your email address will not be published. Required fields are marked *