ಅರಣ್ಯದಲ್ಲಿ ಹೊರ ಹೊಮ್ಮುತ್ತಿದ್ದ ನೈಸರ್ಗಿಕವಾದ ನಿಗೂಢ ಶಬ್ದಕ್ಕೆ ಚಿರತೆ ಸ್ಪಂದಿಸಿದ ಬಗೆ ನೋಡಿ, ಈ ವಿಡಿಯೋದಲ್ಲಿ…

ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಜೀವನ ತುಂಬಾ ರಹಸ್ಯಮಯವಾಗಿದೆ. ಇದನ್ನು ತಿಳಿಯಲು ಹೋದಂತೆ ಅದರ ನಿಗೂಢತೆ ಇನ್ನಷ್ಟು ಹೆಚ್ಚುತ್ತ ಹೋಗುತ್ತದೆ. ಕಾಡಿನ ಜೀವನ ಅಂದುಕೊಂಡಷ್ಟು ಸರಳವಾಗಿಲ್ಲ. ಮೇಲ್ನೋಟಕ್ಕೆ ಅಲ್ಲಿರುವ ಎಲ್ಲ ಪ್ರಾಣಿಗಳು ಸ್ವಚ್ಚಂದವಾಗಿ, ಸ್ವತಂತ್ರವಾಗಿ ಮನುಷ್ಯನಿಂದ ದೂರ, ಮನಸ್ಸಿಗೆ ಬಂದ ಹಾಗೆ ಓಡಾಡಿಕೊಂಡು ಜೀವಿಸುತ್ತವೆ ಎಂದು ಕಂಡು ಬಂದರೂ ಅನೇಕ ಸಾಧು ಪ್ರಾಣಿಗಳಿಗೆ ಹೆಜ್ಜೆ ಹೆಜ್ಜೆಗೆ ಆತಂಕ, ಭಯ ಕಟ್ಟಿಟ್ಟ ಬುತ್ತಿ. ಸಾವು ಯಾವಾಗ, ಎಲ್ಲಿ, ಯಾವ ರೀತಿಯಲ್ಲಿ ಅವಿತುಕೊಂಡು ಕುಳಿತಿರುತ್ತದೆ ಎಂಬುದು ಹೇಳಲು ಸಾಧ್ಯವಿಲ್ಲ. ದಿನದ 24 ಗಂಟೆಗಳೂ ಸಹ ಮೈಯೆಲ್ಲಾ ಕಣ್ಣಾಗಿ ಸಂಚರಿಸಬೇಕಾಗುತ್ತದೆ ಇಲ್ಲಿಯ ಪ್ರಾಣಿಗಳು.

ವೇಗ ಮತ್ತು ಬೇಟೆಯಾಡುವುದರಲ್ಲಿ ಚಿರತೆಗೆ ಸ್ಪರ್ಧೆ ನೀಡುವ ಪ್ರಾಣಿಗಳು ಕಾಡಿನಲ್ಲಿ ಬೇರೊಂದಿಲ್ಲ. ಇಂಥ ಭಯಂಕರವಾದ ಪ್ರಾಣಿಯು ಸಹ ಕಾಡಿನಲ್ಲಿ ಹೊರಹೊಮ್ಮುವ ಶಬ್ದಕ್ಕೆ ಸ್ಪಂದಿಸಿದ ಬಗೆಯ ವಿಡಿಯೋ ಒಂದು ತುಂಬಾ ವಿಶೇಷವಾಗಿದೆ. ಕಾಡಿನಲ್ಲಿ ಕಿರುಗುಟ್ಟುತ್ತಿರುವ ಶಬ್ದಕ್ಕೆ ಚಿರತೆಯೊಂದು ಮೈಯೆಲ್ಲ ಕಣ್ಣಾಗಿ ಯಾವುದೋ ಆತಂಕ ತನ್ನೆದುರು ಸೃಷ್ಟಿಯಾಗಲಿದೆ ಎಂಬ ಭಯದಿಂದ ಒಂದೇ ಸವನೆ ಅತ್ತಿತ್ತ ನೋಡುತ್ತ ತುಂಬು ಜಾಗೃತೆಯಿಂದ ಸುತ್ತೆಲ್ಲ ದೃಷ್ಟಿ ಹಾಯಿಸುತ್ತಿದೆ. ಚಿರತೆಯ ಈ ಅದ್ಭುತ ಚಲನವಲನೆಯನ್ನು ಫೋಟೋಗ್ರಾಫರ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಚಿರತೆ ತಾನು ಸಂಚರಿಸುವ ದಾರಿಯಿಂದ ಬರುತ್ತಿರುವ ಶಬ್ದ ಕೇಳಿ ಚಿರತೆಗೆ ಏನೋ ಗಂಡಾಂತರ ಎದುರಾಗಲಿದೆ ಎಂದು ಭಾವಿಸಿ ಎರಡು ಹೆಜ್ಜೆ ಹಿಂದೆ ಸರಿದು ಬಾಗಿ ನೋಡಿ ನಂತರ ಇದರ ಗೊಡೆವೆಯೆ ಬೇಡ ಎಂದು ಅಲ್ಲಿಂದ ಕಾಲ್ಕಿತ್ತಿದೆ.

ನೋಡಿ ಈ ವಿಡಿಯೋ…

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ hitesh_solanki_143_ ಹೆಸರಿನಿಂದ ಶೇರ್ ಮಾಡಲಾಗಿದೆ.