ಒಂದೇ ಕ್ಷಣ ಮಹಿಳೆ ಕುಳಿತವಳು ನಿಂತಳು ಎದ್ದು ; ಮರುಕ್ಷಣವೇ ಪುಟ್ಟ ಮಗುವಿನಿಂದ ನಡೆಯಿತು ಅಚಾತುರ್ಯ! ನೋಡಿ ಈ ವಿಡಿಯೋದಲ್ಲಿ…
ಚಿಕ್ಕ ಮಕ್ಕಳು ತುಂಬಾ ತುಂಟವಾಗಿರುತ್ತವೆ. ಇದು ಮನೆಯಲ್ಲಿ ಮಕ್ಕಳಿದ್ದವರೆಲ್ಲರಿಗೂ ಅನುಭವಕ್ಕೆ ಬಂದಿರುವಂತದ್ದು. ಎಷ್ಟೋ ಸಲ ಮಕ್ಕಳು ನಾವೆಂದೂ ಯೋಚಿಸದ ಕೃತ್ಯಗಳನ್ನು ಮಾಡಿಬಿಟ್ಟಿರುತ್ತಾರೆ. ಅನೇಕ ಸಲ ಮಕ್ಕಳು ಮಾಡಿದ ತುಂಟತನವು ದೊಡ್ಡವರಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿರುತ್ತದೆ. ಚಿಕ್ಕ ಮಕ್ಕಳು ಒಮ್ಮೆ ನಡೆಯಲು ಶುರು ಮಾಡಿದರೆ ಅವರೆಂದೂ ಒಂದು ಸ್ಥಳಕ್ಕೆ ಕುಳಿತುಕೊಳ್ಳುವುದಿಲ್ಲ. ಅಂಥ ಸಂದರ್ಭದಲ್ಲಿ ಪಾಲಕರ ಜವಾಬ್ದಾರಿ ಹೆಚ್ಚುವುದರೊಂದಿಗೆ ಮಕ್ಕಳನ್ನು ಕಂಟ್ರೋಲ್ ಮಾಡುವುದರಲ್ಲಿಯೇ ಪೋಷಕರಿಗೆ ಸಾಕಾಗಿ ಹೋಗುತ್ತದೆ.
ಈಗ ಸೋಶಿಯಲ್ ಮೀಡಿಯಾದಲ್ಲಿ ಪುಟ್ಟ ಮಗುವಿನ ವಿಡಿಯೋ ಒಂದು ಜೋರಾಗಿಯೇ ವೈರಲ್ ಆಗುತ್ತಿದೆ. ಈ ಮಗು ಮಾಡಿದ ಕೃತ್ಯವನ್ನು ನೋಡಿ ನೀವು ಬಿದ್ದು ಬಿದ್ದು ನಗುತ್ತೀರಿ. ಕಾರಣ ಮಗುವಿನ ಈ ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ. ಈ ಮಗು ಮಾಡಿದ ಮುಗ್ಧ ಕೃತ್ಯದಿಂದ ಮಹಿಳೆಯೊಬ್ಬಳು ನೆಲದ ಮೇಲೆ ಕುಸಿದು ಬಿದ್ದಿದ್ದಾಳೆ.
ಒಂದು ರೆಸ್ಟೋರೆಂಟ್ ನಲ್ಲಿ ಫ್ಯಾಮಿಲಿ ಮೆಂಬರ್ಸ್ ಎಲ್ಲರೂ ಕೂಡಿ ಊಟ ಮಾಡುತ್ತಿರುವದು ವಿಡಿಯೋದಲ್ಲಿ ಕಂಡುಬರುತ್ತಿದೆ. ಈ ಕುಟುಂಬದ ಜೊತೆಗೆ ಪುಟ್ಟ ಮಗುವು ಬಂದಿದೆ. ವಾಕರ್ ಸಹಾಯದಿಂದ ಆ ಪುಟ್ಟ ಮಗು ಇತ್ತಿಂದತ್ತ ಅತ್ತಿಂದಿತ್ತ ಎಲ್ಲ ಕಡೆಗೆ ಓಡಾಡುತ್ತಿದೆ. ಹೀಗೆ ಓಡಾಡುವಾಗ ಮಹಿಳೆಯೊಬ್ಬಳು ತಾನು ಕುಳಿತ ಸ್ಟೂಲ್ ಬಿಟ್ಟು ಏನಾದರೂ ಆಹಾರ ಪದಾರ್ಥವನ್ನು ತೆಗೆದುಕೊಳ್ಳಲು ಒಂದು ಕ್ಷಣ ಎದ್ದು ನಿಲ್ಲುತ್ತಾಳೆ. ಏತನ್ಮಧ್ಯೆ ವಾಕರ್ ಸಹಾಯದಿಂದ ತಿರುಗಾಡುತ್ತಿರುವ ಪುಟ್ಟಮಗು ಮಹಿಳೆಯು ಕುಳಿತ ಸ್ಟೂಲ್ ತೆಗೆದುಕೊಂಡು ಮುಂದೆ ಹೋಗುತ್ತದೆ. ನಂತರ ಮಹಿಳೆಯು ಸಹಜವಾಗಿಯೇ ತನ್ನ ಹಿಂದೆ ಸ್ಕೂಲ್ ಇದೆಯೆಂದು ತಿಳಿದು ಕುಳಿತು ಕೊಳ್ಳಲು ಹೋದಾಗ ಮಹಿಳೆ ದೊಪ್ಪನೆ ನೆಲಕ್ಕೆ ಬಿದ್ದು ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.
ಪುಟ್ಟ ಮಗು ಆಡುತ್ತಾ ಆಡುತ್ತಾ ಮಹಿಳೆ ಕುಳಿತ ಸ್ಟೂಲ್ ತೆಗೆದುಕೊಂಡು ಹೋಗಿರುವದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡು ಬಂದಿದೆ. ಈ ಕೃತ್ಯವು ಮಗು ಬೇಕೆಂತಲೇ ಮಾಡಿಲ್ಲ. ಆಟದ ಮೂಡ್ನಲ್ಲಿ ತನ್ನಷ್ಟಕ್ಕೆ ತಾನು ಹೀಗೆ ಮಾಡಿದೆ ಎಂಬುದು ವಿಡಿಯೋದಿಂದ ಗೊತ್ತಾಗುತ್ತದೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಂ ನಲ್ಲಿ cute_baby_reel ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ತುಂಬಾ ವೇಗದಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.